
ಬೆಂಗಳೂರು (ಡಿ.12): ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಮಾಸುವ ಮುನ್ನವೇ ಇದೀಗ ಅಪರಿಚಿತನೋರ್ವ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ(ಡಿ.11) 11.30ರ ಸುಮಾರಿಗೆ ಎನ್‌ಐಎ ಅಧಿಕಾರಗಳಿಗೆ ಕರೆ ಮಾಡಿರುವ ಅಪರಿಚಿತ, ರಾಜಭವನದಲ್ಲಿ ಬಾಂಬ್ ಇಟ್ಟಿರೋದಾಗಿ ಎನ್‌ಐಎ ಅಧಿಕಾರಿಗಳಿಗೆ ಕರೆ. ಬೆದರಿಕೆ ಕರೆ ಕೂಡಲೇ ಎನ್‌ಐಎ ಅಧಿಕಾರಿಗಳಿಂದ ಪೊಲೀಸರಿಗೆ ಮಾಹಿತಿ ರವಾನೆ. ಕೂಡಲೇ ಅಲರ್ಟ್ ಆಗಿರೋ ಪೊಲೀಸರು. ನಿನ್ನೆ ರಾತ್ರಿಯೇ ಪೊಲೀಸರು, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ನಿಂದ ರಾಜಭವನಕ್ಕೆ ಹೋಗಿ ಸುತ್ತಮುತ್ತ ಪರಿಶೀಲನೆ ನಡೆಸಿರುವ ಭದ್ರತಾ ಅಧಿಕಾರಿಗಳು. ಇದೀಗ ಕರೆ ಮಾಡಿರುವ ನಂಬರ್ ಟ್ರ್ಯಾಕ್ ಮಾಡುತ್ತಿರುವ ಪೊಲೀಸರು.
ಶಾಲೆಗಳಿಗೆ ಬಾಂಬ್ ಬೆದರಿಕೆ ಉಗ್ರರ ಕೆಲಸದಂತಿದೆ: ಆರ್.ಅಶೋಕ್
ರಾಜಭವನ ಒಳ, ಹೊರಗೆ ತೀವ್ರ ತಪಾಸಣೆ ನಡೆಸಿದ್ದು ಸದ್ಯಕ್ಕೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಆದರೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ರಾಜಭವನ ವಿಶಾಲ ಮೈದಾನದಂತಿದ್ದು, ಯಾವ ಜಾಗದಲ್ಲಿ ಇಡಲಾಗಿದೆ ಎಂಬುದು ಕರೆ ಮಾಡಿರುವ ದುಷ್ಕರ್ಮಿ ಸ್ಪಷ್ಟಪಡಿಸಿಲ್ಲ. ಇದೊಂದು ಹುಸಿ ಕರೆ ಆಗಿರಬಹುದು ಅದ್ಯಾಗೂ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಕರೆ ಮಾಡಿರೋ ಅಪರಿಚಿತ ಜಾಡುಹಿಡಿದು ಶೋಧಕಾರ್ಯಕ ನಡೆಸಿರುವ ಪೊಲೀಸರು. ಕರೆ ಮಾಡಿರೋ ವ್ಯಕ್ತಿ ಯಾರು? ಎಲ್ಲಿಂದ ಕರೆ ಮಾಡಿದ್ದಾನೆ. ನಿಜವಾಗಿಯೂ ಉಗ್ರನೇ ಅಥವಾ ದುರುದ್ದೇಶಪೂರ್ವಕವಾಗಿ ಸ್ಥಳೀಯ ವ್ಯಕ್ತಿಯೇ ಬೆದರಿಕೆ ಹಾಕಿದ್ದಾನೆ ಎಲ್ಲ ಆಯಾಮಗಳಲ್ಲೂ ತನಿಖೆಗೆ ಮುಂದಾಗಿರೋ ಪೊಲೀಸರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ