ವಿಜಯಪುರದಲ್ಲೂ ಶಿವಮೊಗ್ಗ ರೀತಿ ಗಲಭೆಗೆ ನಡೆದಿಯಾ ಪ್ಲಾನ್‌ ಬಿ?

By Ravi JanekalFirst Published Oct 4, 2023, 10:33 AM IST
Highlights

ಈದ್ ಮಿಲಾದ್ ದಿನ ಬ್ಯಾನರ್‌ ಹರಿದ ಘಟನೆಯನ್ನ ಶಾಸಕ ಯತ್ನಾಳ ಸಹ ಅಷ್ಟೇನು ಗಂಭೀರವಾಗಿ ಪರಿಗಣಿಸಿದಂತೆ ಕಾಣ್ತಿಲ್ಲ. ಇದರ ಹಿಂದಿರುವ ಕಾರಣ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶವಿದೆ ಎನ್ನಲಾಗಿದೆ. ಪೊಲೀಸ್ ಠಾಣೆಗಳಿಗೆ ಎರಡು ದೂರು ದಾಖಲಾಗಿವೆ

ವಿಜಯಪುರ (ಅ.4) : ಶಿವಮೊಗ್ಗ ರೀತಿಯಲ್ಲೆ ವಿಜಯಪುರದಲ್ಲೂ ಗಲಭೆಗೆ ಪ್ಲಾನ್‌ ಬಿ ನಡೆದಿದೆಯಾ ಎನ್ನುವ ಅನುಮಾನಗಳು ಈಗ ಕಾಡತೊಡಗಿವೆ. ಈದ್‌ ಮಿಲಾದ್‌ ಸಂಭ್ರಮಾಚರಣೆ ದಿನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಕಟೌಟ್‌ ಹರಿದ ಪ್ರಕರಣ ನಿಮ್ಗೆಲ್ಲ ಗೊತ್ತೆ ಇದೆ. ಆದ್ರೀಗ ಎಲ್ಲ ತಣ್ಣಗಾಯ್ತು ಎನ್ನೋವಾಗಲೇ ಕಿಡಿಗೇಡಿಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಗಿಳಿದಿದ್ದಾರೆ. ಯತ್ನಾಳ್‌ ಕಟೌಟ್‌ ಹರಿದ ವಿಡಿಯೋಗೆ ಹಮ್‌ ಚೀರ್‌ ದೆಂಗೆ ಪಾಡ್‌ ದೆಂಗೆ ಹಾಡು ಜೋಡಿಸಿ ವೈರಲ್‌ ಮಾಡ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಿಡಿಯೋ

Latest Videos

ಈದ್‌ ಮಿಲಾದ್‌ ದಿನ  ವಿಜಯಪುರ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಶಾಸಕ ಬಸನಗೌಡ ಯತ್ನಾಳ್‌ ರ 30 ಅಡಿ ಕಟೌಟ್‌ನ್ನ ಉದ್ದೇಶ ಪೂರ್ವಕವಾಗಿ ಹರಿದು ಹಾಕಿ ವಿಕೃತಿ ಮರೆಯಲಾಗಿತ್ತು. ಆದ್ರೆ ಹಿಂದೂ ಸಂಘಟನೆಗಳು, ಯತ್ನಾಳ್‌ ಬೆಂಬಲಿಗರು ರಸ್ತೆಗಿಳಿಯದೆ ಶಾಂತಿ ರೀತಿಯಿಂದ ಪರಿಸ್ಥಿತಿ ನಿಭಾಯಿಸಿದ್ದರು. ಘಟನೆ ಬಳಿಕ ಈಗ ಮತ್ತೆ ಕಿಡಿಗೇಡಿಗಳ ಕೋಮು ಪ್ರಚೋದನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನ ಹರಿಬಿಡಲಾಗ್ತಿದೆ. ಯತ್ನಾಳ್‌ ರ ಬ್ಯಾನರ್‌ ಹರಿದ ವಿಡಿಯೋಗಳಿಗೆ ಚೀರ್‌ ದೆಂಗೆ ಪಾಡ್‌ ದೆಂಗೆ ಹಾಡುಗಳನ್ನ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗ್ತಿದೆ. ಇನ್ಸ್ಟಾಗ್ರಾಂ, ಪೇಸ್ಬುಕ್‌, ವಾಟ್ಸಾಪ್‌ ಸ್ಟೆಟಸ್‌ ಗಳಲ್ಲಿ ಎಡಿಟ್ ಮಾಡಲಾದ ಪ್ರಚೋದನಕಾರಿ ವಿಡಿಯೋಗಳನ್ನ ವೈರಲ್‌ ಮಾಡಲಾಗ್ತಿದೆ.

ಸಂತೋಷ ಲಾಡ್‌ರಿಂದ ಬಳ್ಳಾರಿ ದಿವಾಳಿ; ಯತ್ನಾಳ ಹೇಳಿಕೆಗೆ ಲಾಡ್ ತಿರುಗೇಟು

ಪ್ರತಿಭಟನೆ ವಿರೋಧ ಬೇಡ ಎಂದ ಶಾಸಕ ಯತ್ನಾಳ್

ಈದ್ ಮಿಲಾದ್ ದಿನ ಬ್ಯಾನರ್‌ ಹರಿದ ಘಟನೆಯನ್ನ ಶಾಸಕ ಯತ್ನಾಳ ಸಹ ಅಷ್ಟೇನು ಗಂಭೀರವಾಗಿ ಪರಿಗಣಿಸಿದಂತೆ ಕಾಣ್ತಿಲ್ಲ. ಇದರ ಹಿಂದಿರುವ ಕಾರಣ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶವಿದೆ ಎನ್ನಲಾಗಿದೆ. ಪೊಲೀಸ್ ಠಾಣೆಗಳಿಗೆ ಎರಡು ದೂರು ದಾಖಲಾಗಿವೆ. ಇತ್ತ ಕಾರ್ಯಕರ್ತರು ಬೆಂಬಲಿಗರಿಗೂ ಪ್ರತಿಭಟನೆ ಮಾಡದಿರುವಂತೆ ಶಾಸಕ ಯತ್ನಾಳರೆ ಸೂಚನೆ ನೀಡಿದ್ದಾರೆ. ಹೀಗಾಗಿ ಕಿಡಿಗೇಡಿ ನಡೆಸಿದ ಕೃತ್ಯಕ್ಕೆ ಪ್ರತಿರೋಧವಾಗಿ ಯಾವುದೇ ಬೃಹತ್ ಹೋರಾಟ, ಪ್ರತಿಭಟನೆ ನಡೆಸಿಲ್ಲ. ಪಾಲಿಕೆ ಸದಸ್ಯರು ಮಾತ್ರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕೃತ್ಯ ಎಸಗಿದವರನ್ನ ಗಡಿಪಾರು ಮಾಡುವಂತೆ ಮನವಿ ನೀಡಿ ಬಂದಿದ್ದಾರೆ. 

ತಕ್ಷಣವೇ ಕ್ರಮ ಜರುಗಿಸಿದ ಪೊಲೀಸರು

ಈದ್ ಮಿಲಾದ್ ದಿನ ಘಟನೆ ಜರಗುತ್ತಿದ್ದಂತೆ, ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ.‌ ಭಾವುಟ ಹಾರಿಸಿ ಯತ್ನಾಳ್ ಭಾವಚಿತ್ರ ಹರಿದವರನ್ನ ಕೆಲವೆ ಗಂಟೆಯಲ್ಲಿ ಬಂಧಿಸಿದ್ದಾರೆ. ಕೆಲವರ ವಿಚಾರಣೆ ನಡೆಸಿ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪರಿಸ್ಥಿತಿ ತಿಳಿಗೊಂಡಿದೆ. ಆದ್ರೆ ಈ ನಡುವೆ ಮತ್ತೆ ಕಿಡಿಗೇಡಿಗಳು ಬ್ಯಾನರ್ ಹರಿದ ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡ್ತಿದ್ದಾರೆ.

ವಿಜಯಪುರ ನಗರದಲ್ಲಿ ಇಷ್ಟೆಲ್ಲ ಘಟನಾವಳಿ ನಡೆದರೂ ಸಹ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸಿದೆ. ಆದರೆ ಈ ನಡುವೆ ಕಿಡಿಗೇಡಿಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಿಡಿಯೋ ವೈರಲ್‌ ಮಾಡುತ್ತ ಶಾಂತಿ ಕದಡುತ್ತಿದ್ದಾರೆ. ಇದು ಶಿವಮೊಗ್ಗ ಮಾದರಿಯಲ್ಲಿ ವಿಜಯಪುರದಲ್ಲೂ ಗಲಭೆಗೆ ಪ್ಲಾನ್‌ ಬಿ ನಡೆದಿದೆಯಾ? ಅನ್ನೋ ಅನುಮಾನಗಳನ್ನ ಹುಟ್ಟುಹಾಕಿದೆ. 

ಸೈಬರ್ ಪೊಲೀಸರಿಗೆ ದೂರು ನೀಡಿದ ಶ್ರೀರಾಮ ಸೇನೆ

ಹಿಂದೂ ಸಂಘಟನೆ ಮುಖಂಡ ನೀಲಕಂಠ ಕಂದಗಲ್‌ ವಿಜಯಪುರ ಸೈಬರ್‌ ಪೊಲೀಸ್‌ ಠಾಣೆಗೆ ಕೋಮುಪ್ರಚೋದನೆಗೆ ಕುಮ್ಮಕ್ಕು ಕೊಡ್ತಿರೋರ ವಿರುದ್ಧ ಕ್ರಮಕ್ಕಾಗಿ ದೂರು ನೀಡಿದ್ದಾರೆ. ಶಾಂತಿ ನಿರ್ಮಾಣವಾಗಿರುವ ವೇಳೆ ಮತ್ತೆ ಅದನ್ನ ಕದಡಲು ನಡೆಯುತ್ತಿರುವ ಯತ್ನವನ್ನ ಗಂಭೀರವಾಗಿ ಪರಿಗಣಿಸುವಂತೆ ಸೈಬರ್ ಪೊಲೀಸರಿಗೆ ಮನವಿ ಮಾಡಿದ್ದಾರೆ.  ಎಲ್ಲ ತಣ್ಣಗಾದ ಮೇಲೆ ಕಿಡಿಗೇಡಿಗಳು ವಾಟ್ಸಾಪ್, ಪೇಸ್ಬುಕ್, ಇನ್ಸ್ಟಾಗ್ರಾಂ‌ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕ್ತಿರೋದಕ್ಕೆ ಈಗ ಆಕ್ರೋಶ ಕೇಳಿ ಬಂದಿದೆ.. 

ಸನಾತನ ಧರ್ಮ ದಂಗಲ್‌ ಗೆ ವೇದಿಕೆಯಾದ ಗಣೇಶ ಮಂಟಪಗಳು, ವೀರ ಸಾವರ್ಕರ್‌ಗೂ ನಡೆಯುತ್ತಿದೆ ಪೂಜೆ!

ದಿಟ್ಟ ಕ್ರಮಕ್ಕೆ ಮುಂದಾಗಲಿದೆ ಪೊಲೀಸ್ ಇಲಾಖೆ

ಒಟ್ಟಿನಲ್ಲಿ ವಿಜಯಪುರದಲ್ಲಿ ಕೋಮುಭಾವನೆಗಳಿಗೆ ಧಕ್ಕೆ ತಂದು ಗಲಭೆಗೆ ಪ್ರಚೋದಿಸುತ್ತಿದ್ದರೆ ಅಂತವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮವಾಗಬೇಕಿದೆ. ಅದು ಯಾವ ಕೋಮಿನವರಾದ್ರು ಪೊಲೀಸರು ದಿಟ್ಟ ಕ್ರಮ ಕೈಗೊಳ್ಳಬೇಕಿದೆ. ‌ಈ ನಿಟ್ಟಿನಲ್ಲಿ ಪೊಲೀಸರು ಇಂಥ ಕಿಡಿಗೇಡಿಗಳನ್ನ ಬಂಧಿಸಲು ಬಲೆ ಬೀಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

click me!