ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಮಹಿಳಾ ಅಧಿಕಾರಿ ಬಿ ಬಿ. ಕಾವೇರಿ ಅಸ್ವಸ್ಥರಾದ ಘಟನೆ ನಡೆದಿದೆ.
ಶಿವಮೊಗ್ಗ (ನ.30): ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಮಹಿಳಾ ಅಧಿಕಾರಿ ಬಿ ಬಿ. ಕಾವೇರಿ ಅಸ್ವಸ್ಥರಾದ ಘಟನೆ ನಡೆದಿದೆ.
ಇಂದು ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿದ್ದರಿಂದ ಸಭೆಗೆ ಹಾಜರಾಗಿದ್ದ ಮಹಿಳಾ ಅಧಿಕಾರಿ. ಸಭೆ ನಡೆಯುತ್ತಿರುವಾಗಲೇ ದಿಡೀರ್ ಕುಳಿತ ಆಸನದಲ್ಲಿ ನಿತ್ರಾಣಗೊಂಡು ಕಣ್ಣುಮುಚ್ಚಿದ ಅಧಿಕಾರಿ ಕಾವೇರಿ. ಈ ಘಟನೆಯಿಂದ ಕೆಲಕಾಲ ಸಭೆಯಲ್ಲಿ ಗಾಬರಿ ಹುಟ್ಟಿಸಿತು. ಇದೇ ವೇಳೆ ಸಭೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಹಾಗೂ ವೈದ್ಯರಾದ ಧನಂಜಯ ಸರ್ಜಿ ನೆರವಿಗೆ ಧಾವಿಸಿದರು. ವಾಂತಿ, ತಲೆಸುತ್ತು ಬಂದಂತಾಗಿದ್ದರಿಂದ ತಕ್ಷಣವೇ ವೈದ್ಯ ಧನಂಜಯ್ ಸರ್ಜಿ ಆರೈಕೆಗೆ ಮುಂದಾದರು.
ಸೋತ ನೆಲದಲ್ಲೇ ಗೆಲ್ತೇನೆ, ಅಲ್ಲಿವರೆಗೆ ಸುಮ್ಮನೆ ಕೂರೊಲ್ಲ: ನಿಖಿಲ್ ಕುಮಾರಸ್ವಾಮಿ ಶಪಥ!
ಬಳಿಕ ಸಭೆಯಿಂದ ಅವರನ್ನು ಹೊರಗಡೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅನಂತರವೇ ಸುಧಾರಿಸಿಕೊಂಡರು. 'ಫುಡ್ ಪಾಯ್ಸನಿಂಗ್ ಆದ ಹಿನ್ನೆಲೆ ಮಹಿಳಾ ಅಧಿಕಾರಿ ಕಾವೇರಿ ಮೇಡಂ ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗ ಬೇಕಿದ್ದ ಜಿಪಂ ಕೆಡಿಪಿ ಸಭೆ ಮಧ್ಯಾಹ್ನ 1.30 ರ ವೇಳೆಗೆ ಆರಂಭಗೊಂಡಿತ್ತು.