ಇತ್ತೀಚೆಗೆ ದೇಶಗೋಸ್ಕರ ವಂದೇ ಮಾತರಂ ಹಾಡು ಹೇಳಿ ಎಂದು ಪೋಸ್ಟ್‌ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆಗೆ ಕಾಡಿದ್ದವಳು, ಇದೀಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾಳೆ.
ಬೆಂಗಳೂರು, (ಫೆ.20): ಹುಬ್ಬಳ್ಳಿ ಆಯ್ತು ಇದೀಗ ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿಬಂದಿದೆ.
ಇಂದು (ಗುರುವಾರ) ಬೆಂಗಳೂರಿನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಬಟನೆಯಲ್ಲಿ ಎಡಪಂಥಿಯಲ್ಲಿ ಗುರುತಿಸಿಕೊಂಡಿರುವ ಯುವತಿ ಅಮೂಲ್ಯ ಲಿಯೋನಾ ಎನ್ನವಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾಳೆ.
ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ
ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹಿಂದೂ-ಮುಸ್ಲಿಂ-ಸಿಖ್- ಈಸಾಯಿ ಫೆಡರೇಷನ್ ಬೆಂಗಳೂರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿವಾದ ಸೃಷ್ಟಿಯಾಗಿದೆ.
ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ವೇದಿಕೆ ಆಗಮಿಸುತ್ತಿದ್ದಂತೆ ವೇದಿಕೆ ಮೇಲೆ ಆಸನರಾಗಿದ್ದ ಯುವ ಹೋರಾಟಗಾರ್ತಿ ಅಮೂಲ್ಯ ಲಿಯೋನ್ ಎಂಬಾಕೆ ಮೈಕ್ ಕೈಗೆತ್ತಿಕೊಂಡು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ಕೂಡಲೇ ಒವೈಸಿ ಮೈಕ್ ಕಸಿದುಕೊಳ್ಳಲು ಪ್ರಯತ್ನಿಸಿದರೂ ಸಹ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾಳೆ.
ವಿಮಾನ ನಿಲ್ದಾಣದಲ್ಲಿ ದೇಶ ಭಕ್ತಿ ಪಾಠ ಮಾಡಿದ್ದ ಅಮೂಲ್ಯ
ಇತ್ತೀಚೆಗೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ಹೋಗಿದ್ದ ಸಂದರ್ಭದಲ್ಲಿ ಕವಿತಾ ರೆಡ್ಡಿ, ಅಮೂಲ್ಯ ಲಿಯೋನ ಹಾಗೂ ನಜ್ಮಾ ನಜೀರ್ ಎಂಬ ವಿದ್ಯಾರ್ಥಿನಿಯರು ಪೋಸ್ಟ್‌ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ದೇಶಕ್ಕೋಸ್ಕರ ವಂದೇ ಮಾತರಂ ಹಾಡಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಅರ್ನಬ್ ಆಯ್ತು, ಈಗ ಪೋಸ್ಟ್ ಕಾರ್ಡ್ ಸಂಪಾದಕನಿಗೆ ಅವಮಾನ
ಪೋಸ್ಟ್ ಕಾರ್ಡ್‌ನ ಮುಖಾಂತರ ಎಲ್ಲರಿಗೂ ದೇಶಪ್ರೇಮದ ಪಾಠ ಮಾಡುವ ನೀವು ದಯವಿಟ್ಟು ನಮ್ಮ ಜೊತೆ ವಂದೇ ಮಾತರಂ ಎಂದು ಘೋಷವಾಕ್ಯ ಹೇಳಿ ಎಂದು ಕೇಳಿಕೊಂಡಿದ್ದರು. ಆದರೆ ಇದಕ್ಕೆ ಒಪ್ಪದ ಮಹೇಶ್ ವಿಕ್ರಮ್ ವಂದೇ ಮಾತರಂ ಹೇಳದೇ ಕೊನೆಯವರೆಗೂ ನಗುತ್ತಲೇ ಕುಳಿತ್ತಿದ್ದರು.
ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಅದು ವಂದೇ ಮಾತರಂ ಹಾಡು ಹಾಡಿ ಎಂದಿದ್ದವಳು ಇಂದು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಕಿಡಿಹೊತ್ತಿಸಿದ್ದಾಳೆ.
ಇದೀಗ ಅಮೂಲ್ಯಳನ್ನ ಪೊಲೀಸರು ಬಂಧಿಸಿದ್ದು, ದೇಶದ್ರೋಹಿ ಹೇಳಿಕೆ ಹಿನ್ನೆಲೆಯಲ್ಲಿ ಪೋಲಿಸರು ಸ್ವಯಂ ಪ್ರೇರಿತ ಕೇಸ್ (ಸುಮಟೋ) ದಾಖಲಿಸಿಕೊಂದಿದ್ದಾರೆ.
ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್