
ಸಂಡೂರು (ಫೆಬ್ರವರಿ 23, 2023): ಬಿಜೆಪಿಯ ಚಾಣಕ್ಯ ಅಮಿತ್ ಶಾ ಗಣಿ ನಾಡಿನ ಸಂಡೂರಿನಲ್ಲಿ ಮತ ಬೇಟೆ ನಡೆಸಿದ್ದಾರೆ. ಸಂಡೂರಿನಲ್ಲಿ ಕಮಲ ಅರಳಿಸಲು ಬಿಜೆಪಿ ಮೆಗಾ ಪ್ಲ್ಯಾನ್ ಮಾಡ್ತಿದ್ದು, ಈ ಹಿನ್ನೆಲೆ ಅಮಿತ್ ಶಾ ಚುನಾವಣಾ ಕಮಲದ ಪರ ಭರ್ಜರಿ ಪ್ರಚಾರ ನಡೆಸಿದ್ರು. ಇದು ಹನುಮ ಜನ್ಮಸ್ಥಳದ ನೆಲ. ಹೀಗಾಗಿ ಈ ನೆಲದಲ್ಲಿ ನಮನ ಸಲ್ಲಿಸುತ್ತೇನೆ ಎಂದು ಹೇಳಿದ್ರು. ಹಾಗೂ, ಸಂಡೂರಿನ ಆರಾಧ್ಯದೈವ ಕುಮಾರ ಸ್ವಾಮಿಗೆ ಸಹ ಅವರು ನಮನ ಸಲ್ಲಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ತಡವಾಗಿದ್ದಕ್ಕೆ ಕ್ಷೇಮೆ ಕೇಳ್ತೆನೆ. ತಡವಾದ್ರೂ ಸಂಡೂರು ಜನರು ಇದ್ದೀರಾ. ಹೀಗಾಗಿ ಸಂಡೂರು ಗೆಲ್ತೇವೆ ಅಂತ ವಿಸ್ವಾಸ ವ್ಯಕ್ತಪಡಿಸಿದರು. 2008ರಲ್ಲಿ, 2018ರಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬರಲಿಲ್ಲ. ಈ ಹಿನ್ನೆಲೆ ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತ ನೀಡಲು ಮನವಿ ಮಾಡ್ತೇವೆ ಎಂದು ಅಮಿತ್ ಶಾ ಮತದಾರರನ್ನು ಕೇಳಿಕೊಂಡಿದ್ದಾರೆ.
ಇದನ್ನು ಓದಿ: Amit shah interview :ಕುಟುಂಬ ರಾಜಕೀಯಕ್ಕೆ ಕರ್ನಾಟಕ ಗುಡ್‌ಬೈ: ಅಮಿತ್ ಶಾ
ಕಾಂಗ್ರೆಸ್ ಜೆಡಿಎಸ್ ಕುಟುಂಬ ರಾಜಕೀಯ ಮಾಡ್ತಿವೆ. ಕುಟುಂಬ ರಾಜಕೀಯದಿಂದ ಯಾವುದೇ ಅಭಿವೃದ್ಧಿ ಅಗಲ್ಲ. ನೀವು ಜೆಡಿಎಸ್‌ಗೆ ಓಟು ಹಾಕಿದ್ರೆ ಅದು ಕಾಂಗ್ರೆಸ್ ಪಾಲಾಗುತ್ತೆ. ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ಕೊಟ್ರೆ ದೆಹಲಿಯಲ್ಲಿ ಕಾಂಗ್ರೆಸ್‌ಗೆ ಎಟಿಎಂ ಆಗುತ್ತೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕಳೆದ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದರೂ ಪೂರ್ಣ ಬಹುಮತ ಸಿಗಲಿಲ್ಲ. ಬಳಿಕ ಕಾಂಗ್ರೆಸ್ - ಜೆಡಿಎಸ್ ಅಧಿಕಾರಕ್ಕೆ ಬಂದು ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ನಡೆಸಿದವು. ಈ ಹಿನ್ನೆಲೆ ಈ ಬಾರಿ ಕಮಲ ಚಿಹ್ನೆಗೆ ನಿಮ್ಮ ಮತ ಹಾಕುತ್ತೀರಲ್ವ ಎಂದು ಅಮಿತ್ ಶಾ ಸಂಡೂರಿನ ಜನತೆಗೆ ಅಮಿತ್ ಶಾ ಕೇಳಿಕೊಂಡರು.
ಅಲ್ಲದೆ, ದೇಶದಲ್ಲಿ ಕಾಂಗ್ರೆಸ್‌ನದು ತುಕಡೆ ತುಕಡೆ ಪಕ್ಷವಾಗಿದೆ. ಪ್ರಧಾನಿ ಮೋದಿ ಸರ್ಕಾರ ಪಿಎಫ್‌ಐ ಅನ್ನು ಬ್ಯಾನ್ ಮಾಡಿದೆ. ಆದರೆ, ಕಾಂಗ್ರೆಸ್ ಪಿಎಫ್‌ಐ ಮೇಲಿನ ಪ್ರಕರಣ ವಾಪಸ್ ಪಡೆದಿತ್ತು. ದಶಕಗಳಿಂದ ಕಾಂಗ್ರೆಸ್ ಅಳಿದ್ರು ಯಾವುದೇ ಕೆಲಸ ಮಾಡಲಿಲ್ಲ. ಹಾಗೆ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಪಾಕಿಸ್ತಾನದವರು ಹಲವು ಬಾರಿ ದಾಳಿ ಮಾಡಿದ್ರೂ ತುಟಿ ಬಿಚ್ಚಲಿಲ್ಲ. ಆದ್ರೆ ಮೋದಿ ಇದ್ದಾಗ ಸರ್ಜಿಕಲ್ ಸ್ಟ್ರೈಕ್ ಮಾಡಿದ್ವಿ. ಪಾಕಿಸ್ತಾನಕ್ಕೆ ನುಗ್ಗಿ ಹೊಡೆದ್ರು ಎಂದೂ ಅಮಿತ್ ಶಾ ಸಂಡೂರಿನಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ದಳಪತಿಯ "ಬ್ರಾಹ್ಮಣ ಸಿಎಂ" ಬಾಣಕ್ಕೆ "ಶಾ" ತಿರುಗುಬಾಣ! ಬೊಮ್ಮಾಯಿನೇ ಬಾದ್'ಶಾ' ಇದು ಶಾ ಶಾಸನ!
ಮೋದಿ ದೇಶದ 130 ಕೋಟಿ ಜನರಿಗೆ ಉಚಿತ ವ್ಯಾಕ್ಸಿನ್ ನೀಡಿದ್ರು. ಮೋದಿ ಸರ್ಕಾರ ಇದೀಗ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ದೇಶ ಇಂದು ಭಯೋತ್ಪಾದನೆಯಿಂದ ಮುಕ್ತವಾಗಿದ್ದು, ಮೋದಿ ಸರ್ಕಾರ ಸುರಕ್ಷಿತ ದೇಶವನ್ನು ನಿರ್ಮಾಣ ಮಾಡಿದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದ ಬಳಿಕ ಶಾಂತಿ ನೆಲೆಸಿದೆ. ರೈತರಿಗೆ 6 ಸಾವಿರ ಸಬ್ಸಿಡಿ ನೀಡಲಾಗ್ತಿದೆ ಎಂದು ಮೋದಿ ಸರ್ಕಾರ ಹೊಗಳಿದ್ದಾರೆ.
ಈ ಹಿನ್ನೆಲೆ, ಮೋದಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಮೋದಿ ಕೈ ಬಲ ಪಡಿಸಲು ರಾಜ್ಯದಲ್ಲೂ ಬಿಜೆಪಿಗೆ ಬೆಂಬಲ ನೀಡಿ ಎಂದೂ ಅಮಿತ್ ಶಾ ಕೇಳಿಕೊಂಡಿದ್ದಾರೆ. ರಾಜ್ಯದಲ್ಲೂ ಬೊಮ್ಮಾಯಿ ಸರ್ಕಾರ ಸಹ ಹಲವು ಯೋಜನೆಗಳನ್ನು ಘೋಷಣೆ ಮಾಡಿದೆ ಎಂದೂ ಅಮಿತ್ ಶಾ ರಾಜ್ಯ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಫೆ.27ಕ್ಕೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ
ಇನ್ನು, ವಿಜಯ ಸಂಕಲ್ಪ ಸಮಾವೇಶದ ಬಳಿಕ ಅಮಿತ್ ಶಾ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನ ಮಾಡಲಾಯ್ತು. ಸಚಿವ ಶ್ರಿ ರಾಮುಲು ಸನ್ಮಾನ ಮಾಡಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಹಲವರು ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ