
ಶಿವಮೊಗ್ಗ (ನ.13): ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆಯ ಬಾಲಕ್ಕೆ ಉಂಟಾಗಿದ್ದ ಗಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೆ ಬಿಡಾರದ ಇಬ್ಬರು ಕಾವಾಡಿಗಳನ್ನು ಅಮಾನತ್ತುಗೊಳಿಸಲಾಗಿದೆ.
ಆನೆಯ ಮುತುವರ್ಜಿ ವಹಿಸಿದ್ದ ಕಾವಾಡಿಗಳಾದ ಸುದೀಪ್ ಹಾಗೂ ಮಹಮ್ಮದ್ ಅಮಾನತುಗೊಂಡವರು. ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆ ತುಂಬು ಗರ್ಭಿಣಿ ಆಗಿದ್ದಾಗ ಅ.17ರಂದು ಅದರ ಬಾಲಕ್ಕೆ ಮಚ್ಚಿನಿಂದ ಹೊಡೆದಂತೆ ಗಾಯವಾಗಿದ್ದು, ಅದರ ಅರ್ಧ ಬಾಲ ಜೋತಾಡುತ್ತಿತ್ತು. ಶಸ್ತ್ರಚಿಕಿತ್ಸೆ ನೀಡಿದ ಬಳಿಕ ಆನೆ ಚೇತರಿಕೆ ಕಂಡಿತ್ತು. ಆದರೆ, ಆನೆ ಬಾಲ ಘಾಸಿಗೊಳಿಸಿದ್ದು ಯಾರು?, ಯಾಕೆ ತುಂಡರಿಸುವ ಪ್ರಯತ್ನ ಮಾಡಿದ್ದರು ಎಂಬುದಕ್ಕೆ ಈವರೆಗೂ ನಿಖರ ಉತ್ತರ ಸಿಕ್ಕಿಲ್ಲ. ಕರ್ತವ್ಯ ನಿರ್ಲಕ್ಷ್ಯಕಾರಣ ಎಂಬ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಅಮಾನತು ಮಾಡಲಾಗಿದೆ. ಭಾನುಮತಿ ಆನೆ ಈಗಾಗಲೇ ಹೆಣ್ಣುಮರಿಗೆ ಜನ್ಮ ನೀಡಿದೆ.
ಸಕ್ರೆಬೈಲಿನಲ್ಲಿ ವಿಶ್ವ ಆನೆಗಳ ದಿನಾಚರಣೆ: ವಿಶಿಷ್ಟವಾಗಿ ಸಿಂಗಾರಗೊಂಡ ಗಜಪಡೆ!
ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದ ಡಿಎಫ್‌ಓ ಪ್ರಸನ್ನ ಕೃಷ್ಟ ಪಟಗಾರ್. ಭಾನುಮತಿ ಆನೆ ಬಾಲ ಕಟ್ ಮಾಡಿದ್ದು ಸಕ್ರೈಬೈಲು ಆನೆ ಬಿಡಾರದ ಸಿಬ್ಬಂದಿಯೇ ಆಗಿದ್ದಾರೆ ಎಂದಿದ್ದ ವರದಿ. ತನಿಖೆ ವೇಳೆ ಬಹಿರಂಗವಾದ ಸಿಬ್ಬಂದಿಯ ಕಿಡಿಗೇಡಿತನ. ಆನೆ ಬಿಡಾರದ ಸಿಬ್ಬಂದಿಗಳ ನಡುವಿನ ವೈಷಮ್ಯದಿಂದ ನಡೆದಿದ್ದ ಆನೆ ಬಾಲ ಕಟ್ ಎನ್ನಲಾಗಿತ್ತು. ಸಿಬ್ಬಂದಿಯ ನಿರ್ಲಕ್ಷದ ವಿರುದ್ಧ ಪ್ರಕರಣ ದಾಖಲು. ಹೆಚ್ಚಿನ ತನಿಖೆಗೆ ಮುಂದಾಗಿರುವ ಅರಣ್ಯಾಧಿಕಾರಿಗಳು.
ಸಕ್ರೆಬೈಲು ಆನೆ ಬಿಡಾರದಿಂದ ಮತ್ತೆ 3 ಆನೆಗಳು ಶಿಫ್ಟ್?: ಮಧ್ಯಪ್ರದೇಶದಿಂದ ಅರಣ್ಯ ಇಲಾಖೆಗೆ ಮತ್ತೆ ಬೇಡಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ