ನಗರದ ನೂತನ ಕಾಲೇಜ್ ರಸ್ತೆ ಮೈದಾನದಲ್ಲಿ ಇಂದು ರಾಜ್ಯ ಮಟ್ಟದ ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಸೇವಕರ ಸಮ್ಮೇಳನ ನಡೆದಿದೆ. ರಾಜ್ಯದ 31 ಜಿಲ್ಲೆಗಳಿಂದ ಸಾವಿರಾರು ಗ್ರಾಮ ಲೆಕ್ಕಿಗರು ಗ್ರಾಮ ಸೇವಕರು ಸಮ್ಮೇಳನದಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಿದ್ದಾರೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಮೇ.15): ನಗರದ ನೂತನ ಕಾಲೇಜ್ ರಸ್ತೆ ಮೈದಾನದಲ್ಲಿ ಇಂದು ರಾಜ್ಯ ಮಟ್ಟದ ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಸೇವಕರ ಸಮ್ಮೇಳನ ನಡೆದಿದೆ. ರಾಜ್ಯದ 31 ಜಿಲ್ಲೆಗಳಿಂದ ಸಾವಿರಾರು ಗ್ರಾಮ ಲೆಕ್ಕಿಗರು ಗ್ರಾಮ ಸೇವಕರು ಸಮ್ಮೇಳನದಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ (R Ashoka) ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿ ಸಮ್ಮೇಳನದ ಕುರಿತು ಮಾತನಾಡಿದರು.
ಸಿ ಅಂಡ್ ರೂಲ್ಸ್ ಮಾಡಿದ್ದೇ ನಮ್ಮ ಸರ್ಕಾರ: ಸಮ್ಮೇಳನಕ್ಕೆ ಆಗಮಿಸಿದ ಕಂದಾಯ ಸಚಿವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ಚಪ್ಪಾಳೆ ಕೇಕೆ ಮುಗಿಲು ಮುಟ್ಟಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವರು ರಾಜ್ಯದಲ್ಲಿ 10 ಸಾವಿರ ಗ್ರಾಮ ಲೆಕ್ಕಿಗರಿದ್ದಾರೆ. ಅವರ ಸಮಸ್ಯೆ ನೌಕರಿಯಲ್ಲಿ ಅನುಭವಿಸುವ ಕಷ್ಟದ ಅರಿವು ನನಗಿದೆ. ನಿಮ್ಮ ಅಧ್ಯಕ್ಷರು ನನಗೆ ಐದು ಸಲ ಭೇಟಿಯಾಗಿದ್ದರು. ನನ್ನ ಮನೆ ಕಡೆ ಮೊದಲು ದಿನಾ ಸುತ್ತುತ್ತಿದ್ದರು. ಗ್ರಾಮ ಲೆಕ್ಕಿಗ ನೌಕರಿಗೆ ಸಂಬಂಧಿಸಿ ಸಿ ಅಂಡ್ ಆರ್ ವೃಂದ ನಿಯಾಮವಳಿ ಬಗ್ಗೆ ತಿಳಿಸಿದರು.
Davanagere: ಹೊನ್ನಾಳಿ ಶಾಸಕ ರೇಣುಕಾಚಾರ್ಯರಿಗೆ ಗೃಹ ಕಂಟಕ: ಎಂಎಲ್ಎಗೆ ವಂಚಿತರಿಂದ ಹಿಡಿಶಾಪ
ಮೂರ್ನಾಲ್ಕು ಬಾರಿ ಒತ್ತಿ ಹೇಳಿದರು. ಆಗ ಸಿ ಅಂಡ್ ಆರ್ ರೂಲ್ಸ್ (C and R Rules) ಅವಶ್ಯಕತೆ ಇದೆ ಎಂದು ತಿಳಿದು ಮಾಡಬೇಕೆಂದು ನಿರ್ಧಾರ ಮಾಡಿ ಕ್ಯಾಬಿನೆಟ್‌ನಲ್ಲಿ (Cabinet) ಮಂಡಿಸಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಸಿಎಂ ಬಳಿ ಹೋದಾಗಲು ಕೆಲವರು ತಡೆಯಲು ಬಂದರು. ಆದರೂ ನಾನು ಅದನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಮಂಡಿಸಿ ಜಾರಿಯಾಗಬೇಕೆಂದು ನಿರ್ಧಾರ ಮಾಡಿ ಆದೇಶ ಮಾಡಿಸಿದೆ. ಸುಮಾರು 40 ವರ್ಷಗಳಿಂದ ಸಿ ಅಂಡ್ ಆರ್ ರೂಲ್ಸ್ ಜಾರಿಯಾಗಿರಲಿಲ್ಲ. ಇಷ್ಟೋತ್ತಿಗೆ ಎಷ್ಟೋ ಜನರಿಗೆ ಮುಂಬಡ್ತಿ ಸಿಕ್ಕಿರೋದು. ಇನ್ನು ಮುಂದೆ ಸಿಗುತ್ತದೆ ಎಂದು ಭರವಸೆ ನೀಡಿದರು.
ಕೇಂದ್ರದ ಮಾದರಿ ವೇತನದ ಬಗ್ಗೆ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮನವಿ ಮಾಡಿದ್ದಾರೆ. ಕೆಂದ್ರದ ಮಾದರಿ ವೇತನದ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ. ನಮ್ಮ ಜಿಲ್ಲಾಧಿಕಾರಿಗಳನ್ನು ಹಳ್ಳಿ ಹಳ್ಳಿ ಸುತ್ತಾಡುವ ವ್ಯವಸ್ಥೆ ಮಾಡಿದ್ದೇವೆ. ಅದೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಅಧಿಕಾರಿಗಳ ಗ್ರಾಮ ವಾಸ್ತವ್ಯ ಹೀಗೆ ಕಾರ್ಯಕ್ರಮ ರೂಪಿಸಿದ್ದೇವೆ. ಮುಂದಿನ ವಾರವು ಒಂದು ಆದೇಶ ಮಾಡುತ್ತೇನೆ. ರಾಜ್ಯದ 31 ಜಿಲ್ಲಾಧಿಕಾರಿಗಳು (Deputy Commissioners) ಪ್ರತಿ ವಾರವು ಒಂದೊಂದು ತಾಲೂಕು ಕೇಂದ್ರಕ್ಕೆ (Taluk Office) ತೆರಳಿ ಬೆಳಿಗ್ಗೆ 11 ಗಂಟೆಯಿಂದ 3 ಗಂಟೆವರೆಗು ಕೂರಬೇಕು ಅಲ್ಲಿ ಕುಳಿತು ಸಾರ್ವಜನಿಕರ ಸಮಸ್ಯೆ ಆಲಿಸಬೇಕು ಆಗ ಅಧಿಕಾರಿಗಳ ಕಷ್ಟ ಸಿಬ್ಬಂದಿಗಳ ಕಷ್ಟ ಸಾರ್ವಜನಿಕರ ಸಮಸ್ಯೆ ಅರ್ಥವಾಗುತ್ತದೆ ಎಂದರು.
72 ಗಂಟೆಗಳಲ್ಲಿ ಬಡವರ ಮನೆಗೆ ಪೆನ್ಷನ್ ಹೋಗಬೇಕು. ಬಡವರ ಮೇಲೆ ಹೊಟ್ಟೆ ಹೊಡೆಯದಂತೆ ಕೆಲಸ ಮಾಡಬೇಕು. ಆಸಿಡ್ ಪ್ರಕರಣದಲ್ಲಿ ಮಹಿಳೆಯರ ಕಷ್ಟ ನೋಡಿ ಸರ್ಕಾರ ಮರುಗಿದೆ. ಆಸಿಡ್ ಸಂತ್ರಸ್ಥರಿಗೆ 3 ಸಾವಿರ ಇದ್ದಿದ್ದು 10 ಸಾವಿರ ಬರುವಂತೆ ಮಾಡಿದ್ದೇವೆ. ಆಸಿಡ್ ಸಂತ್ರಸ್ಥ ಎಲ್ಲಾ ಹೆಣ್ಣುಮಕ್ಕಳಿಗು ಸೈಟು ಮನೆ ಕೊಡಲು ಸರ್ಕಾರ ನಿರ್ಧಾರ ಮಾಡಿದೆ. ಅವರಿಗೆ 5 ಲಕ್ಷ ಲೋನ್ ಕೊಡಲು ಮುಖ್ಯಮಂತ್ರಿಗಳು ಅಸ್ತು ಎಂದಿದ್ದಾರೆ ಎಂದರು. ರೈತರು ಅವರ ಹೊಲಗಳ ಸ್ಕೆಚ್ ಮಾಡುವುದನ್ನು ಅವರೆ ಮಾಡಬೇಕು ಎಂಬುದನ್ನು ಸರ್ಕಾರ ಚಿಂತಿಸಿದೆ. ಕೋಟ್ಯಾಂತರ ಜನ ಸರ್ಕಾರದ ಉದ್ಯೋಗಕ್ಕೆ ಅಲೆಯುತ್ತಿದ್ದಾರೆ.ಕಂದಾಯ ಇಲಾಖೆಯಲ್ಲಿ ಬದಲಾವಣೆ ತರಲು ನೀವು ಕೆಲಸ ಮಾಡಬೇಕು.ಕಂದಾಯ ಇಲಾಖೆಯಲ್ಲಿ ಕ್ರಾಂತಿಯಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ.
Davangere ಕಳೆದ ಮುಂಗಾರು ಹಂಗಾಮಿನಲ್ಲಿ ಮಾಡಿಸಿದ ವಿಮಾ ಹಣ ಬಾಕಿ
ಕಂದಾಯ ಇಲಾಖೆ ಸವಲತ್ತುಗಳನ್ನು ಜನರಿಗೆ ತಲುಪಿಸಿ ಕಂದಾಯ ಇಲಾಖೆಯಲ್ಲಿ ಕ್ರಾಂತಿ ಮಾಡೋಣ ಎಂದರು. ಗ್ರಾಮ ಲೆಕ್ಕಾಧಿಕಾರಿ ಕೇಳಿ ಕೇಳಿ ಬೇಜರಾಗಿದೆ ಎಂದರು. ಗ್ರಾಮ ಆಡಳಿತಾಧಿಕಾರಿ ಬೇಡಿಕೆಯನ್ನು ನಮ್ಮ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಾನು ಸುಮ್ಮನೆ ಭರವಸೆ ಕೊಡೊಲ್ಲ ನಾನೇ ಘೋಷಣೆ ಮಾಡೋಕೆ ಆಗೊಲ್ಲ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಘೋಷಣೆ ಮಾಡಲಿದೆ. ಗ್ರಾಮ ಸಹಾಯಕರ ಸಂಬಳವನ್ನು ಒಂದು ಸಾವಿರ ಹೆಚ್ಚಿಸಿದ್ದೆವೆ. ಕೋವಿಡ್ ಇರುವ ಕಾರಣ ಮತ್ತಷ್ಟು ಸಂಬಳವನ್ನು ಈ ಸಂದರ್ಭದಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ. ನಿಮ್ಮ ಜೊತೆ ಸರ್ಕಾರ ಇರುತ್ತೇ. ನಿಮ್ಮ ಬೇಡಿಕೆಗಳ ದೊಡ್ಡ ಪಟ್ಟಿ ಇದೆ ಸಿಎಂ ಜೊತೆ ಚರ್ಚಿಸಿ ಒಳ್ಳೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದರು.