ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ

By Suvarna News  |  First Published Feb 20, 2020, 7:15 PM IST

ಹುಬ್ಬಳ್ಳಿ ಆಯ್ತು ಇದೀಗ ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮೊಳಗಿದೆ. ಎಡಪಂಥಿಯಲ್ಲಿ ಗುರುತಿಸಿಕೊಂಡಿರುವ ಯುವತಿಯೊಬ್ಬಳ ಬಾಯಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾಳೆ.


ಬೆಂಗಳೂರು, (ಫೆ.20): ಹುಬ್ಬಳ್ಳಿ ಆಯ್ತು ಇದೀಗ ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿ, ದೇಶದ್ರೋಹದ ಕಾರ್ಯವೆಸಗಿದ್ದಾರೆ.

ಇಂದು (ಗುರುವಾರ) ಬೆಂಗಳೂರಿನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಎಡಪಂಥಿಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ಕೊಪ್ಪ ಮೂಲದ ಯುವತಿ ಅಮೂಲ್ಯ ಲಿಯೋನಾ ಎನ್ನವಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು, ದೇಶದ್ರೋಹದ ಆರೋಪ ಎದುರಿಸಬೇಕಾಗಿದೆ. ಕರೆಯದೇ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಪಾಕ್ ಘೋಷಣೆ ಕೂಗಿ ಇದೀಗ ಆಯೋಜಕರ ಮುಜುಗರಕ್ಕೆ ಕಾರಣವಾಗಿದ್ದಾಳೆ.

Tap to resize

Latest Videos

undefined

ಇದನ್ನೂ ನೋಡಿ | ಅಮಿತ್ ಶಾ ಒಬ್ಬ ಟೆರರಿಸ್ಟ್ ಎಂದು ನಾಲಿಗೆ ಹರಿಬಿಟ್ಟಿದ್ದ ಅಮೂಲ್ಯಾ

ಕೇಂದ್ರ ಸರ್ಕಾರದ ಪೌರತ್ವ ತಿದ್ಧಪಡಿ ಕಾಯ್ದೆಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭಾಗವಹಿಸಿದ್ದರು. ಈ ವೇಳ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾಳೆ. ಓವೈಸಿ  ಬೇಡವೆಂದು ಮೈಕ್ ಕಸೆದುಕೊಂಡ್ರು ಬಿಡದ ಅಮೂಲ್ಯ ಘೋಷಣೆ ಹಾಕಿದ್ದಾಳೆ. 

ಶಾಹೀನ್‌ಬಾಗ್ ಹಿಂಭಾಗದಲ್ಲಿ ಕಾಂಡೋಮ್ ರಾಶಿ ಸಿಕ್ಕಿದ್ದು ಹೌದಾ?

ಉಡುಪಿಯಲ್ಲಿ ಸಹಬಾಳ್ವೆ ವತಿಯಿಂದ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಷಣ ಮಾಡಲು ಹೋರಾಟಗಾರ್ತಿಯರಾದ ನಜ್ಮಾ ನಝೀರ್‌ ಚಿಕ್ಕನೇರಳೆ, ಕವಿತಾ ರೆಡ್ಡಿ ಮತ್ತು ಅಮೂಲ್ಯ ಲಿಯೋನಾ ಬಂದಿದ್ದರು. ಈ ವೇಳೆ ಪೋಸ್ಟ್‌ಕಾರ್ಡ್‌ ಖ್ಯಾತಿಯ ಮಹೇಶ್ ವಿಕ್ರಮ್ ಹೆಗ್ಡೆಯನ್ನು ದೇಶಕ್ಕೋಸ್ಕರ ವಂದೇ ಮಾತರಂ ಹಾಡಿ ಎಂದು ಅಮೂಲ್ಯಾ ಪೀಡುಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

ಇದೀಗ ತಾನೇ ದೇಶ ಪ್ರೇಮವನ್ನ ಮರೆತು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ಫ್ರೀಡಂ ಪಾರ್ಕ್‌ನಲ್ಲಿ ಹಿಂದು ಮುಸ್ಲಿಂ ಸಿಖ್ ಇಸಾಯಿ ಫೌಂಡೇಷನ್ ಆಯೋಜಿಸಿದ್ದ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಈ ಘೋಷಣೆ ಕೂಗಿ, ದೇಶ ದ್ರೋಹಿ ಕೃತ್ಯವೆಸಗಿದ್ದಾಳೆ. ಇದೇ ವೇದಿಕೆಯಲ್ಲಿ AIMIM ಮುಖ್ಯಸ್ಥ ಓವೈಸಿ ಸಹ ಹಾಜರಿದ್ದು, ಅಮೂಲ್ಯ ಈ ಘೋಷಣೆಗೆ ತಕ್ಷಣವೇ ವಿರೋಧ ವ್ಯಕ್ತಪಡಿಸಿದರು. ಜೊತೆಗಿದ್ದವರೂ ಪಾಕ್ ಪರ ಘೋಷಣೆ ಕೂಗದಂತೆ ಕೇಳಿಕೊಂಡರೂ ಬಿಡದೇ, ತಮ್ಮ ಪಾಕ್ ಪ್ರೇಮ ಮೆರೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣವೇ ಪೊಲೀಸರು ಈಕೆಯನ್ನು ಬಂಧಿಸಿದ್ದು, ದೇಶದ್ರೋಹ ಪ್ರಕರಣವನ್ನು ಪೊಲೀಸರು ದಾಖಲಿಸುವ ಸಾಧ್ಯತೆ ಇದೆ. ಉಪ್ಪಾರಪೇಟೆ ಪೊಲೀಸರು NMKRV ವಿದ್ಯಾರ್ಥಿನಿಯಾಗಿದ್ದ ಈಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ. 

ಇವರ ಪುಂಡಾಟ ಇದೇನು ಮೊದಲಲ್ಲ. ಈ ಹಿಂದೆ ವಿಜಯಪುರದಲ್ಲಿ ಅಮಿತ್ ಓರ್ವ ಟೆರರಿಸ್ಟ್ ಎಂದು ವಿವದಾತ್ಮಕ ಹೇಳಿಕೆ ನೀಡಿ, ಸುದ್ದಿಯಾಗಿದ್ದಳು. 

ಕೃಷಿಕ ಮೂಲದವಳು ಅಮೂಲ್ಯ:
ಬೆಂಗಳೂರಿನ ಪ್ರತಿಭಟನೆ ವೇಳೆಯಲ್ಲಿ ಪಾಕ್ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ನರೋನ್ಹಾ ಮಲೆನಾಡಿನ ಕೊಪ್ಪ ಮೂಲದವರು. ಈಕೆಯ ತಂದೆ ವಾಜಿ‌ ಕೊಪ್ಪ ಶಿವಪುರ ಬಳಿಯ ಗುಬ್ಬಗದ್ದೆಯ ಮೂಲದವರು. ಕೃಷಿಕ ಕುಟುಂಬದಲ್ಲಿ ಜನಿಸಿದ ಈಕೆ ಮಲೆನಾಡಿನಲ್ಲಿ ತುಂಗಾ ತಿರುವು ಯೋಜನೆ ವಿರೋಧಿಸಿ, ನಡೆದ ಅಪ್ಪಿಕೋ ಚಳುವಳಿಯಲ್ಲಿ  ಮುಂಚೂಣಿಯಲ್ಲಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರು ಇವರ ಮನೆಗೆ ಒಮ್ಮೆ ಭೇಟಿ ನೀಡಿದ್ದರು. ಮೈಸೂರಿನ ಸದ್ವಿದ್ಯಾ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಎನ್ಎಂಕೆಆರ್ವಿ ಕಾಲೇಜಿನಲ್ಲಿ ಪಿಯು ಹಾಗೂ ಪ್ರಸ್ತುತ ಬಿಎ ವ್ಯಾಸಂಗ ಮಾಡಿದ್ದಾಳೆ. ಗೌರಿ ಲಂಕೇಶ್ ವಿಚಾರಧಾರೆಗಳಿಂದ ಪ್ರಭಾವಿತಳಾದ ಎಡಪಂಥೀಯ ಆ್ಯಕ್ಟಿವಿಸ್ಟ್. ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾಳೆ.  

ಅಮೂಲ್ಯರನ್ನು ಕಾರ್ಯಕ್ರಮಕ್ಕೆ ಕರೆದಿರಲಿಲ್ಲ
ಸೋಷಿಯಲ್ ಆ್ಯಕ್ಟಿವಿಸ್ಟ್ ಅಮೂಲ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಯೇ ಇರಲಿಲ್ಲ. ಬೇಕು ಅಂತ ಇಲ್ಲಿ ಬಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಇಂಥ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ತನಿಖೆಯಾಗಬೇಕೆಂದು, ಕಾರ್ಪೋರೇಟರ್ ಇಮ್ರಾನ್ ಪಾಷಾ ಹೇಳಿದ್ದಾರೆ. 

 ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!