ಪ್ರಯಾಣಿಕರೇ ಗಮನಿಸಿ: ಜುಲೈ 26ರಿಂದ ಬೆಂಗಳೂರು - ಮಂಗಳೂರು ನಡುವೆ ವಿಶೇಷ ರೈಲು ಸೇವೆ ಆರಂಭ

By BK Ashwin  |  First Published Jul 24, 2022, 11:47 AM IST

ಬೆಂಗಳೂರು - ಮಂಗಳೂರು ನಡುವೆ ಜುಲೈ 26 ರಿಂದ ಅಂದರೆ ಮಂಗಳವಾರದಿಂದ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲಿದೆ. ಘಾಟ್‌ ಪ್ರದೇಶಗಳಲ್ಲಿ ಭೂ ಕುಸಿತದಿಂದ ಬೆಂಗಳೂರು - ಮಂಗಳೂರು ನಡುವಿನ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಈ ಹಿನ್ನೆಲೆ ಮೈಸೂರು ಮಾರ್ಗದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು  - ಮಂಗಳೂರು ನಡುವೆ ವಿಶೇಷ ರೈಲು ಸೇವೆ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ತೀವ್ರ ಮಳೆ ಸುರಿಯುತ್ತಿತ್ತು. ಈ ಹಿನ್ನೆಲೆ ಶಿರಾಡಿ ಘಾಟ್‌ ಸೇರಿ ಹಲವು ಘಾಟ್‌ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಬಸ್‌ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಮಂಗಳೂರು, ಉಡುಪಿ ಭಾಗದವರಿಗೆ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದರು. ಇನ್ಮುಂದೆ ಈ ಪರದಾಟ ಕಡಿಮೆಯಾಗಬಹುದು. 

ಹೌದು, ಬೆಂಗಳೂರು - ಮಂಗಳೂರು ನಡುವೆ ಜುಲೈ 26 ರಿಂದ ಅಂದರೆ ಮಂಗಳವಾರದಿಂದ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲಿದೆ. ಘಾಟ್‌ ಪ್ರದೇಶಗಳಲ್ಲಿ ಭೂ ಕುಸಿತದಿಂದ ಬೆಂಗಳೂರು - ಮಂಗಳೂರು ನಡುವಿನ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಈ ಹಿನ್ನೆಲೆ ಮೈಸೂರು ಮಾರ್ಗದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು  - ಮಂಗಳೂರು ನಡುವೆ ವಿಶೇಷ ರೈಲು ಸೇವೆ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಜುಲೈ 26 ರಿಂದ ಆಗಸ್ಟ್‌ 31 ರವರೆಗೆ ವಾರದಲ್ಲಿ 3 ದಿನಗಳ ಕಾಲ ಬೆಂಗಳೂರು - ಮಂಗಳೂರು ನಡುವೆ ಈ ರೈಲು ಸಂಚರಿಸಲಿದೆ ಎಂದೂ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Tap to resize

Latest Videos

ರಾಜ್ಯದಲ್ಲಿ ‘ವಿಸ್ಟಾಡೋಮ್‌’ ಸಂಚಾರ ಶುರು: ಬೆಂಗ್ಳೂರು-ಮಂಗ್ಳೂರು ಮಧ್ಯೆ ಸಂಚಾರ

ಬೆಂಗಳೂರಿನಿಂದ ರಾತ್ರಿ 8.30 ಕ್ಕೆ ಹೊರಡಲಿರುವ ವಿಶೇಷ ರೈಲು ಸಂಖ್ಯೆ 06547 ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ಮರುದಿನ ಬೆಳಗ್ಗೆ 9.05 ಕ್ಕೆ ತಲುಪಲಿದೆ. ಈ ರೈಲು ಮಂಗಳವಾರ, ಗುರುವಾರ ಹಾಗೂ ಭಾನುವಾರ ಬೆಂಗಳೂರಿನಿಂದ ಹೊರಡಲಿದೆ ಎಂದು ತಿಳಿದುಬಂದಿದೆ.

ಇನ್ನು, ರೈಲು ಸಂಖ್ಯೆ 06548 ಮಂಗಳೂರಿನಿಂದ - ಬೆಂಗಳೂರು ನಡುವೆ ಸೋಮವಾರ - ಬುಧವಾರ ಹಾಗೂ ಶುಕ್ರವಾರ ಸಂಚರಿಸಲಿದೆ. ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ಸಂಜೆ 6.35ರಿಂದ ಹೊರಡಲಿರುವ ರೈಲು ಕೆಎಸ್‌ಆರ್‌ ಬೆಂಗಳೂರು ರೈಲು ನಿಲ್ದಾಣವನ್ನು ಮರುದಿನ ಬೆಳಗ್ಗೆ 6.15 ಕ್ಕೆ ತಲುಪಲಿದೆ ಎಂದೂ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. 

ಈ ರೈಲಿನಲ್ಲಿ 2 ಜನರಲ್‌ ಕ್ಲಾಸ್‌ ಬೋಗಿಗಳಿರಲಿದ್ದು, 9 ಸೆಕೆಂಡ್‌ ಕ್ಲಾಸ್‌ ಸ್ಲೀಪರ್‌, ಎರಡು 2 ಟಯರ್‌ ಎಸಿ ಹಾಗೂ ಎರಡು 3 ಟಯರ್‌ ಎಸಿ ಬೋಗಿಗಳನ್ನು ಹೊಂದಿರಲಿದೆ ಎಂದೂ ತಿಳಿದುಬಂದಿದೆ.

ರೈಲ್ವೆ ಸಚಿವರಿಗೆ ಮನವಿ ಮಾಡಿದ್ದ ನಳಿನ್‌ ಕುಮಾರ್‌ ಕಟೀಲ್‌
ಬೆಂಗಳೂರು - ಮಂಗಳೂರು ನಡುವೆ ಹೆಚ್ಚುವರಿ ರೈಲುಗಳನ್ನು ಒದಗಿಸುವಂತೆ  ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್‌ ಅವರಿಗೆ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಜುಲೈ 18 ರಂದು ಕಟೀಲ್‌ ರೈಲ್ವೆ ಸಚಿವರನ್ನು ಭೇಟಿ ಮಾಡಿದ್ದರು. ಹಾಗೂ, ರೈಲ್ವೆ ಸಚಿವರು ಇದಕ್ಕೆ ಶೀಘ್ರದಲ್ಲೇ ಒಪ್ಪಿಗೆ ನೀಡಿದ್ದರು ಎಂದೂ ತಿಳಿದುಬಂದಿದೆ. 

ಬೆಂಗಳೂರು-ಮಂಗಳೂರು ಮಧ್ಯೆ ನೂತನ ವಿಸ್ಟಾಡೋಮ್‌ ರೈಲು

ಮುಂಬೈ - ಮಂಗಳೂರು ನಡುವೆಯೂ ವಿಶೇಷ ರೈಲು ಸೇವೆ
ಗಣಪತಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ನೂಕುನುಗ್ಗಲು ನಿವಾರಿಸಲು ಮಂಗಳೂರಿನ  ಲೋಕಮಾನ್ಯ ತಿಲಕ್ ಮತ್ತು ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ಸೇವೆಯನ್ನು ರೈಲ್ವೆ ಇಲಾಖೆ ಆರಂಭಿಸಿದೆ. ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಈ ರೈಲು ವಾರಕ್ಕೊಮ್ಮೆ ಸಂಚಾರವಾಗಲಿದೆ ಎಂದು ತಿಳಿದುಬಂದಿದೆ.
         
 ಗಣಪತಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ನೂಕುನುಗ್ಗಲು ನಿವಾರಿಸಲು, ಲೋಕಮಾನ್ಯ ತಿಲಕ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಈ ಕೆಳಗಿನ ಸಾಪ್ತಾಹಿಕ ವಿಶೇಷ ರೈಲುಗಳನ್ನು ನಿರ್ವಹಿಸಲಾಗುತ್ತದೆ:

1. ರೈಲು ಸಂಖ್ಯೆ.01165 ಲೋಕಮಾನ್ಯ ತಿಲಕ್ ಮತ್ತು ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ಸೇವೆಯು ಲೋಕಮಾನ್ಯ ತಿಲಕ ರೈಲು ನಿಲ್ದಾಣದಿಂದ 00.45 ಗಂಟೆಗೆ ಹೊರಡಲಿದೆ. 16, 23, 30 ಆಗಸ್ಟ್ 2022, ಮತ್ತು 06 ಸೆಪ್ಟೆಂಬರ್ 2022 (ಮಂಗಳವಾರ) ಮತ್ತು ಅದೇ ದಿನ 19.30 ಗಂಟೆಗೆ ಮಂಗಳೂರು ಜಂಕ್ಷನ್ ತಲುಪುತ್ತದೆ. (4 ಸೇವೆಗಳು)

2. ರೈಲು ಸಂಖ್ಯೆ.01166 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಸಾಪ್ತಾಹಿಕ ವಿಶೇಷ ಸೇವೆಯು ಮಂಗಳೂರು ಜಂಕ್ಷನ್‌ನಿಂದ 22.20 ಗಂಟೆಗೆ ಹೊರಡಲಿದೆ. 16, 23, 30ನೇ ಆಗಸ್ಟ್ 2022, ಮತ್ತು 06ನೇ ಸೆಪ್ಟೆಂಬರ್ 2022 (ಮಂಗಳವಾರ) ಮತ್ತು 18.30 ಗಂಟೆಗೆ ಲೋಕಮಾನ್ಯ ತಿಲಕ ರೈಲು ನಿಲ್ದಾಣವನ್ನು ಮರುದಿನ ತಲುಪುತ್ತದೆ (4 ಸೇವೆಗಳು)

click me!