ಸಿಎಂ ನಡುಗಿಸಿದ ಸ್ನೇಹಮಯಿ ಕೃಷ್ಣ ರಿಯಲ್ ಹೀರೋ ಆದ್ರಾ? ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ ಕಿರುಕುಳ ದೂರು!

By Sathish Kumar KH  |  First Published Jan 10, 2025, 6:43 PM IST

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ಹೆಸರಿನಲ್ಲಿ ಪೊಲೀಸರಿಗೆ ಅನಾಮಧೇಯ ಪತ್ರಗಳು ಬರುತ್ತಿವೆ. ಪೊಲೀಸರ ಹಗರಣಗಳು, ಸ್ವಾಮೀಜಿಗಳ ಅನೈತಿಕ ಸಂಬಂಧಗಳು, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಸಂಬಂಧಿತ ದೂರುಗಳನ್ನು ಅವರ ಹೆಸರಿನಲ್ಲಿ ಬರೆಯಲಾಗುತ್ತಿದೆ.


ಮೈಸೂರು (ಜ.10):  ಮುಖ್ಯಂತ್ರಿ ಸಿದ್ದರಾಯ್ಯ ಅವರನ್ನೇ ಮುಡಾ ಕೇಸಿನಲ್ಲಿ ನಡುಗಿಸಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ಹೆಸರಿನಲ್ಲಿ ಪೊಲೀಸರಿಗೆ ಅನಾಮಧೇಯ ಪತ್ರಗಳು ಬರುತ್ತಿವೆ. ಪೊಲೀಸರ ಹಗರಣಗಳು, ಸ್ವಾಮೀಜಿಗಳ ಅನೈತಿಕ ಸಂಬಂಧಗಳು, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಸಂಬಂಧಿತ ದೂರುಗಳನ್ನು ಅವರ ಹೆಸರಿನಲ್ಲಿ ಬರೆಯಲಾಗುತ್ತಿದೆ.

ರಾಜ್ಯದಲ್ಲಿ ಆಡಳಿತಾರೂಢ ಸರ್ಕಾದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರ ವಿರುದ್ಧವೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಹಗರಣ ನಡೆದಿದೆ ಎಂದು ಆರೋಪ ಮಾಡಿ ನಡುಗಿಸಿದ ವ್ಯಕ್ತಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆಗಿದ್ದಾರೆ. ಯಾವುದೇ ಪಕ್ಷದ ಬೆಂಬಲ ಇಲ್ಲದಿದ್ದರೂ ಒಬ್ಬಂಟಿಯಾಗಿ ನಿಂತು ಸರ್ಕಾರ ಹಾಗೂ ಸಿಎಂ ವಿರುದ್ಧವೇ ಕಾನೂನು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯದ ಜನತೆ ಸ್ನೇಹಮಯಿ ಕೃಷ್ಣ ಅವರನ್ನು ರಾಜ್ಯದ ರಿಯಲ್ ಹೀರೋ ಎಂದು ಭಾವಿಸಿ ಅವರ ಹೆಸರಿನಲ್ಲಿ ಪೊಲೀಸರಿಗೆ ಅನಾಮಧೇಯ ಪತ್ರಗಳನ್ನು ಬರೆಯುತ್ತಿದ್ದಾರೆ. ಪೊಲೀಸರ ಹಗರಣಗಳು, ಸ್ವಾಮೀಜಿಗಳ ಅನೈತಿಕ ಸಂಬಂಧಗಳು, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಸಂಬಂಧಿತ ದೂರಿಗಳನ್ನು ಸ್ನೇಹಮಯಿ ಕೃಷ್ಣ ಅವರ ಹೆಸರಿನಲ್ಲಿ ಬರೆದು ಪೊಲೀಸರಿಗೆ ಕಳುಹಿಸುತ್ತಿದ್ದಾರೆ. ಈ ಬಗ್ಗೆ ಸ್ನೇಹಮಯಿ ಕೃಷ್ಣ ಅವರನ್ನು ವಿಚಾರಿಸಿದರೆ ಆರೋಪ ಮಾಡಿರುವ ವ್ಯಕ್ತಿಯಾಗಲೀ ಅಥವಾ ಆರೋಪ ಹೊರಿಸಲಾದ ವ್ಯಕ್ತಿಗಳಾಗಲೀ ತಮಗೆ ಪರಿಚಯವೇ ಇಲ್ಲವೆಂದು ಹೇಳಿದ್ದಾರೆ.

Tap to resize

Latest Videos

ಅಂದರೆ, ಸಾಮಾಜಿಕ ಕಾರ್ಯಕರ್ತ ಸ್ನೇಮಮಯಿ ಕೃಷ್ಣನ ಹೆಸರಿಗೆ ಬಂತು ಸೂಪರ್ ಪವರ್ ಬಂದಂತಾಗಿದೆ. ಸ್ನೇಹಮಯಿ ಕೃಷ್ಣ ಅವರ ಹೆಸರು ಹೇಳಿಕೊಂಡು ಪೊಲೀಸರಿಗೆ ಅನಾಮಧೇಯ ಪತ್ರಗಳು ಹೋಗುತ್ತಿವೆ. ಮೈಸೂರಿನ ಜಯಪುರ ಪೊಲೀಸ್ ಠಾಣೆಗೆ ಪತ್ರದ ಮೂಲಕ ದೂರು ಪತ್ರ ಬಂದಿದೆ. ಇದರಲ್ಲಿ ಆರೋಪಿ ಸ್ಥಾನದಲ್ಲಿದ್ದ ವ್ಯಕ್ತಿ ಗಿರೀಶ್ ನನಗೆ ಯಾರೆಂಬುದೇ ಗೊತ್ತಿಲ್ಲ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಈ ಬಗ್ಗೆ ನಾನು ಪೊಲೀಸರ ವಿಚಾರಣೆಗೆ ಹೋದಾಗಲೇ ನನ್ನ ಹೆಸರು ದುರ್ಬಳಕೆ ಆಗಿರುವುದು ಗೊತ್ತಾಯಿತು ಎಂದು ಸ್ವತಃ ಸ್ನೇಹಮಯಿ ಕೃಷ್ಣ ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡನಿಂದ ಸ್ನೇಹಮಯಿ ಕೃಷ್ಣಗೆ ಜೀವ ಬೆದರಿಕೆ; ರಕ್ಷಣೆ ಕೋರಿ ಮೋದಿ, ಅಮಿತ್ ಶಾಗೆ ಪತ್ರ!

ಕರ್ನಾಟಕ ಪೊಲೀಸ್ ಅಕಾಡೆಮೆಯಲ್ಲಿ ಪ್ರಶಿಕ್ಷಣಾರ್ಥಿಯ (ಭಾವಿ ಪೊಲೀಸ್) ಬಳಿ ಹಣ ಕೇಳಿದ ಬಗ್ಗೆ ಪೊಲೀಸ್ ಠಾಣೆಗೆ ದೂರು ಪತ್ರ ಹೋಗಿದೆ. ಸಂಚಾರಿ ಪೊಲೀಸರು ವಾಹನಗಳನ್ನ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದರೆ ನನ್ನ ಹೆಸರು ಹೇಳಿಕೊಂಡು ಶುಲ್ಕ ಕಟ್ಟದೆ ಹೋಗುತ್ತಿದ್ದಾರೆ.

ಮೈಸೂರಿನ ಅರ್ಜನ್ ಗೂರುಜಿ ವಿರುದ್ಧವು ದೂರಿನ ಪತ್ರವೊಂದು ಹೋಗಿದೆ. ಅರ್ಜುನ್ ಗೂರುಜಿ ಹೆಣ್ಣು ಮಕ್ಕಳಿಗೆ ಮೋಸ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಓರ್ವನ ಸಾವಿಗೂ ಅರ್ಜುನ್ ಗೂರುಜಿ ಕಾರಣರಾಗಿದ್ದಾರೆ ಎಂದು ಪತ್ರ ಬರೆಯಲಾಗಿದೆ. ನಿಜವಾಗಿಯೂ ಯಾರೇ ಅಪರಾಧ ಮಾಡಿದ್ದರೆ ಅವರ ಹೆಸರಿನಲ್ಲೇ ಅರ್ಜಿ ಬರೆಯಿರಿ. ನನ್ನ ಹೆಸರನ್ನ ಯಾಕೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅವರ ವೈಯಕ್ತಿಕ ವಿಚಾರಕ್ಕೆ ನನಗೆ ಕೆಟ್ಟ ಹೆಸರು ತರುಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಮುಖಂಡನಿಂದಲೇ ಸ್ನೇಹಮಯಿ ಕೃಷ್ಣಗೆ ಆಮಿಷ?!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತಿರುವ ಸ್ನೇಹಮಯಿ ಹೆಸರು ಬಳಸಿಕೊಂಡರೆ ನಮ್ಮ ಕೆಲಸ ಆಗುತ್ತದೆ ಎಂದು ಜನರು ತಿಳಿದುಕೊಂಡಿದ್ದಾರೆ. ಒಳ್ಳೆತನಕ್ಕೆ ನನ್ನ ಹೆಸರು ಬಳಸಿಕೊಂಡು ಅದರಿಂದ ಸಮಾಜಕ್ಕೆ ಒಳ್ಳೆಯದಾದರೆ ತೊಂದರೆ ಇಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೆ ಸ್ವತಃ ನನಗೆ ತಂದು ಕೊಡಿ ನಿಮ್ಮ ಪರ ನಾನು ಹೋರಾಟ ಮಾಡುತ್ತೇನೆ. ಆದರೆ, ನನ್ನ ಹೆಸರು ದುರ್ಬಳಿಕೆಯಾದರೆ ಕಾನೂನು ಹೋರಾಟ ಮಾಡುತ್ತೇವೆ. ನೀವು ಈ ರೀತಿಯಾಗಿ ದೂರು ಕೊಟ್ಟರೆ ಪೊಲೀಸರು ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ ಎಂದು ಸ್ನೇಹಮಯಿ ಕೃಷ್ಣ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಮೂಲಕ ಮನವಿ ಮಾಡಿದ್ದಾರೆ.

click me!