ಹುಬ್ಬಳ್ಳಿಯಲ್ಲಿ ಅತಿದೊಡ್ಡ ಭಗವದ್ಗೀತೆ ಮ್ಯೂಸಿಯಂ: ಇಂದು ಸಿಎಂ ಉದ್ಘಾಟನೆ

By Govindaraj S  |  First Published May 15, 2022, 3:00 AM IST

ಭಗವದ್ಗೀತೆಯ ಸಾರವನ್ನು ಸಾರುವ ದೊಡ್ಡ ಮ್ಯೂಸಿಯಂ ‘ಭಗವದ್ಗೀತಾ ಜ್ಞಾನಲೋಕ’ ಹುಬ್ಬಳ್ಳಿಯ ಬೈರಿದೇವರಕೊಪ್ಪದ ಗಾಮನಗಟ್ಟಿರಸ್ತೆಯಲ್ಲಿರುವ ಬ್ರಹ್ಮಕುಮಾರೀಸ್‌ ಓಂಶಾಂತಿ ನಗರದಲ್ಲಿ ತಲೆ ಎತ್ತಿದೆ. 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬೃಹತ್‌ ಮ್ಯೂಸಿಯಂ ಇದಾಗಿದೆ.


ಹುಬ್ಬಳ್ಳಿ (ಮೇ.15): ಭಗವದ್ಗೀತೆಯ ಸಾರವನ್ನು ಸಾರುವ ದೊಡ್ಡ ಮ್ಯೂಸಿಯಂ ‘ಭಗವದ್ಗೀತಾ ಜ್ಞಾನಲೋಕ’ (Bhagwad Gita Gyanloka Museum) ಹುಬ್ಬಳ್ಳಿಯ ಬೈರಿದೇವರಕೊಪ್ಪದ ಗಾಮನಗಟ್ಟಿರಸ್ತೆಯಲ್ಲಿರುವ ಬ್ರಹ್ಮಕುಮಾರೀಸ್‌ ಓಂಶಾಂತಿ ನಗರದಲ್ಲಿ ತಲೆ ಎತ್ತಿದೆ. 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬೃಹತ್‌ ಮ್ಯೂಸಿಯಂ ಇದಾಗಿದೆ. ಭಾನುವಾರ ಸಂಜೆ 4 ಗಂಟೆಗೆ ಇದರ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಕಾರ್ಯಕ್ರಮ ಉದ್ಘಾಟಿಸಲಿದ್ದರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಭಗವದ್ಗೀತಾ ಜ್ಞಾನಲೋಕದ ಉದ್ಘಾಟನೆ ಮಾಡುವರು.

ಮ್ಯೂಸಿಯಂನಲ್ಲಿ ಏನೇನಿದೆ?: 5 ಎಕರೆ ವಿಶಾಲ ಪ್ರದೇಶದಲ್ಲಿ ಭವ್ಯ ಕಟ್ಟಡದೊಳಗೆ ಸ್ಥಾಪಿಸಲಾಗಿರುವ ಈ ಮ್ಯೂಸಿಯಂನಲ್ಲಿ 114 ಪ್ರತ್ಯೇಕ ಕೊಠಡಿಗಳಿವೆ. ಪ್ರತಿ ಕೊಠಡಿಗಳಲ್ಲೂ ಭಗವದ್ಗೀತೆಯ ಬೇರೆ ಬೇರೆ ಶ್ಲೋಕಗಳನ್ನು ವಿವಿಧ ಬಗೆಯಲ್ಲಿ ವಿವರಿಸುವ ವ್ಯವಸ್ಥೆ ಮಾಡಲಾಗಿದೆ. ಕೆಲವು ಶ್ಲೋಕಗಳನ್ನು ಚಿತ್ರಗಳ ಮೂಲಕ ವಿವರಿಸಿದರೆ, ಕೆಲವೊಂದನ್ನು ವಿಡಿಯೋ, ಅಡಿಯೋಗಳ ಮೂಲಕ ವಿವರಿಸುವ, ವಿಶ್ಲೇಷಿಸುವ ವ್ಯವಸ್ಥೆ ಇಲ್ಲಿದೆ.

Tap to resize

Latest Videos

ಕೋರ್ ಕಮಿಟಿಯಲ್ಲಿ ಮಹತ್ವದ ತೀರ್ಮಾನ, ವಿಜಯೇಂದ್ರಗೆ ಬಂಪರ್...!

ಯೋಗ, ಧ್ಯಾನ ತರಬೇತಿ: ಈ ಮ್ಯೂಸಿಯಂ, ಯೋಗ, ಧ್ಯಾನದ ತರಬೇತಿ ನೀಡುವ ಕೇಂದ್ರವೂ ಆಗಿದೆ. ಬರೋಬ್ಬರಿ 1500 ಜನ ಏಕಕಾಲಕ್ಕೆ ಕುಳಿತು ತರಬೇತಿ ಪಡೆಯುವ ವ್ಯವಸ್ಥೆ ಇಲ್ಲಿದೆ. ಸಾಮೂಹಿಕ ಧ್ಯಾನ ಮಾಡಲು ಧ್ಯಾನಮಂದಿರ ನಿರ್ಮಿಸಲಾಗಿದೆ. ದೇವಲೋಕ, ಧ್ಯಾನಲೋಕ ಎಂದು ವಿವಿಧ ವಿಭಾಗಗಳಿಗೆ ಹೆಸರಿಡಲಾಗಿದೆ. ದೇಶದಲ್ಲಿ ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಸಾಕಷ್ಟುಮ್ಯೂಸಿಯಂಗಳಿವೆ. ಆದರೆ ಭಗವದ್ಗೀತೆಗೆ ಸಂಬಂಧಪಟ್ಟಂತೆ ಇಷ್ಟೊಂದು ದೊಡ್ಡ ಮ್ಯೂಸಿಯಂ ಮಾಡಿರುವುದು ಇದೇ ಮೊಟ್ಟಮೊದಲು ಎಂದು ಧಾರವಾಡ ವಲಯದ ಮುಖ್ಯಸ್ಥೆ ಬಿ.ಕೆ. ಜಯಂತಿ ತಿಳಿಸುತ್ತಾರೆ.

ಸ್ಥಳೀಯ ಚುನಾವಣೆ ಮೇಲೆ ಸಂಪುಟ ಪುನಾರಚನೆ ಭವಿಷ್ಯ: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಚ್‌ ನೀಡಿರುವ ತೀರ್ಪು ರಾಜ್ಯದ ಬಹು ನಿರೀಕ್ಷಿತ ಸಂಪುಟ ಕಸರತ್ತಿನ ಮೇಲೂ ಪರಿಣಾಮ ಬೀರಿದ್ದು, ತಕ್ಷಣವೇ ಚುನಾವಣೆ ನಡೆಯುವುದೇ ಅಥವಾ ಇಲ್ಲವೇ ಎಂಬುದರ ಮೇಲೆ ಸಂಪುಟ ಕಸರತ್ತಿನ ಸ್ವರೂಪವೂ ನಿರ್ಧಾರವಾಗುವ ಸಾಧ್ಯತೆಯಿದೆ. ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಹಾಗೂ ಬಿಬಿಎಂಪಿ ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನ ಕೈಗೊಂಡಲ್ಲಿ ಸಂಪುಟ ಪುನಾರಚನೆಯ ಗೊಡವೆಯನ್ನು ಕೈಬಿಟ್ಟು ಕೇವಲ ಸಂಪುಟ ವಿಸ್ತರಣೆಯನ್ನಷ್ಟೇ ಮಾಡಬಹುದು ಅಥವಾ ಯಥಾಸ್ಥಿತಿಯನ್ನೇ ಮುಂದುವರೆಸಬಹುದು ಎಂಬ ಮಾತು ಆಡಳಿತಾರೂಢ ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ. 

ಚುನಾವಣೆ ನಡೆಸುವುದೇ ನಿರ್ಧಾರವಾದಲ್ಲಿ ಸಂಪುಟ ಕಸರತ್ತಿನಿಂದಾಗಿ ಗೊಂದಲ ಉಂಟಾದರೆ ಅದರಿಂದ ಪಕ್ಷಕ್ಕೆ ತೊಂದರೆಯಾಗಬಹುದು ಎಂಬ ಆತಂಕ ಪಕ್ಷದಲ್ಲಿದೆ. ಹೀಗಾಗಿ, ಚುನಾವಣೆಯ ಬಗ್ಗೆ ನಿರ್ಧಾರ ಕೈಗೊಂಡ ಬಳಿಕ ಸಂಪುಟದ ಬಗ್ಗೆಯೂ ನಿರ್ಧಾರಕ್ಕೆ ಬರುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದರು. ಸಂಪುಟ ಕಸರತ್ತಿನ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸುಪ್ರೀಂಕೋರ್ಚ್‌ ನೀಡಿರುವ ತೀರ್ಪಿನ ವಿಷಯವೂ ಪ್ರಸ್ತಾಪವಾಗಿದೆ. 

Reservation ಮಾದಿಗ ಜನಾಂಗಕ್ಕೆ ಒಳಮೀಸಲು, ಸಿಎಂ ಭರವಸೆ!

ಹೀಗಾಗಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿ ಎರಡು ಅಥವಾ ಮೂರು ದಿನಗಳಲ್ಲಿ ಸಂಪುಟ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಷ್ಟರೊಳಗೆ ರಾಜ್ಯ ಸರ್ಕಾರ ಚುನಾವಣೆ ನಡೆಸುವ ಬಗ್ಗೆ ಸ್ಪಷ್ಟನಿಲವಿಗೆ ಬರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಂಪುಟ ಪುನಾರಚನೆಗೆ ಕೈಹಾಕುವುದು ಎಂದರೆ ಜೇನುಗೂಡಿಗೆ ಕೈಹಾಕಿದಂತೆ. ಅದರಿಂದ ಅಸಮಾಧಾನ ಭುಗಿಲೇಳುವ ಸಾಧ್ಯತೆ ಹೆಚ್ಚಿದೆ. ಈಗ ಹೇಗಿದ್ದರೂ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ. ಐದರ ಪೈಕಿ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಿ ಒಂದನ್ನು ಖಾಲಿ ಉಳಿಸಿಕೊಳ್ಳುವುದು ಸೂಕ್ತ ಎಂಬ ದಿಕ್ಕಿನಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

click me!