ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುವಂತೆ ಗದಗ ಜಿಲ್ಲೆಯ ಮುಂಡರಗಿ ಯುವ ಶಿಲ್ಪಿ ನಾಗಮೂರ್ತಿ ಅವರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಯೋಧ್ಯೆ ಆಹ್ವಾನ ನೀಡಿದೆ.
ಗದಗ (ಡಿ.12): ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುವಂತೆ ಗದಗ ಜಿಲ್ಲೆಯ ಮುಂಡರಗಿ ಶಿಲ್ಪಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಹ್ವಾನ ನೀಡಿದೆ.
ನಾಗಮೂರ್ತಿ ಯುವ ಶಿಲ್ಪಿ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಶಿಲ್ಪಕಲೆ ಶಾಪ್ ನಡೆಸುತ್ತಿರುವ ನಾಗಮೂರ್ತಿ, ಮೂಲತಃ ಕೊಪ್ಪಳ ಜಿಲ್ಲೆ ಕಾತರಕಿ ಗ್ರಾಮದ ನಿವಾಸಿಯಾಗಿದ್ದಾನೆ. ಮೈಸೂರಿನ ಜಿಲ್ಲೆ ಎಚ್.ಡಿ ಕೋಟೆಯಲ್ಲಿ ದೊರೆಯುವ ಕರಿಕಲ್ಲುಗಳನ್ನ (ಕೃಷ್ಣ ಶಿಲೆ) ಬಳಸಿ ಮೂರ್ತಿ ತಯಾರಿ ಮಾಡುವಲ್ಲಿ ಪರಿಣತಿ ಪಡೆದಿದ್ದಾನೆ. ಹಲವು ದೇವಾಲಯಗಳ ಮೂರ್ತಿಗಳನ್ನು ನಿರ್ಮಾಣ ಮಾಡಿ ಸುತ್ತಲಿಂದಲೂ ಸೈ ಎನಿಸಿಕೊಂಡಿರುವ ನಾಗಮೂರ್ತಿ.
ಅಯೋಧ್ಯೆ ರಾಮಲಲ್ಲಾ ಕೆತ್ತನೆಗೆ ಕರಾವಳಿ ಶಿಲ್ಪಿ ಗಣೇಶ್!
ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಗಂಧ ಕಲಾ ಸಂಕಿರಣ ಕಲಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ನಾಗಮೂರ್ತಿ. ಹಲವು ವರ್ಷ ಶಿಲ್ಪ ಕಲೆಯ ಬಗ್ಗೆ ಮುಂಡರಗಿ ವೆಂಕಟೇಶ ಸುತಾರ ಎಂಬವರ ಹತ್ತಿರ ತರಬೇತಿ ಪಡೆದಿದ್ದು, ಈಗ ತಾನೇ ಸ್ವತಂತ್ರವಾಗಿ ಸ್ವ ಉದ್ಯೋಗ ಆರಂಭಿಸಿದ್ದಾನೆ. ಶಿಲ್ಪಕಲೆಯಲ್ಲಿ ಬಹುಕೌಶಲ್ಯ ಹೊಂದಿರುವ ನಾಗಮೂರ್ತಿಗೆ ಇದೀಗ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಮಂತ್ರಣ ನೀಡಿರುವುದಕ್ಕೆ ತುಂಬಾ ಸಂತಸಗೊಂಡಿದ್ದಾನೆ.
ಅಯೋಧ್ಯೆ: ಜ.22ಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ರಾಮಮಂದಿರ ಉದ್ಘಾಟನೆ ಸಾಧ್ಯತೆ!
ಶಿಲ್ಪಿ ನಾಗಮೂರ್ತಿಗೆ ಸ್ಥಳೀಯರಿಂದ ಸನ್ಮಾನ:
ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲಿರುವ ನಾಗಮೂರ್ತಿಗೆ ಸ್ಥಳೀಯರು ಸನ್ಮಾನ ಮಾಡಿ ಗೌರವಿಸಿ ಕಳಿಸಿಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ನಾಗಮೂರ್ತಿ, ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದು ಜನ್ಮ ಪಾವನ ಮಾಡಿಕೊಳ್ಳುತ್ತೇನೆ. ಈ ಸೌಭಾಗ್ಯ ಒದಗಿಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ. ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನನಗೆ ಆಹ್ವಾನ ಬಂದಿದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಶಿಲ್ಪಿ ನಾಗಮೂರ್ತಿ ಅತೀವ ಸಂತಸ ವ್ಯಕ್ತಪಡಿಸಿದರು.
ರಾಮಾಯಣದಲ್ಲಿ ಹನುಮಂತನಂತೆ, ಈಗ ಮೋದಿ ದೇಶಕ್ಕಾಗಿ ತ್ಯಾಗ ಮಾಡ್ತಿದ್ದಾರೆ: ಯೋಗಿ ಆದಿತ್ಯನಾಥ