ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಕನ್ನಡ ಭಾಷೆಗೆ ಅನುವಾದಗೊಳ್ಳಲಿದೆಯೇ?

Ravi Janekal   | Kannada Prabha
Published : Nov 19, 2026, 02:20 PM ISTUpdated : Nov 19, 2026, 02:32 PM IST
Sonia Gandhi s autobiography

ಸಾರಾಂಶ

ಸೋನಿಯಾಗಾಂಧಿ ಅವರ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಲು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್‌ ಮನವಿ ಮಾಡಿದ್ದಾರೆ. ಕನ್ನಡಿಗರಿಗೆ ಮಾತೃಭಾಷೆಯಲ್ಲೇ ಈ ಕೃತಿಯನ್ನು ತಲುಪಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮೈಸೂರು (ನ.19): ರಾಷ್ಟ್ರೀಯ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯನ್ನು ಅವರ ಅನುಮತಿ ಪಡೆದು, ತಕ್ಷಣವೇ ಕನ್ನಡಕ್ಕೆ ಅನುವಾದಿಸಲು ಮುಂದಾಗಬೇಕೆಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್‌, ಕಾಂಗ್ರೆಸ್‌ ಪಕ್ಷ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: BK Hariprasad: ಪಂಚಾಯ್ತಿ ಸ್ಥಾನವನ್ನೂ ಬಿಟ್ಟುಕೊಡದ ಕಾಲದಲ್ಲಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಮಹಾನ್ ನಾಯಕಿ ಸೋನಿಯಾ ಗಾಂಧಿ:

ಕನ್ನಡಿಗರಿಗೆ ಮಾತೃಭಾಷೆಯಲ್ಲೇ ಓದಲು ಸಿಗಬೇಕು

ಸೋನಿಯಾ ಅವರ ಕೃತಿಯು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಸೋನಿಯಾ ಅವರು ಇಂಗ್ಲೀಷ್‌ನಲ್ಲಿ ತಮ್ಮ ಆತ್ಮಕತೆಯನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಇದನ್ನು ಕರ್ನಾಟಕ ರಾಜ್ಯದ ಜನತೆಗೆ ಅವರ ಮೂಲಭಾಷೆಯಾಗಿರುವ ಕನ್ನಡದಲ್ಲಿ ತಲುಪಿಸಬೇಕಾದ ಜವಾಬ್ದಾರಿಯನ್ನು ಪ್ರದೇಶ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ ವಹಿಸಿಕೊಳ್ಳಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: Belonging: A Journey Of Love: ಐದನೇ ಸಾಲಿಗೆ ಕುಳಿತಿದ್ದ ಅಸಲಿ ಕಾರಣ ಬಿಚ್ಚಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ!

ಅವರು ಈ ಕೃತಿಯಲ್ಲಿ ತಮ್ಮ ಭಾನಾತ್ಮಕ ಪ್ರೇಮಯಾನ, ಕೌಟುಂಬಿಕ ಜೀವನ, ಸಾರ್ವಜನಿಕ ಜೀವನ, ಜನಪರ ನಿಲುವುಗಳನ್ನು ತಳೆಯಲು ಪ್ರೇರೇಪಣೆ ನೀಡಿದ್ದು, ಮುಂತಾದ ಅಂಶಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.

ಒಂದೇ ವಾರದಲ್ಲಿ ಎರಡು ಲಕ್ಷ ಪ್ರತಿ ಮಾರಾಟವಾಗಿ ದಾಖಲೆ

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi)ಯವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’(Belonging: A Journey Of Love) ಅಧಿಕೃತ ಬಿಡುಗಡೆ ಸಮಾರಂಭ ಸೋಮವಾರ ದೆಹಲಿಯಲ್ಲಿ ನಡೆಯಿತು. ವಿಶೇಷವೆಂದರೆ ನ.10ರಂದು ಮಾರುಕಟ್ಟೆಗೆ ಬಂದ ಕೃತಿಯ ಒಂದೇ ವಾರದಲ್ಲಿ ಸುಮಾರು 2 ಲಕ್ಷ (200,000) ಪ್ರತಿಗಳಿಗೂ ಹೆಚ್ಚು ಮಾರಾಟವಾಗಿವೆ. ಈ ಮೂಲಕ ಪ್ರಕಾಶನ ಸಂಸ್ಥೆಗೆ ಒಂದೇ ವಾರದಲ್ಲಿ ಸುಮಾರು 20 ಕೋಟಿ ರು. ಆದಾಯ ಹರಿದುಬಂದಿತು. ಇದೀಗ ಬಿಲಾಂಗಿಂಗ್ ಪುಸ್ತಕ ಬೆಸ್ಟ್ ಸೆಲ್ಲರ್ ಟಾಪ್‌ ನಲ್ಲಿದೆ. ಪ್ರತಿಗಳು ದಿನದಿಂದ ದಿನಕ್ಕೆ ಹೆಚ್ಚು ಮಾರಾಟವಾಗುತ್ತಿವೆ. ಇನ್ನು ಇದು ಕನ್ನಡ ಅಥವಾ ಇತರೆ ಪ್ರಾದೇಶಿಕ ಭಾಷೆಗಳಿಗೆ ಅನುವಾದಗೊಂಡರೆ ಓದುಗರ ಸಂಖ್ಯೆಯೂ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಸವ ಮಂಟಪ ಪುಸ್ತಕ ವಿವಾದ: ಲೇಖಕ ರವಿ ಹಂಜ್ ವಿರುದ್ಧ ಎಂಬಿ ಪಾಟೀಲ್ ಕೆಂಡಾಮಂಡಲ! 600 ಪುಟಗಳ ಕೃತಿಯಲ್ಲೇನಿದೆ?
'ಗಂಗಾ'ದಲ್ಲಿಂದು ಸಚಿವರು, ಶಾಸಕರಿಗೆ ಸಿಎಂ ಔತಣಕೂಟ: ಇಂದಿನ ಸಂಪುಟ ಸಭೆಯ ಸಮಯ ಬದಲು!