ಮಂಗಳೂರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಎತ್ತಂಗಡಿ: ಕುಲದೀಪ್‌ ಜೈನ್ ಹೊಸ ಕಮಿಷನರ್

Published : Feb 23, 2023, 03:29 PM ISTUpdated : Feb 23, 2023, 04:29 PM IST
ಮಂಗಳೂರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಎತ್ತಂಗಡಿ: ಕುಲದೀಪ್‌ ಜೈನ್ ಹೊಸ ಕಮಿಷನರ್

ಸಾರಾಂಶ

ಸಾರ್ವಜನಿಕರಿಂದ ಹಲವು ವಿರೋಧಗಳನ್ನು ಎದುರಿಸುತ್ತಿದ್ದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್‌ ಅವರನ್ನು ಎತ್ತಂಗಡಿ ಮಾಡಿರುವ ಸರ್ಕಾರ, ಕುಲದೀಪ್‌ ಕುಮಾರ್‌ ಆರ್. ಜೈನ್‌ ಅವರನ್ನು ನೂತನ ಪೊಲೀಸ್‌ ಕಮಿಷನರ್‌ ಆಗಿ ನಿಯೋಜನೆ ಮಾಡಿದೆ.

ಬೆಂಗಳೂರು (ಫೆ.23): ಸಾರ್ವಜನಿಕರಿಂದ ಹಲವು ವಿರೋಧಗಳನ್ನು ಎದುರಿಸುತ್ತಿದ್ದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್‌ ಅವರನ್ನು ಎತ್ತಂಗಡಿ ಮಾಡಿರುವ ಸರ್ಕಾರ, ಈಗ ಮಂಗಳೂರು ನಗರಕ್ಕೆ ಕುಲದೀಪ್‌ ಕುಮಾರ್‌ ಆರ್. ಜೈನ್‌ ಅವರನ್ನು ಪೊಲೀಸ್‌ ಕಮಿಷನರ್‌ ಆಗಿ ನಿಯೋಜನೆ ಮಾಡಿದೆ.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಹುದ್ದೆಯಿಂದ ನಿರ್ಗಮಿತರಾದ ಎನ್. ಶಶಿಕುಮಾರ್‌ ಅವರನ್ನು ರೈಲ್ವೆ ವಿಭಾಗದ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಆಗಿದ್ದ ಕುಲದೀಪ್‌ ಕುಮಾರ್‌ ಜೈನ್‌ ಅವರು ಮಂಗಳೂರಿಗೆ ಪೊಲೀಸ್ ಆಯುಕ್ತರಾಗಿ ಬಂದಿದ್ದಾರೆ. ಸಾರ್ವಜನಿಕವಾಗಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ವಿರುದ್ದ ಸಾಕಷ್ಟು ಆರೋಪ ಕೇಳಿ ಬಂದಿದ್ದವು.

IAS vs IPS: ರೋಹಿಣಿ ಸಿಂಧೂರಿ, ರೂಪಾ ಸೇರಿ ಮನೀಶ್‌ ಮೌದ್ಗಿಲ್‌ಗೆ ಎತ್ತಂಗಡಿ ಶಾಕ್‌

ಅಪರಾಧ ಪ್ರಕರಣಗಳ ನಿಯಂತ್ರಣದಲ್ಲಿ ಯಶಸ್ಸು: ಸುಮಾರು 2 ವರ್ಷಗಳಿಂದ ಸುಮಾರು ಘಟನೆಗಳನ್ನು ನಿಯಂತ್ರಣಕ್ಕೆ ತಂದಿದ್ದರು ಎಂಬ ಮೆಚ್ಚಿಗೆ ಇದ್ದರೂ ಕೂಡ, ಅವರ ಬಗ್ಗೆ ವಿವಿಧ ಕಾರಣಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಒಂದು ಪ್ರಕರಣದಲ್ಲಿ ಆರೋಪ ಕೇಳಿಬಂದಿದ್ದು, ಲೋಕಾಯುಕ್ತ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈಗ ಚುನಾವಣೆ ಸಂದರ್ಭದಲ್ಲಿ ಶಶಿಕುಮಾರ್‌ ಅವರನ್ನು ಎತ್ತಂಗಡಿ ಮಾಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಹೊಸ ಪೊಲೀಸ್‌ ಕಮಿಷನರ್‌ ಬಂದು ಅಧಿಕಾರ ಹಸ್ತಾಂತರ ಮಾಡಿಕೊಳ್ಳಲಿದ್ದಾರೆ. ಈ ವರ್ಗಾವಣೆ ಬಗ್ಗೆ ಶಶಿಕುಮಾರ್‌ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮಹಮ್ಮದ್‌ ಸುಜೀತಾ ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಎಸ್‌ಪಿ : ಬೆಂಗಳೂರು ವೈರ್‌ಲೆಸ್‌ ಎಸ್‌ಪಿ ಆಗಿದ್ದ ಡೆಕ್ಕ ಕಿಶೋರ್‌ ಬಾಬು ಅವರನ್ನು ಇಂಟೆಲಿಜೆನ್ಸ್‌ ವಿಭಾಗದ ಎಸ್‌ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಸಿಎಆರ್‌ ಡಿಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಮ್ಮದ್‌ ಸುಜೀತಾ ಎಂ.ಎಸ್. ಅವರನ್ನು ಬೆಂಗಳುರು ನಗರ ದಕ್ಷಿಣ ಸಂಚಾರ ವಿಭಾಗದ ಡಿಸಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ರಾಜ್ಯ ಮೀಸಲು ಪೋಲೀಸ್‌ ಪಡೆಯ 1ನೇ ಬೆಟಾಲಿಯನ್‌ ಕಮಾಂಡೆಂಟ್‌ ಆಗಿದ್ದ ಡಾ. ಕೋನ ವಂಶಿ ಕೃಷ್ಣ ಅವರಿಗೆ ಹೆಚ್ಚುವರಿಯಾಗಿ ಬೆಂಗಳೂರು ವೈರ್‌ಲೆಸ್‌ ಎಸ್‌ಪಿ ಜವಾಬ್ದಾರಿಯನ್ನು ನೀಡಲಾಗಿದೆ.

IPS Transfer: 13 ಜನ ಐಪಿಎಸ್ ಅಧಿಕಾರಿಗಳ ವರ್ಗ: ನಿಮ್ಮ ಜಿಲ್ಲೆಯ ಎಸ್‌ಪಿ ಯಾರು.?

 

ಕೊಪ್ಪಳ ಎಸ್‌ಪಿ ಅರುಣಾಂಗ್ಷು ಗಿರಿ ವರ್ಗ: ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರನ್ನೂ ಕೂಡ ವರ್ಗಾವನೆ ಮಾಡಲಾಗಿದೆ. ಕೊಪ್ಪಳಕ್ಕೆ ಜಿಲ್ಲಾ ಪೊಲೀಸ್‌ ವರೊಷ್ಠಾಧಿಕಾರಿಯಾಗಿ ಬಂದು 13 ತಿಂಗಳಲ್ಲಿ ವರ್ಗಾವಣೆ ಮಾಡಲಾಗಿದೆ. ಇನ್ನು ಅರುಣಾಂಗ್ಷು ಗಿರಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಿದ್ದರು. ಈ‌‌ ಮೊದಲೇ ಅರುಣಾಂಗ್ಷು ಗಿರಿ ವರ್ಗಾವಣೆ ಗೊಳ್ಳುತ್ತಾರೆ ಎಂಬ ವದಂತಿ ಇತ್ತು. ಅವರ ವರ್ಗಾವಣೆಗೆ ರಾಜಕೀಯ ನಾಯಕರಿಂದಲೂ ಒತ್ತಡ ಹಾಕಲಾಗಿತ್ತು ಎಂಬುದು ಕೇಳಿಬಂದಿದೆ. 2015 ರ ಐಪಿಎಸ್ ಅಧಿಕಾರಿಯಾಗಿದ್ದ ಅರುಣಾಂಗ್ಷು ಗಿರಿ ಅವರನ್ನು ಸಿಎಆರ್‌ ಡಿಸಿಪಿ‌ ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಬೆಳಗಾವಿಯಲ್ಲಿ ಲೋಕಾಯುಕ್ತ ಎಸ್‌ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಯಶೋಧಾ ವಂಟಿಗೋಡೆ ಅವರು  ಕೊಪ್ಪಳಕ್ಕೆ ನೂತನ ಎಸ್‌ಪಿ ಆಗಿ ಆಗಮಿಸಲಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್