ಸಿಲಿಕಾನ್ ಸಿಟಿಯಲ್ಲಿ ಮೊದಲ ಬಾರಿ ಅಪ್ಪೆಮಿಡಿ ಮೇಳ!

Published : Apr 10, 2023, 11:45 PM IST
ಸಿಲಿಕಾನ್ ಸಿಟಿಯಲ್ಲಿ ಮೊದಲ ಬಾರಿ ಅಪ್ಪೆಮಿಡಿ ಮೇಳ!

ಸಾರಾಂಶ

ಬೇಸಿಗೆ ಕಾಲ ಬಂತಂದ್ರೆ ಮಾವಿನಕಾಯಿ ನೆನಪಾಗುತ್ತೆ. ಅದ್ರಲ್ಲು ಅಪ್ಪೆಮಿಡಿ ಉಪ್ಪಿನಕಾಯಿ ಜನರ ಬಾಯಲ್ಲಿ‌ ನೀರೂರಿಸುತ್ತೆ. ಇದೀಗ ಮಲೆನಾಡಿನಲ್ಲಿ ದೊರೆಯುವ ‘ಅಪ್ಪೆಮಿಡಿ’ ಗಳನ್ನು ನಾಡಿನ ಜನರಿಗೆ ಅದರಲ್ಲೂ ರೈತರಿಗೆ ಪರಿಚಯಿಸಲು ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (IIHR)ಮುಂದಾಗಿದೆ.

ಬೆಂಗಳೂರು (ಏ10); ಬೇಸಿಗೆ ಕಾಲ ಬಂತಂದ್ರೆ ಮಾವಿನಕಾಯಿ ನೆನಪಾಗುತ್ತೆ. ಅದ್ರಲ್ಲು ಅಪ್ಪೆಮಿಡಿ ಉಪ್ಪಿನಕಾಯಿ ಜನರ ಬಾಯಲ್ಲಿ‌ ನೀರೂರಿಸುತ್ತೆ. ಇದೀಗ ಮಲೆನಾಡಿನಲ್ಲಿ ದೊರೆಯುವ ‘ಅಪ್ಪೆಮಿಡಿ’ ಗಳನ್ನು ನಾಡಿನ ಜನರಿಗೆ ಅದರಲ್ಲೂ ರೈತರಿಗೆ ಪರಿಚಯಿಸಲು ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (IIHR)ಮುಂದಾಗಿದೆ.
ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಮೊಟ್ಟ ಮೊದಲ ಬಾರಿಗೆ ‘ಅಪ್ಪೆಮಿಡಿ’ ಮೇಳವನ್ನು ಏಪ್ರಿಲ್ 12 ಮತ್ತು 13ರಂದು ಆಯೋಜಿಸಿದೆ.

ಅಪ್ಪೆ ಮಿಡಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಶಿರಸಿ, ಸಾಗರ, ಸಿದ್ದಾಪುರ, ತೀರ್ಥಹಳ್ಳಿ, ಕುಮಟಾ, ಹೊನ್ನಾವರ, ಸಕಲೇಶಪುರ, ಕೊಡಗು ಮತ್ತು ಚಿಕ್ಕಮಗಳೂರು ಮೊದಲಾದ ಕಡೆ ಬೆಳೆಯುವ ಮಾವಿನ ಸಾಂಪ್ರದಾಯಿಕ ಉಪ್ಪಿನಕಾಯಿ ಪ್ರಬೇದ. ಅಂದ ಹಾಗೆ ಅಪ್ಪೆಮಿಡಿ’ ಮೇಳದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಪ್ಪೆಮಿಡಿಗಳನ್ನು ಮಾರಾಟ ಸಹ ಮಾಡಲಾಗುತ್ತದೆ. ಅಲ್ಲದೆ, ಅಪ್ಪೆಮಿಡಿ ಸೇರಿ ಹಲವು ಮಾವಿನ ತಳಿಗಳ ಸಸಿಗಳು ಸಹ ಈ ಮೇಳದಲ್ಲಿ ಸಿಗಲಿವೆ. ಜೊತೆಗೆ ರಸಭರಿತ ಮಾವಿನ ಹಣ್ಣು ಕೂಡ ಸಿಗಲಿದೆ.

150 ಕ್ಕೂ ಹೆಚ್ಚು ಅಪ್ಪೆ ಮಿಡಿ ಸಂಶೋಧಿಸಿದ ಸಾಗರ ತಾಲೂಕು ಬೇಳೂರಿನ ಕೃಷಿಕ ಸುಬ್ಬಣ್ಣ ಹೆಗಡೆ

ಮೇಳದಲ್ಲಿ 100 ತಳಿಗಳ ಮಾವಿನ ಕಾಯಿ ಮತ್ತು ಹಣ್ಣುಗಳನ್ನು ಪ್ರದರ್ಶಿಸಲಾಗುತ್ತದೆ. ಸರಿಸುಮಾರು 250ಕ್ಕೂ ಹೆಚ್ಚು ತಳಿಗಳಿವೆ. ಈ ಪೈಕಿ ಐಐಎಚ್ಆರ್ನಿಂದ 100 ಅಪ್ಪೆಮಿಡಿ ತಳಿಗಳನ್ನು ಸಂಗ್ರಹಿಸಲಾಗಿದ್ದು, ಈ ತಳಿಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ. ಉಪ್ಪಿನಕಾಯಿಗಳನ್ನು ಸಹ ಪ್ರದರ್ಶಿಸಿ, ಮಾರಾಟ ಮಾಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್