ಹಿಂದೂ ಮಹಾಮಂಡಳಿಯವರು ಗಣೇಶ ವಿಸರ್ಜನೆ ವೇಳೆ ನಗರದ ಜಾಮೀಯ ಮಸೀದಿ ಮುಂಭಾಗ ರಂಗೋಲಿ ಬಿಡಿಸಿ ಕುಂಡದಲ್ಲಿ ಬೆಂಕಿ ಹಾಕಿ ಮಂಗಳಾರತಿ ಮಾಡಿ ಕುಂಬಳಕಾಯಿ ಒಡೆದು ಪೂಜೆ ಮಾಡಿದ ಯುವಕರು
ಗಂಗಾವತಿ (ಅ.4): ಹಿಂದೂ ಮಹಾಮಂಡಳಿಯವರು ಗಣೇಶ ವಿಸರ್ಜನೆ ವೇಳೆ ನಗರದ ಜಾಮೀಯ ಮಸೀದಿ ಮುಂಭಾಗ ರಂಗೋಲಿ ಬಿಡಿಸಿ ಕುಂಡದಲ್ಲಿ ಬೆಂಕಿ ಹಾಕಿ ಮಂಗಳಾರತಿ ಮಾಡಿ ಕುಂಬಳಕಾಯಿ ಒಡೆದು ಪೂಜೆ ಮಾಡಿದ ಯುವಕರು.
ನಿನ್ನೆ ತಡರಾತ್ರಿ ನಡೆದಿರು ಈ ಘಟನೆಯಿಂದ ಉದ್ವಿಗ್ನ. ಮಸೀದಿ ಮುಂದೆ ಪೂಜೆ ಸಲ್ಲಿಸಿದ್ದಕ್ಕೆ ಅನ್ಯಕೋಮಿನ ಜನರು ಆಕ್ಷೇಪ. ವಿರೋದ ವ್ಯಕ್ತವಾಗುತ್ತಿದ್ದಂತೆ ಜಮಾವಣೆಗೊಂಡಿದ್ದ ನೂರಾರು ಜನರು. ಶಿವಮೊಗ್ಗ ಗಲಾಟೆಯಂಥ ಪರಿಸ್ಥಿತಿ ನಿರ್ಮಾಣ. ಜಮಾವಣೆಗೊಂಡಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
undefined
ಮಸೀದಿ ಎದುರು ಮಂಗಳಾರತಿ: ಹಿಂದೂ ಕಾರ್ಯಕರ್ತರ ವಿರುದ್ದ ದೂರು
ಗಲಾಟೆ ಮುನ್ಸೂಚನೆ ಅರಿತು ಪೊಲೀಸರಿಂದ ಮುನ್ನೆಚ್ಚರಿಕೆ ಕ್ರಮ. ಹೆಚ್ಚಿನ ಜನರು ಸ್ಥಳದಲ್ಲಿ ಜಮಾವಣೆಗೊಳ್ಳುತ್ತಲೇ ಎಚ್ಚೆತ್ತ ಪೊಲೀಸ್ ಇಲಾಖೆ. ಮಸೀದಿ ಎದುರು ಡಿ ಜೆ ಬಂದ್ ಮಾಡಿ ಮೆರವಣಿಗೆಯಲ್ಲಿ ಜನರನ್ನ ಕಳಿಸಿದರು. ನಂತರ ಗಣೇಶ ವಿಸರ್ಜನೆಗೆ ಅವಕಾಶ ನೀಡಲಾಯಿತು. ಅಂತೂ ಕೊನೆಗೂ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾದ ಪೋಲೀಸರು. ಗಲಾಟೆ ನಡೆಯುವ ಸಾಧ್ಯತೆಯಿಂದಾಗಿ ಸ್ಥಳದಲ್ಲೇ ಜಿಲ್ಲಾಧಿಕಾರಿ ನಳಿನ್ ಅತುಲ್, ಕೊಪ್ಪಳ ಎಸ್ಪಿ ಯಶೋದಾ ವಂಟಗೋಡಿ ಮುಕ್ಕಾಂ ಹೂಡಿದ್ದರು.
ಗಣೇಶೋತ್ಸವಕ್ಕೆ ಕೇಸರಿಮಯವಾಗಿದ್ದ ಶಿವಮೊಗ್ಗ; ಈದ್ ಮಿಲಾದ್ ಹಸಿರುಮಯವಾಯ್ತು ನಗರ!