'ಗಂಗಾ'ದಲ್ಲಿಂದು ಸಚಿವರು, ಶಾಸಕರಿಗೆ ಸಿಎಂ ಔತಣಕೂಟ: ಇಂದಿನ ಸಂಪುಟ ಸಭೆಯ ಸಮಯ ಬದಲು!

Kannadaprabha News   | Kannada Prabha
Published : Nov 19, 2026, 10:48 AM IST
CM residence gangaa

ಸಾರಾಂಶ

Ganga residence Kumarakrupa road ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಮಾರಕೃಪ ರಸ್ತೆಯ ತಮ್ಮ ನೂತನ ಅಧಿಕೃತ ನಿವಾಸ 'ಗಂಗಾ'ದಲ್ಲಿ 500 ಗಣ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ಸಮಯವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ.

ಬೆಂಗಳೂರು(ನ.19): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌(CM DK Shivakumar) ಅವರು ‘ಕುಮಾರಕೃಪ’ ರಸ್ತೆ(Kumarakrupa Rd)ಯಲ್ಲಿರುವ ತಮ್ಮ ನೂತನ ಅಧಿಕೃತ ನಿವಾಸ ‘ಗಂಗಾ’(Ganga)ದಲ್ಲಿ ಸಂಪುಟ ಸಚಿವರು, ಸರ್ವಪಕ್ಷಗಳ ಶಾಸಕರು, ಸಂಸದರು, ಪರಿಷತ್‌ ಸದಸ್ಯರು ಸೇರಿ 500 ಮಂದಿಗೆ ಗುರುವಾರ ಔತಣಕೂಟ ಏರ್ಪಡಿಸಿದ್ದಾರೆ.

ಔತಣಕೂಟದಲ್ಲಿ ಯಾರಾರು ಭಾಗಿ, ಎಷ್ಟು ಜನರಿಗೆ ಅವಕಾಶ?

ಸೋಮವಾರವಷ್ಟೇ ‘ಗಂಗಾ’ದಲ್ಲಿ ಸಿಎಂ ಖಾಸಗಿಯಾಗಿ ಪೂಜೆ ನೆರವೇರಿಸಿ ಅಧಿಕೃತವಾಗಿ ಪ್ರವೇಶಿಸಿದ್ದರು. ರಾಜ್ಯದ 224 ಶಾಸಕರು, 70ಕ್ಕೂ ಹೆಚ್ಚು ಮಂದಿ ಪರಿಷತ್‌ ಸದಸ್ಯರು, 41 ಜನ ಸಂಸದರು ಮತ್ತು ರಾಜ್ಯಸಭೆ ಸದಸ್ಯರು, 30 ಜನ ಕಾಂಗ್ರೆಸ್‌ ಮುಖಂಡರು, ಆಯ್ದ 30 ನಿಗಮ-ಮಂಡಳಿಗಳ ಅಧ್ಯಕ್ಷರು, 30 ಜನ ಕಾಂಗ್ರೆಸ್‌ ಮುಂಚೂಣಿ ಘಟಕಗಳ ಪದಾಧಿಕಾರಿಗಳು, 2023ರ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸೇರಿ ಒಟ್ಟು 500 ಜನರಿಗೆ ಔತಣಕೂಟ ಆಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟ ಸಭೆ ಸಮಯ ಬದಲು

ಈ ಮೊದಲು ನ.19 ರಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಸಲು ಸಮಯ ನಿಗದಿಯಾಗಿತ್ತು. ಇದೀಗ 12.30 ಗಂಟೆಗೆ ಔತಣ ಕೂಟ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ. ಸಚಿವರು ಔತಣ ಕೂಟ ಮುಗಿಸಿಕೊಂಡು ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka Latest News Live: 'ಗಂಗಾ'ದಲ್ಲಿಂದು ಸಚಿವರು, ಶಾಸಕರಿಗೆ ಸಿಎಂ ಔತಣಕೂಟ - ಇಂದಿನ ಸಂಪುಟ ಸಭೆಯ ಸಮಯ ಬದಲು!
ಬಳ್ಳಾರಿಯಲ್ಲಿ ಅಳಿವಿನಂಚಿನ ಅಪರೂಪದ ಹೆಬ್ಬಾಕ ಪಕ್ಷಿಗಳ ಸಂರಕ್ಷಣೆಗೆ ಹೈಕೋರ್ಟ್ ಮಹತ್ವದ ನಿರ್ದೇಶನ.