ಹುಬ್ಬಳ್ಳಿ ಗಲಭೆಗೆ ಸಿದ್ದರಾಮಯ್ಯ ಪ್ರೇರಣೆ: ನಳಿನ್‌ ಕುಮಾರ್‌ ಕಟೀಲ್‌

By Girish Goudar  |  First Published Apr 27, 2022, 5:56 AM IST

*   ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ
*  ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆ
*  ರಾಜ್ಯದಲ್ಲಿ ನಡೆದ ಗಲಭೆಗಳನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ನಿಯಂತ್ರಿಸಿದೆ


ಹುಬ್ಬಳ್ಳಿ(ಏ.27):  ರಾಜ್ಯದಲ್ಲಿ(Karnataka) ಇತ್ತೀಚಿಗೆ ನಡೆಯುತ್ತಿರುವ ಗಲಭೆಗಳ ಹಿಂದೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರ ಪ್ರೇರಣೆ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಆರೋಪಿಸಿದರು. ಮಂಗಳವಾರ ಅವರು ಹಳೇಹುಬ್ಬಳ್ಳಿ ಗಲಭೆ(Hubballi Riots) ವೇಳೆ ಕಲ್ಲೆಸೆತಕ್ಕೆ ತುತ್ತಾಗಿದ್ದ ದಿಡ್ಡಿ ಹನುಮಂತಪ್ಪ ದೇವಸ್ಥಾನ, ಮನೆಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜತೆಗೆ ಮಾತನಾಡಿದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 23 ಹಿಂದೂ(Hindu) ಕಾರ್ಯಕರ್ತರ ಹತ್ಯೆ(Murder) ನಡೆಯಿತು. ಟಿಪ್ಪು ಜಯಂತಿ ಹೆಸರಲ್ಲಿ ರಾಜ್ಯಾದ್ಯಂತ ಗಲಭೆಗಳು ನಡೆದವು. ಮೈಸೂರು ಹಾಗೂ ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ಹತ್ಯೆಯಾಯಿತು. ಒಬ್ಬರನ್ನೂ ಬಂಧಿಸಲು ಅವರು ಮುಂದಾಗಲಿಲ್ಲ. ಅವುಗಳ ಹಿಂದಿರುವ ಶಕ್ತಿಯನ್ನು ಸಹ ಗುರುತಿಸಲಿಲ್ಲ. ಆಗಲೇ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಈಗ ಹುಬ್ಬಳ್ಳಿಯಲ್ಲಿ ಗಲಭೆಗಳು ನಡೆಯುತ್ತಿರಲಿಲ್ಲ ಎಂದರು.

Tap to resize

Latest Videos

ಕೃಷ್ಣಾ ಮೇಲ್ದಂಡೆ 3ನೇ ಹಂತ ಅನುಷ್ಠಾನಕ್ಕೆ ಕಟಿಬದ್ಧ, ಸಿಎಂ ಬೊಮ್ಮಾಯಿ!

ರಾಜ್ಯದಲ್ಲಿ ನಡೆದ ಗಲಭೆಗಳನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ನಿಯಂತ್ರಿಸಿದೆ. ಗೃಹ ಇಲಾಖೆ ತುರ್ತು ಸಂದರ್ಭದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡು ಹಲವು ಗಲಭೆ ನಿಯಂತ್ರಿಸಿದೆ. ಈ ಎಲ್ಲ ಗಲಭೆಗೆ ಸಿದ್ದರಾಮಯ್ಯರೇ ಪ್ರೇರಣೆ ಇರಬಹುದು. ಈಗಲೂ ಸಿದ್ದರಾಮಯ್ಯರ ಆಡಳಿತವೇ ಇದ್ದಿದ್ದರೆ ಬಂಧನಕ್ಕೆ ಒಳಗಾದ ಆರೋಪಿಗಳೆಲ್ಲ ನಿರಾತಂಕವಾಗಿ ಹೊರಗೆ ಇರುತ್ತಿದ್ದರು. ಅಲ್ಲದೆ, ಅವರ ರಕ್ಷಣೆಯನ್ನು ಸಹ ಸಿದ್ದರಾಮಯ್ಯ ಮಾಡುತ್ತಿದ್ದರು ಎಂದು ಲೇವಡಿ ಮಾಡಿದರು.

ಬುಲ್ಡೋಜರ್‌ ಬೇಡ:

ಉತ್ತರ ಪ್ರದೇಶದ ಬುಲ್ಡೋಜರ್‌ ಮಾದರಿಗಿಂತ ರಾಜ್ಯದ ಕಾನೂನನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸಂಘಟನೆಗಳ ನಿಷೇಧಕ್ಕೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಪ್ರಕರಣದಂತೆ ಪೂರ್ವ ನಿಯೋಜಿತ ಕೃತ್ಯ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಶಾಸಕ ಅರವಿಂದ ಬೆಲ್ಲದ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮೋಹನ ಲಿಂಬಿಕಾಯಿ, ಪಾಂಡುರಂಗ ಪಾಟೀಲ, ವೀರಭದ್ರಪ್ಪ ಹಾಲರವಿ ಇದ್ದರು.
 

click me!