ಪಿಎ​ಸ್‌ಐ ಪರೀಕ್ಷೆ ಅಕ್ರಮ: ಮತ್ತೊಬ್ಬ ಅಭ್ಯರ್ಥಿ ಬಂಧನ

Published : Apr 27, 2022, 06:33 AM IST
ಪಿಎ​ಸ್‌ಐ ಪರೀಕ್ಷೆ ಅಕ್ರಮ: ಮತ್ತೊಬ್ಬ ಅಭ್ಯರ್ಥಿ ಬಂಧನ

ಸಾರಾಂಶ

*  ಬೆಂಗಳೂರಿನಲ್ಲಿ ದಾಖಲೆ ಪರಿಶೀಲನೆ ವೇಳೆ ಬಂಧನ *  ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ನ ಫಲಾನುಭವಿಯಾಗಿದ್ದ ಸುನೀಲ್‌ *  ನಂತರ ಕಲಬುರಗಿಗೆ ಕರೆತಂದ ಸಿಐಡಿ ತಂಡ  

ಕಲಬುರಗಿ(ಏ.27):  ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ(PSI Recruitment Scam) ನಡೆದಿದೆ ಎನ್ನಲಾಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಿಐಡಿ ಪೊಲೀಸರು(CID Police) ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ನಗರ ನಿವಾಸಿ ಎನ್‌.ವಿ.ಸುನೀಲ್‌ ಕುಮಾರ್‌(NV Sunil Kumar) ಬಂಧಿತ. ಈ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್‌ ಉಪಕರಣ ಬಳಸಿ ಅಕ್ರಮವೆಸಗಿರುವ ಆರೋಪ ಮತ್ತು ಹಗರಣದಲ್ಲಿ ಬಂಧಿತನಾಗಿರುವ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ಗೆ 40 ಲಕ್ಷ ರು. ನೀಡಿರುವ ಬಗ್ಗೆ ಶಂಕೆಯಿದೆ.

ಅಕ್ರಮಕ್ಕೆ ಸಂಬಂಧಿಸಿದಂತೆ ಒಎಂಆರ್‌ ಶೀಟ್‌, ಹಾಲ್‌ಟಿಕೆಟ್‌ ಮತ್ತಿತರ ದಾಖಲೆಗಳ ಪರಿಶೀಲನೆಗೆ ಸುನೀಲ್‌ ಕುಮಾರ್‌ಗೆ ಬೆಂಗಳೂರು ಸಿಐಡಿ ಕಚೇರಿಯಿಂದ ಬುಲಾವ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನ(Bengaluru) ಸಿಐಡಿ ಕಚೇರಿಗೂ ತೆರಳಿದ್ದು ದಾಖಲೆ ಪರಿಶೀಲನೆ ವೇಳೆ ಅಕ್ರಮ ನಡೆದ ಬಗ್ಗೆ ಅಧಿಕಾರಿಗಳಿಗೆ ಸಂದೇಹ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು(Accused) ಅಧಿಕಾರಿಗಳು ಸ್ಥಳದಲ್ಲೇ ವಶಕ್ಕೆ ಪಡೆದಿದ್ದರು. ನಂತರ ಸಿಐಡಿ ಅಧಿಕಾರಿಗಳ ತಂಡ ಮಂಗಳವಾರ ಸುನೀಲ್‌ ಕುಮಾರನನ್ನು ಕಲಬುರಗಿಗೆ(Kalaburagi) ಕರೆ ತಂದಿದೆ.

ಪಿಎಸ್ಐ ಪರೀಕ್ಷೆ ಅಕ್ರಮಕ್ಕಾಗಿ ಸತ್ತವರ ಹೆಸರಿನ ಸಿಮ್ ಬಳಕೆ: ಖತರನಾಕ್ ಗ್ಯಾಂಗ್‌ ಇದು..!

ಇಡೀ ಹಗರಣದಲ್ಲಿ(Scam) ಅಕ್ರಮ ನಡೆದಿದೆ ಎಂದು ಇದುವರೆಗೂ ಸುದ್ದಿಯಲ್ಲಿರುವ ಕಲಬುರಗಿ ನಗರದ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿಯೇ ಸುನೀಲ ಕುಮಾರ್‌ ಪರೀಕ್ಷೆ ಬರೆದಿದ್ದ. ಈ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್‌ ಉಪಕರಣ(Electronic Equipment) ಬಳಸಿ ಪಾಸಾಗಿರುವ ಆರೋಪ ಈತನ ಮೇಲಿದೆ. ಜೊತೆಗೆ ಹಗರಣದಲ್ಲಿ ಈಗಾಗಲೇ ಬಂಧಿತನಾಗಿರುವ ಅಫಜಲ್ಪುರದ ರುದ್ರಗೌಡ ಪಾಟೀಲ್‌ ಮುಖಾಂತರವೇ ಸುನೀಲ್‌ ಕುಮಾರ್‌ ಅಕ್ರಮದ ಫಲಾನುಭವಿಯಾಗಿದ್ದ. ಜೊತೆಗೆ ಈತನನ್ನು ಪಾಸು ಮಾಡಿದ್ದು ನಾನೇ ಎಂದು ರುದ್ರೇಗೌಡ ಪಾಟೀಲ್‌ ವಿಚಾರಣೆ ವೇಳೆ ತಿಳಿಸಿರುವುದಾಗಿ ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿ ಸುನೀಲ್‌ ಕುಮಾರ್‌ ಹಗರಣದಲ್ಲಿ ಈಗಾಗಲೇ ಬಂಧಿತನಾಗಿರುವ ರುದ್ರಗೌಡ ಪಾಟೀಲ್‌ಗೆ 40 ಲಕ್ಷ ರುಪಾಯಿ ಹಣ ನೀಡಿದ್ದಾನೆಂಬ ಶಂಕೆ ಬಲವಾಗಿದೆ. ಈ ಬಗ್ಗೆ ವಿಚಾರಣೆ ನಡೆದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪಿಎಸ್‌ಐ ಪರೀಕ್ಷೆ ಅಕ್ರಮ- ಶೀಘ್ರ ಸರ್ಕಾರಕ್ಕೆ ಮಧ್ಯಂತರ ವರದಿ?

ಪೊಲೀಸ್‌ ಇಲಾಖೆಯ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಾಗಿರುವ ಅಕ್ರಮಗಳನ್ನು(PSI Recruitment Scam) ಪತ್ತೆ ಹಚ್ಚಲು ಕಳೆದ 21 ದಿನಗಳಿಂದ ಒಂದೇ ಸವನೆ ತನಿಖೆ ಮಾಡುತ್ತ ಸಾಕಷ್ಟು ಪ್ರಗತಿ ಸಾಧಿಸಿರುವ ಸಿಐಡಿ(CID) ತಂಡ ಇದೀಗ ಹಗರಣದ ಸ್ವರೂಪ, ಆಳ-ವಿಸ್ತಾರಗಳೆಲ್ಲದರ ಸಮಗ್ರ ನೋಟವಿರುವ ಮಧ್ಯಂತರ ವರದಿ(Interim Report) ಸಿದ್ಧಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಸೋಮವಾರ ಸಿಐಡಿ ಡಿಐಜಿ ಪಿಎಸ್‌ ಸಂಧು, ಐಜಿಪಿ, ಡಿಸಿಪಿ, ಎಸ್ಪಿ ಸೇರಿದಂತೆ ಸಿಐಡಿಯ ಹಿರಿಯ ಅಧಿಕಾರಿಗಳೆಲ್ಲ ಹಗರಣ ಸ್ಫೋಟಗೊಂಡು ಸುದ್ದಿಯಲ್ಲಿರುವ ಕಲಬುರಗಿಗೆ(Kalaburagi) ಭೇಟಿ ನೀಡಿ ತನಿಖಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಇಲ್ಲಿಯ ವರೆಗಿನ ತನಿಖೆಯಲ್ಲಾದ ಪ್ರಗತಿಯ ಇಂಚಿಂಚೂ ಮಾಹಿತಿ ಪಡೆದುಕೊಂಡಿದ್ದಾರೆಂದು ಗೊತ್ತಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್