ಬೆಂಗ್ಳೂರಲ್ಲಿ ಜ.17ಕ್ಕೆ ಅಮೆರಿಕ ಕಾನ್ಸುಲೆಟ್‌ ಶುರು: ಕನ್ನಡಿಗರಿಗೆ ಭಾರೀ ಅನುಕೂಲ!

Published : Jan 14, 2025, 08:09 AM ISTUpdated : Jan 14, 2025, 09:51 AM IST
ಬೆಂಗ್ಳೂರಲ್ಲಿ ಜ.17ಕ್ಕೆ ಅಮೆರಿಕ ಕಾನ್ಸುಲೆಟ್‌ ಶುರು:  ಕನ್ನಡಿಗರಿಗೆ ಭಾರೀ ಅನುಕೂಲ!

ಸಾರಾಂಶ

ಸದ್ಯ ಬೆಂಗಳೂರಿನ ಸಾವಿರಾರು ಜನ ಅಮೆರಿಕ ವೀಸಾ ಕೆಲಸಗಳಿಗಾಗಿ ನೆರೆಯ ಚೆನ್ನೈ, ಹೈದರಾಬಾದ್ ಹಾಗೂ ಮುಂಬೈ ನಗರಗಳಲ್ಲಿರುವ ಕಾನ್ಸುಲೇಟ್ ಕಚೇರಿಗಳಿಗೆ ಹೋಗಬೇಕಾಗಿದೆ. ಇದರಿಂದ ಅನಗತ್ಯವಾಗಿ ಜನರ ಹಣ ಮತ್ತು ಸಮಯ ಪೋಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲೇ ಕಾನ್ಸುಲೇಟ್ ಕಚೇರಿ ಆರಂಭಿಸಬೇಕು ಎಂಬ ಬೇಡಿಕೆ ಹತ್ತಾರು ವರ್ಷಗಳಿಂದ ಇತ್ತು. ಈ ಬೇಡಿಕೆ ಕೊನೆಗೂ ಈಡೇರುತ್ತಿದೆ.

ಬೆಂಗಳೂರು(ಜ.14): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್ ಕಚೇರಿ ಸ್ಥಾಪಿಸಬೇಕು ಎನ್ನುವ ಹಲವು ವರ್ಷಗಳ ಬೇಡಿಕೆ ಜ.17ರಂದು ಈಡೇರುತ್ತಿದೆ. ನಗರದ ಕೇಂದ್ರ ಭಾಗದಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್ ಹೋಟೆಲ್‌ನಲ್ಲಿ ಕಚೇರಿ ಕಾರ್ಯಾರಂಭ ಮಾಡಲಿದ್ದು, ಇದರಿಂದ ಕನ್ನಡಿಗರು ಇನ್ನು ಮುಂದೆ ಚೆನ್ನೈ ಸೇರಿ ನೆರೆಯ ರಾಜ್ಯಗಳಿಗೆ ಹೋಗುವ ಬದಲು ಬೆಂಗಳೂರಿನಲ್ಲೇ ಅಮೆರಿಕದ ವೀಸಾ ಮತ್ತು ಅದಕ್ಕೆ ಸಂಬಂಧಿಸಿದ ಸೇವೆ ಪಡೆಯಬಹುದಾಗಿದೆ. 

ಈ ಹೋಟೆಲ್‌ನಲ್ಲಿ ಈಗಾಗಲೇ ಯುನೈಟೆಡ್ ಸ್ಟೇಟ್ಸ್ ಕಮರ್ಷಿಯಲ್ ಸರ್ವಿಸ್ (ಯುಎಸ್ ಸಿಎಸ್) ಕಚೇರಿ ಇದ್ದು, ಅದೇ ಸ್ಥಳದಲ್ಲೇ ಕಾನ್ಸುಲೇಟ್ (ಧೂತವಾಸ) ಕಚೇರಿ ಕಾರ್ಯಾರಂಭ ಮಾಡಲಿದೆ. ಕಾನ್ಸುಲೇಟ್ ಕಚೇರಿ ಸ್ಥಾಪಿಸಲು ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವ ವೈಟ್ ಫೀಲ್ಡ್ ಸೇರಿ 2-3 ಸ್ಥಳಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ. ಅದರಲ್ಲಿ ಒಂದು ಸ್ಥಳವನ್ನು ಅಮೆರಿಕದ ಅಧಿಕಾರಿಗಳು ಆಯ್ಕೆ ಮಾಡುವವರೆಗೆ ಜೆಡಬ್ಲ್ಯುಮ್ಯಾರಿಯೇಟ್ ಹೋಟೆಲ್‌ನಲ್ಲಿ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ. 

ಬೆಂಗ್ಳೂರಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಜನವರಿಗೆ ಆರಂಭ: ಎರಿಕ್‌ ಗಾರ್ಸೆಟ್ಟಿ

ಲಾಭ ಏನು?: 

ಸದ್ಯ ಬೆಂಗಳೂರಿನ ಸಾವಿರಾರು ಜನ ಅಮೆರಿಕ ವೀಸಾ ಕೆಲಸಗಳಿಗಾಗಿ ನೆರೆಯ ಚೆನ್ನೈ, ಹೈದರಾಬಾದ್ ಹಾಗೂ ಮುಂಬೈ ನಗರಗಳಲ್ಲಿರುವ ಕಾನ್ಸುಲೇಟ್ ಕಚೇರಿಗಳಿಗೆ ಹೋಗಬೇಕಾಗಿದೆ. ಇದರಿಂದ ಅನಗತ್ಯವಾಗಿ ಜನರ ಹಣ ಮತ್ತು ಸಮಯ ಪೋಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲೇ ಕಾನ್ಸುಲೇಟ್ ಕಚೇರಿ ಆರಂಭಿಸಬೇಕು ಎಂಬ ಬೇಡಿಕೆ ಹತ್ತಾರು ವರ್ಷಗಳಿಂದ ಇತ್ತು. ಈ ಬೇಡಿಕೆ ಕೊನೆಗೂ ಈಡೇರುತ್ತಿದೆ.

ಕನ್ನಡಿಗರಿಗೆ ಭಾರಿ ಅನುಕೂಲ 

• ಸದ್ಯ ಅಮೆರಿಕ ವೀಸಾಗೆ ಕರ್ನಾಟಕದ ಜನ ಚೆನ್ನೈ, ಇತರ ನಗರಗಳಿಗೆ ಹೋಗಬೇಕು . ಇದರಿಂದ ಜನರಿಗೆ ಹಣ ಹಾಗೂ ಸಮಯ ಅನಗತ್ಯವಾಗಿ ವ್ಯಯವಾಗುತ್ತದೆ 
• ಇನ್ನು ಈ ತಾಪತ್ರಯ ಇಲ್ಲ, ಬೆಂಗ್ಟರಲ್ಲೇ ಅಮೆರಿಕ ವೀಸಾ, ಇತರ ಸೇವೆಗಳು ಲಭ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
ದತ್ತಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಲಿ: ಸಿ.ಟಿ.ರವಿ ಆಗ್ರಹ