ಯಾರು ಬೇಕಿದ್ದರೂ ಕೃಷಿ ಭೂಮಿ ಖರೀ​ದಿ​ಸ​ಬ​ಹು​ದು: ಸುಗ್ರೀವಾಜ್ಞೆಗೆ ರಾಜ್ಯಪಾಲ ಅಂಕಿತ!

Published : Jul 14, 2020, 07:55 AM ISTUpdated : Jul 14, 2020, 09:10 AM IST
ಯಾರು ಬೇಕಿದ್ದರೂ ಕೃಷಿ ಭೂಮಿ ಖರೀ​ದಿ​ಸ​ಬ​ಹು​ದು: ಸುಗ್ರೀವಾಜ್ಞೆಗೆ ರಾಜ್ಯಪಾಲ ಅಂಕಿತ!

ಸಾರಾಂಶ

ಯಾರು ಬೇಕಿದ್ದರೂ ಕೃಷಿ ಭೂಮಿ ಖರೀ​ದಿ​ಸ​ಬ​ಹು​ದು| ಕರ್ನಾಟಕ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯ​ಪಾಲ ಅಂಕಿತ| ಇನ್ಮುಂದೆ ಆದಾಯ ಮಿತಿಯಿಲ್ಲದೆ ಕೃಷಿಕರಲ್ಲದವರೂ ಭೂಮಿ ಖರೀದಿಸಲು ಸಾಧ್ಯ| 

ಬೆಂಗಳೂರು(ಜು.14): ವಿರೋಧಪಕ್ಷಗಳು ಹಾಗೂ ರೈತ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರಲು ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲ ವಿ.ಆರ್‌. ವಾಲಾ ಅಂಕಿತ ಹಾಕಿದ್ದಾರೆ.

ರಾಜ್ಯದಲ್ಲಿ ಕೃಷಿ ಜಮೀನು ಖರೀದಿಸಲು ಜಾರಿಯಲ್ಲಿದ್ದ ಮೂರು ನಿರ್ಬಂಧಗಳನ್ನು ತೆಗೆದುಹಾಕಿದ ತಿದ್ದುಪಡಿ ಕಾಯಿದೆಗೆ ಅನುಮೋದನೆ ದೊರೆತಿದೆ. ಹೀಗಾಗಿ ಇನ್ನು ಮುಂದೆ ಯಾವುದೇ ಆದಾಯ ಮಿತಿ ಇಲ್ಲದೆ ಹಾಗೂ ಕೃಷಿ ಕುಟುಂಬದ ಹಿನ್ನೆಲೆ ಹೊಂದಿಲ್ಲದವರೂ ಸಹ ಕೃಷಿ ಜಮೀನು ಖರೀದಿ ಮಾಡಬಹುದು.

ಸೆಪ್ಟೆಂಬರ್ ಮೊದಲ ವಾರದಲ್ಲಿ ಕೃಷಿ ವಿವಿ ತರಗತಿಗಳು ಆರಂಭ

1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಪ್ರಕಾರ ಈವರೆಗೆ ಕೃಷಿಕರು, ಕೃಷಿ ಮೂಲದ ಕುಟುಂಬದವರು ಮಾತ್ರ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸಲು ಸಾಧ್ಯವಿತ್ತು. ಕೃಷಿಕರಲ್ಲದವರು ಕೃಷಿ ಮಾಡಲು ಆಸಕ್ತಿ ಹೊಂದಿದ್ದರೂ ಕೃಷಿ ಭೂಮಿ ಖರೀದಿಸಲು ಕಾಯ್ದೆಯಲ್ಲಿ ಅವಕಾಶವಿರಲಿಲ್ಲ. ಇಂತಹವರಿಗೆ ಅವಕಾಶ ಮಾಡಿಕೊಡಲು ಕೇವಲ ಕೃಷಿ ಸಂಬಂಧಿ ಚಟುವಟಿಕೆಗೆ ಮಾತ್ರ ಬಳಸುವ ಷರತ್ತು ವಿಧಿಸಿ ಯಾರು ಬೇಕಾದರೂ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಉಳಿಮೆ ಮಾಡದೆ ಬೀಳು ಬಿದ್ದಿರುವ ಲಕ್ಷಾಂತರ ಎಕರೆಯಲ್ಲಿ ಕೃಷಿ ಚಟುವಟಿಕೆ ಶುರುವಾಗಲಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಇದಕ್ಕೆ ವಿರೋಧಪಕ್ಷಗಳು ಹಾಗೂ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ತಿದ್ದುಪಡಿಯ ನಂತರ ಧನವಂತರು ಕೃಷಿ ಭೂಮಿ ಖರೀದಿಸಿ ಕ್ರಮೇಣ ರಿಯಲ್‌ ಎಸ್ಟೇಟ್‌ ಮುಂತಾದ ಅನ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.

ಏನಿದು ಕಾಯಿದೆ ತಿದ್ದುಪಡಿ?

ಭೂ ಸುಧಾರಣೆ ಕಾಯ್ದೆಯಡಿ ಜಾರಿಯಲ್ಲಿರುವ 63ಎ, 79ಎ ಹಾಗೂ ಬಿ ಸೆಕ್ಷನ್‌ ಪ್ರಕಾರ ರೈತ ಹಿನ್ನೆಲೆ ಹೊಂದಿಲ್ಲದವರು ಹಾಗೂ ನಿರ್ದಿಷ್ಟಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಕೃಷಿ ಜಮೀನು ಖರೀದಿಸಲು ಅವಕಾಶ ಇರಲಿಲ್ಲ. ಇದೀಗ ಮೂರು ಸೆಕ್ಷನ್‌ ರದ್ದುಪಡಿಸಿದ್ದು, ಇನ್ನು ಮುಂದೆ ಒಂದೇ ಕುಟುಂಬದಲ್ಲಿ 5 ಸದಸ್ಯರು ಇದ್ದರೆ 108 ಎಕರೆಗಿಂತ ಹೆಚ್ಚು ಜಮೀನು ಖರೀದಿಸುವಂತಿಲ್ಲ ಎಂದು ಮಾಡಲಾಗಿದೆ.

ಬೆಂಗ್ಳೂರು ಬಿಟ್ಟು ಹಳ್ಳಿ ಸೇರಿ ನೇಗಿಲು ಹಿಡಿದ ಮಾಜಿ ಶಾಸಕ..!

ಸರ್ಕಾರದ ವಾದವೇನು?

ಇತ್ತೀಚೆಗೆ ಐಟಿ-ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಜತೆಗೆ ನಮ್ಮ ರಾಜ್ಯದಲ್ಲಿ ಹೊರತುಪಡಿಸಿ ಬೇರೆಲ್ಲೂ ಕೃಷಿ ಭೂಮಿ ಖರೀದಿಗೆ ಇಂತಹ ನಿರ್ಬಂಧವಿಲ್ಲ. ರಾಜ್ಯದಲ್ಲಿನ ನಿರ್ಬಂಧದಿಂದಾಗಿ ನೆರೆ ರಾಜ್ಯದಲ್ಲಿ ಭೂಮಿ ಖರೀದಿಸುತ್ತಿದ್ದಾರೆ. 79 ಎ, ಬಿನಲ್ಲಿ ಅನಗತ್ಯವಾಗಿ 83,174 ಪ್ರಕರಣಗಳು ದಾಖಲಾಗಿದ್ದವು. ಶೇ.1ರಷ್ಟುಸಹ ಸರ್ಕಾರದಿಂದ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯದಲ್ಲಿಯೇ ಭೂಮಿ ಖರೀದಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂಬುದು ಸರ್ಕಾರದ ವಾದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ - ಸಿಎಂ ಡಿಸಿಎಂ