ಮಹಿಳಾ ಹಾಸ್ಟೆಲ್‌, ವೃದ್ಧಾಶ್ರಮ ಸ್ಥಾಪನೆಗೆ ಮುಂದಾದ ಬಿಬಿಎಂಪಿ

Published : Nov 13, 2023, 06:43 AM IST
ಮಹಿಳಾ ಹಾಸ್ಟೆಲ್‌, ವೃದ್ಧಾಶ್ರಮ ಸ್ಥಾಪನೆಗೆ ಮುಂದಾದ ಬಿಬಿಎಂಪಿ

ಸಾರಾಂಶ

ಬಿಬಿಎಂಪಿಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಮಹಿಳಾ ಉದ್ಯೋಗಿಗಳಿಗೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಹಾಸ್ಟೆಲ್‌ ಸ್ಥಾಪನೆಗೆ ₹24 ಕೋಟಿ, ‘ಶ್ರವಣ’ ವಸತಿ ಹೆಸರಿನಲ್ಲಿ ವೃದ್ಧಾಶ್ರಮ ಸ್ಥಾಪನೆಗೆ ₹16 ಕೋಟಿ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಬಿಬಿಎಂಪಿ ಒಟ್ಟು ₹318 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಿದೆ.

ಬೆಂಗಳೂರು (ನ.13) :  ಬಿಬಿಎಂಪಿಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಮಹಿಳಾ ಉದ್ಯೋಗಿಗಳಿಗೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಹಾಸ್ಟೆಲ್‌ ಸ್ಥಾಪನೆಗೆ ₹24 ಕೋಟಿ, ‘ಶ್ರವಣ’ ವಸತಿ ಹೆಸರಿನಲ್ಲಿ ವೃದ್ಧಾಶ್ರಮ ಸ್ಥಾಪನೆಗೆ ₹16 ಕೋಟಿ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಬಿಬಿಎಂಪಿ ಒಟ್ಟು ₹318 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಿದೆ.

ನಗರದ ಪೌರಕಾರ್ಮಿಕರು, ಮತ್ತವರ ಅವಲಂಬಿತರು, ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ಹಿರಿಯ ನಾಗರಿಕರು ಸೇರಿದಂತೆ ವಿವಿಧ ಸಮುದಾಯದವರ ಕಲ್ಯಾಣಾಭಿವೃದ್ಧಿಗೆ 2023-24ನೇ ಸಾಲಿನಲ್ಲಿ ಮೀಸಲಿಟ್ಟ ಅನುದಾನದ ವೆಚ್ಚ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಿದೆ.

ಶ್ರವಣ ವಸತಿ ಹೆಸರಿನಲ್ಲಿ ವೃದ್ಧಾಶ್ರಮ ಸ್ಥಾಪನೆಗೆ ಮೀಸಲಿಟ್ಟ ಒಟ್ಟು ₹16 ಕೋಟಿಗಳಲ್ಲಿ ಬಿಬಿಎಂಪಿಯ ಪ್ರತಿ ವಲಯದಲ್ಲಿ ತಲಾ 2 ವಸತಿ ನಿಲಯ ಸ್ಥಾಪಿಸಲಿದೆ. ಇವುಗಳನ್ನು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ.

ಎಡಿಜಿಪಿ ಹರಿಶೇಖರನ್‌ ಹೆಸರಿನಲ್ಲಿನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ!

ಎಸ್ಸಿ-ಎಸ್ಟಿ ಪೌರಕಾರ್ಮಿಕರು ಮತ್ತು ಕುಟುಂಬಕ್ಕೆ ₹54 ಕೋಟಿ:

ಪೌರಕಾರ್ಮಿಕರು ಮತ್ತು ಗ್ಯಾಂಗ್‌ಮ್ಯಾನ್‌ಗಳ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ₹8 ಕೋಟಿ, ಪೌರಕಾರ್ಮಿಕರ ಬಿಸಿಯೂಟಕ್ಕೆ ₹30 ಕೋಟಿ, ಪೌರಕಾರ್ಮಿಕರ ಕುಟುಂಬ ಆರೋಗ್ಯಕ್ಕೆ ₹2.50 ಕೋಟಿ, ಪೌರಕಾರ್ಮಿಕರ ಕಲ್ಯಾಣಕ್ಕೆ ₹6.50 ಕೋಟಿ, ಪೌರಕಾರ್ಮಿಕರಿಗೆ ವೈಯಕ್ತಿಕ ಮನೆ ನಿಮಾರ್ಣಕ್ಕೆ ₹5 ಕೋಟಿ.

ಎಸ್ಸಿ-ಎಸ್ಟಿ ಕಲ್ಯಾಣಕ್ಕೆ ₹92 ಕೋಟಿ:

ಎಸ್ಸಿ,ಎಸ್ಟಿ ಸಮುದಾಯದ ವೈಯಕ್ತಿಕ ಸೌಲಭ್ಯಗಳಡಿ ಆರೋಗ್ಯ, ಶಿಕ್ಷಣಕ್ಕೆ ತಲಾ ₹2 ಕೋಟಿ, ವಸತಿ ಯೋಜನೆಗೆ ₹45 ಕೋಟಿ. ಈ ಸಮಯದಾಯದ ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ ಸೇರಿದಂತೆ ಇತರೆ ಕಾರ್ಯಕ್ರಮಕ್ಕೆ ₹6 ಕೋಟಿ ಮೀಸಲಿಡಲಾಗಿದೆ.

ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ₹57.40 ಕೋಟಿ, ಆರ್ಥಿಕವಾಗಿ ಹಿಂದುಳಿದವರಿಗೆ ₹19 ಕೋಟಿ, ಅಂಗವಿಕಲರಿಗೆ ₹39 ಕೋಟಿ, ಮಹಿಳಾ ಕಲ್ಯಾಣಕ್ಕೆ ₹10 ಕೋಟಿ, ಹಿರಿಯ ನಾಗರಿಕರ ಕಲ್ಯಾಣಕ್ಕೆ ₹1 ಕೋಟಿ, ಲೈಂಗಿಕ ಅಲ್ಪಸಂಖ್ಯಾತರಿಗೆ ₹1 ಕೋಟಿ, ಬೀದಿ ಬದಿ ವ್ಯಾಪಾರಿಗಳಿಗೆ ₹25.60 ಕೋಟಿ, ರಾತ್ರಿ ತಂಗುದಾಣಗಳ ನಿರ್ಮಾಣ ಮತ್ತು ನಿರ್ವಹಣೆಗೆ ₹3 ಕೋಟಿ, ಸಾಮಾನ್ಯರ ಕಲ್ಯಾಣಕ್ಕೆ ₹3 ಕೋಟಿ ಹಾಗೂ ಇತರೆ ಕಲ್ಯಾಣ ಕಾರ್ಯಕ್ರಮಕ್ಕೆ ₹13.60 ಕೋಟಿ, ಟೈಲರಿಂಗ್‌, ನಿಟ್ಟಿಂಗ್‌ ಎಂಬ್ರಾಯಿಡಿರಿ, ಕಾಯರ್ ತರಬೇತಿ ಕೇಂದ್ರದ ಸಿಬ್ಬಂದಿಗೆ ಗೌರವ ಧನ ನೀಡಲು ₹8 ಕೋಟಿ, ಹಿಂದುಳಿದ ವರ್ಗದ ಒಂಟಿ ಮನೆ ಯೋಜನೆಗೆ ₹4 ಕೋಟಿ, ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲು ₹12 ಕೋಟಿ, ಬೀದಿ ಬದಿ ವ್ಯಾಪಾರಿಗಳ ಕಲ್ಯಾಣ ಕಾರ್ಯಕ್ರಮಕ್ಕೆ ₹20 ಕೋಟಿ, ಮಹಿಳಾ ಕಲ್ಯಾಣ ಕಾರ್ಯಕ್ರಮಕ್ಕೆ ವಿಧಾನಸಭಾ ಕ್ಷೇತ್ರವಾರು ಹಂಚಿಕೆಗೆ ₹4 ಕೋಟಿ ಸೇರಿದಂತೆ ಒಟ್ಟಾರೆ ₹318 ಕೋಟಿ ಹಂಚಿಕೆ ಮಾಡಲಾಗಿದೆ.

ಬೆಂಗಳೂರು: ಪೌರಕಾರ್ಮಿಕರು, ದಲಿತ ಹೆಣ್ಣುಮಕ್ಕಳ ವಿವಾಹಕ್ಕೆ ಬಿಬಿಎಂಪಿಯಿಂದ 1 ಲಕ್ಷ ನೆರವು

ಎಸ್ಸಿ ಸಮುದಾಯಕ್ಕೆ ಶೇ.17 ಅನುದಾನ

ಬಿಬಿಎಂಪಿಯ ಒಟ್ಟು ಬಜೆಟ್‌ನಲ್ಲಿ ಎಸ್ಸಿ ಸಮುದಾಯಕ್ಕೆ ಶೇ.17.15ರಷ್ಟು, ಎಸ್ಟಿ ಸಮುದಾಯಕ್ಕೆಶೇ.6.95, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಕ್ಕೆ 7.25, ಅಂಗವಿಕಲರಿಗೆ ಶೇ.5ರಷ್ಟು ಅನುದಾನ ಮೀಸಲಿಡಲಾಗಿದೆ. ಭೌತಿಕ ಅರ್ಜಿ ಆಹ್ವಾನಿಸಿ ಸೌಲಭ್ಯಗಳನ್ನು ಹಂಚಿಕೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌