ಮೇಲ್ನೋಟಕ್ಕೆ ಅದೊಂದು ಕೋಳಿ ಫಾರಂ. ಆದ್ರೇ ಒಳಗೆ ಮಾತ್ರ ನಡೆಯುತ್ತದೆ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕೋ ಕೆಲಸ. ಇಂತಾಹದ್ದೊಂದು ಕರಾಳ ದಂಧೆಯನ್ನು ಕಂಪ್ಲಿ ಶಾಸಕ ಗಣೇಶ ಬಯಲಿಗೆಳೆಯೋ ಮೂಲಕ ಬಳ್ಳಾರಿ ಜಿಲ್ಲಾಡಳಿತ ಮತ್ತು ಪೊಲೀಸರ ಅಕ್ರಮ ತಡೆಯುವಲ್ಲಿ ಮಾಡಿದ ವೈಫಲವ್ಯವನ್ನು ನಡುರಾತ್ರಿಯಲ್ಲಿ ಬಟಾಬಯಲು ಮಾಡಿದ್ದಾರೆ.
ಬಳ್ಳಾರಿ (ಜು.24): ಮೇಲ್ನೋಟಕ್ಕೆ ಅದೊಂದು ಕೋಳಿ ಫಾರಂ. ಆದ್ರೇ ಒಳಗೆ ಮಾತ್ರ ನಡೆಯುತ್ತದೆ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕೋ ಕೆಲಸ. ಇಂತಾಹದ್ದೊಂದು ಕರಾಳ ದಂಧೆಯನ್ನು ಕಂಪ್ಲಿ ಶಾಸಕ ಗಣೇಶ ಬಯಲಿಗೆಳೆಯೋ ಮೂಲಕ ಬಳ್ಳಾರಿ ಜಿಲ್ಲಾಡಳಿತ ಮತ್ತು ಪೊಲೀಸರ ಅಕ್ರಮ ತಡೆಯುವಲ್ಲಿ ಮಾಡಿದ ವೈಫಲವ್ಯವನ್ನು ನಡುರಾತ್ರಿಯಲ್ಲಿ ಬಟಾಬಯಲು ಮಾಡಿದ್ದಾರೆ. ಕಂಪ್ಲಿ ಹೊರವಲಯದ ಪ್ರದೇಶ ವೊಂದರಲ್ಲಿ ಇಂಥಾಹದ್ದೊಂದು ಅಡ್ಡದಲ್ಲಿ ಸಾವಿರಕ್ಕೂ ಹೆಚ್ಚು ಚೀಲದಲ್ಲಿ ಅಕ್ಕಿಯನ್ನು ಸಂಗ್ರಹ ಮಾಡಿಡಲಾಗಿತ್ತು. ಅದನ್ನು ತಡರಾತ್ರಿ ಮಾಧ್ಯಮದವರ ಜೊತೆಗೂಡಿ ಬಹಿರಂಗ ಪಡಿಸೋ ಮೂಲಕ ಕೃತ್ಯದಲ್ಲಿ ದೊಡ್ಡ ದೊಡ್ಡವರ ಪಾಲು ಇದೆ ಎಂದು ಆರೋಪಿಸಿದರು.
ಅನ್ನಭಾಗ್ಯದ ಅಕ್ಕಿಯನ್ನು ಹೊರ ರಾಜ್ಯಕ್ಕೆ ಸಾಗಿಸೋ ದೊಡ್ಡ ಜಾಲ ಪತ್ತೆ: ದಿನಕ್ಕೆ ಎರಡು ಲಾರಿ ಲೋಡ್ ಅಕ್ಕಿಯನ್ನು ಕಂಪ್ಲಿಯಿಂದ ತಮಿಳುನಾಡು ಗುಜರಾತ್ ಕಡೆ ಸಾಗಣೆ ಮಾಡಲಾಗಿತ್ತದೆ. ಒಂದು ಲಾರಿಯಲ್ಲಿ ನಾಲ್ಕು ನೂರು ಚೀಲ ಅಕ್ಕಿ ಸಾಗಾಟ ಮಾಡೋ ಮೂಲಕ ಲಕ್ಷಾಂತರ ರೂಪಾಯಿ ವ್ಯವಹಾರ ಇಲ್ಲಿ ನಡೆಯುತ್ತಿದೆ ಎನ್ನುವುದು ದಾಳಿಯ ವೇಳೆ ಖಚಿತವಾಗಿದೆ. ಅಲ್ಲದೇ ವ್ಯವಹಾರದಲ್ಲಿ ದಿನಕ್ಕೆ ಒಂದುವರೆ ಲಕ್ಷ ಲಾಭ ಪಡೆಯೋ ಪ್ರಭಾವಿ ನಾಯಕ ಯಾರು ಅನ್ನೋದೇ ಸದ್ಯ ಇಲ್ಲಿಯ ಯಕ್ಷ ಪ್ರಶ್ನೆಯಾಗಿದೆ.
undefined
ಬಳ್ಳಾರಿ: ಅಂತ್ಯ ಸಂಸ್ಕಾರಕ್ಕಾಗಿ ತೆಪ್ಪದಲ್ಲಿ ಶವ ಸಾಗಾಟ
ಸಿನಿಮೀಯ ಶೈಲಿಯಲ್ಲಿ ದಾಳಿ: ಅಕ್ಕಿ ದಂಧೆ ಮಾಡೋ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುವ ಮೂಲಕ ಎರಡು ದಿನಗಳ ಕಾಲ ನಿರಂತರವಾಗಿ ಚಲನವಲನವನ್ನು ಗಮನಸಿ ಏಕಕಾಲಕ್ಕೆ ತಡರಾತ್ರಿ ದಾಳಿ ಮಾಡ್ತಿದ್ದಂತೆ ಸ್ಥಳದಿಂದ ಹಲವು ಖದೀಮರು ಓಡಿ ಹೋದ್ರು. ಸಿಕ್ಕ ನಾಲ್ಕಾರು ಜನರನ್ನು ವಿಚಾರ ಮಾಡಿದ್ರು. ಅವರಿಗ್ಯಾರಿಗೂ ಇಲ್ಲಿ ನಡೆಯೋ ವ್ಯವಹಾರದ ಬಗ್ಗೆ ಗೊತ್ತಿಲ್ಲ ಯಾಕಂದ್ರೇ, ಅವರು ಕನ್ನಡ ಭಾಷೆಯೇ ಬಾರದ ತಮಿಳುನಾಡು ಮತ್ತು ಗುಜರಾತ್ ಮೂಲದ ಕಾರ್ಮಿಕರಾಗಿದ್ರು. ಅವರನ್ನು ಏನೇ ವಿಚಾರಣೆ ಮಾಡಿದ್ರು. ನಾವಿಲ್ಲಿ ಕೆಲಸಕ್ಕೆ ಬಂದಿದ್ದೇವೆ. ಇದು ಸಕ್ರಮವೋ ಅಕ್ರಮವೋ ನಮಗೆ ಗೊತ್ತಿಲ್ಲ ಎನ್ನುವ ಮೂಲಕ ಜಾರಿಕೊಳ್ಳುವ ಪ್ರಯತ್ನ ನಡೆಯಿತು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯವರ ಮೇಲು ಅನುಮಾನ: ದಾಳಿ ಮಾಡುತ್ತಿದ್ದ ಸ್ಥಳದಲ್ಲಿದ್ದ ಲಾರಿ ಮತ್ತು ಲಾರಿಯಲ್ಲಿದ್ದ ಅಪಾರ ಪ್ರಮಾಣದ ಅಕ್ಕಿ ಸೇರಿದಂತೆ ಗೋದಾಮಿನಲ್ಲಿದ್ದ ಸಾವಿರಕ್ಕೂ ಹೆಚ್ಚು ಚೀಲ ಅಕ್ಕಿಯ ಲೆಕ್ಕ ಪಡೆಯೋ ಕೆಲಸವನ್ನು ಮಾಡಲಾಯಿತು. ಇಷ್ಟೆಲ್ಲ ನಡೆಯುತ್ತಿದ್ರು ಇಲಾಖೆ ಏನು ಮಾಡ್ತಿದೆ. ಆಹಾರ ಇಲಾಖೆ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಬರುವಂತೆ ಶಾಸಕ ಗಣೇಶ ಪಟ್ಟು ಹಿಡಿದ್ರು. ಆಗ ಆಹಾರ ಇಲಾಖೆ ಯವರನ್ನು ಬಿಟ್ಟು, ಗಣಿ ಮತ್ತು ಭೂ ವಿಜಾನ ಇಲಾಖೆಯ ಮುಖಸ್ಥರಾದ ಚಂದ್ರಶೇಖರ ಅವರನ್ನು ಕಳುಹಿಸೋ ಮೂಲಕ ತನಿಖೆ ವೇಗವನ್ನು ಹೆಚ್ಚಿಸೋ ಕೆಲಸವನ್ನು ಜಿಲ್ಲಾಡಳಿತದಿಂದ ಮಾಡಲಾಯಿತು.
ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು!
ಯಾರು ಆ ಪ್ರಭಾವಿ ನಾಯಕ: ಇನ್ನೂ ದಾಳಿಯ ವೇಳೆ ಕಾರ್ಮಿಕರು ಸಿಕ್ಕಿಕೊಂಡರೇ ಹೊರತು ಮಾಲೀಕರಾರು ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಇತ್ತ ಕಾರ್ಮಿಕರಿಗೂ ಮಾಲೀಕರು ಯಾರು ಅನ್ನೋದು ಗೊತ್ತಿಲ್ಲ ಅಂದ್ರೇ, ಅತ್ತ ಕೋಳಿ ಫಾರಂ ಮಾಲೀಕರಿಗೂ ತಮ್ಮ ಫಾರಂ ಪಕ್ಕದಲ್ಲಿರೋ ಗೋದಾಮಿನಲ್ಲಿ ಅಕ್ಕಿ ಸ್ಟಾಕ್ ಇಟ್ಟಿರೋದು ಯಾರು ಅನ್ನೋದು ಗೊತ್ತಿಲ್ಲವೆನ್ನುತ್ತಿದ್ದರು. ಹೀಗಾಗಿ ಶಾಸಕ ಗಣೇಶ್ ಇದರ ಹಿಂದೆ ಪ್ರಭಾವಿ ನಾಯಕರು ಇದ್ದಾರೆ ಎಂದು ಆರೋಪಿಸಿದ್ರು. ಆದ್ರೇ ಯಾರು ಆ ಪ್ರಭಾವಿ ನಾಯಕ ಯಾರು ಅನ್ನೋದು ಮಾತ್ರ ತನಿಖೆಯ ನಂತರ ಬಯಲಿಗೆ ಬರಲಿದೆ.