* ಎರಡು ವಾರದ ಬಳಿಕ ಪಾಸಿಟಿವಿಟಿ ದರ ಶೇ.0.50ಕ್ಕಿಂತ ಹೆಚ್ಚಳ
* ಬೆಂಗಳೂರು ನಗರದಲ್ಲಿ 138 ಪ್ರಕರಣ ದಾಖಲು
* ದೇಶದಲ್ಲಿ ಬರೀ 2075 ಕೋವಿಡ್ ಕೇಸು: ಸಾರ್ವಕಾಲಿಕ ಕನಿಷ್ಠ
ಬೆಂಗಳೂರು(ಮಾ.20): ರಾಜ್ಯದಲ್ಲಿ(Karnataka) ಶನಿವಾರ ಕೋವಿಡ್-19(Covid-19) ಪ್ರಕರಣಗಳಲ್ಲಿ ತುಸು ಹೆಚ್ಚಳವಾಗಿದೆ. 173 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ(Death). 153 ಮಂದಿ ಚೇತರಿಸಿಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ 150ಕ್ಕಿಂತ ಕಡಿಮೆ ಪ್ರಕರಣ ವರದಿಯಾಗಿತ್ತು. ಅದೇ ರೀತಿ ಎರಡು ವಾರದ ಬಳಿಕ ಪಾಸಿಟಿವಿಟಿ ದರ ಶೇ.0.50ಕ್ಕಿಂತ ಹೆಚ್ಚಾಗಿದೆ. 30,718 ಕೋವಿಡ್ ಪರೀಕ್ಷೆ(Covid Test) ನಡೆದಿದ್ದು ಶೇ.0.56 ಪಾಸಿಟಿವಿಟಿ ದರ ದಾಖಲಾಗಿದೆ.
ಬೆಂಗಳೂರು ನಗರದಲ್ಲಿ 138 ಪ್ರಕರಣ ದಾಖಲಾಗಿದೆ. ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ದಾವಣಗೆರೆ, ಗದಗ, ಹಾಸನ, ಕೊಡಗು, ಕೊಪ್ಪಳ, ರಾಯಚೂರು, ರಾಮನಗರ, ಉಡುಪಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ.
undefined
Covid cases ಚೀನಾದಲ್ಲಿ ಕೋವಿಡ್‌ಗೆ ಇಬ್ಬರು ಬಲಿ: 1 ವರ್ಷದಲ್ಲೇ ಮೊದಲು!
ಬೆಂಗಳೂರು ನಗರದಲ್ಲಿ 2021ರ ಮೇ 18 ರಂದು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 2021ರ ಜೂನ್ 20 ರಂದು ಮರಣವನ್ನಪ್ಪಿದ್ದ ವ್ಯಕ್ತಿಗಳಿಬ್ಬರ ಮಾಹಿತಿ ಶನಿವಾರದ ಕೋವಿಡ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿ ಈವರೆಗೆ ಒಟ್ಟು 39.44 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದು 39.02 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 2,031 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 40,035 ಮಂದಿ ಮರಣವನ್ನಪ್ಪಿದ್ದಾರೆ
ಲಸಿಕೆ ಅಭಿಯಾನ:
ಶನಿವಾರ 78,351 ಮಂದಿ ಕೋವಿಡ್-19ರ ವಿರುದ್ಧದ ಲಸಿಕೆ(Vaccine) ಪಡೆದುಕೊಂಡಿದ್ದಾರೆ. ಈವರೆಗೆ ರಾಜ್ಯದಲ್ಲಿ 10.25 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಮತ್ತೆ 100ರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಬೆಂಗಳೂರು: ರಾಜಧಾನಿಯಲ್ಲಿ ಮೂರು ದಿನಗಳ ಬಳಿಕ ಮತ್ತೆ ಕೊರೋನಾ(Coronavirus) ಸೋಂಕು ಪ್ರಕರಣಗಳು 100 ಗಡಿ ದಾಟಿವೆ. ನಗರದಲ್ಲಿ ಶನಿವಾರ 138 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 110 ಮಂದಿ ಗುಣಮುಖರಾಗಿದ್ದಾರೆ. ಒಬ್ಬ ಸೋಂಕಿತ ಸಾವಿಗೀಡಾಗಿದ್ದಾನೆ. ಸದ್ಯ 1,741 ಸಕ್ರಿಯ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 10 ಸಾವಿರ ಪರೀಕ್ಷೆ ನಡೆದಿದ್ದು, ಶೇ.0.9ರಷ್ಟು ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಪ್ರಕರಣಗಳು 54ಕ್ಕೆ ಹೆಚ್ಚಳವಾಗಿವೆ. (ಶುಕ್ರವಾರ 84 ಕೇಸ್, 2 ಸಾವು).
ಮಾ.16ರಿಂದ ಸತತ ಮೂರು ದಿನ 100ಕ್ಕಿಂತ ಕಡಿಮೆ ಇದ್ದ ಹೊಸ ಪ್ರಕರಣಗಳು ಮತ್ತೆ 100 ಗಡಿದಾಟಿವೆ. ಸೋಂಕು ಪರೀಕ್ಷೆಗಳಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಸದ್ಯ ಸಕ್ರಿಯ ಸೋಂಕಿತರ ಪೈಕಿ 47 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಇದರಲ್ಲಿ ಆರು ಮಂದಿ ವೆಂಟಿಲೇಟರ್‌ನಲ್ಲಿ, 11 ಮಂದಿ ಐಸಿಯುನಲ್ಲಿ, 4 ಮಂದಿ ಆಕ್ಸಿಜನ್, ಸಾಮಾನ್ಯ ಹಾಸಿಗೆಗಳಲ್ಲಿ 26 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Covid Crisis: ಕರ್ನಾಟಕದಲ್ಲಿ ಕೇವಲ 106 ಕೋವಿಡ್ ಕೇಸ್ ಪತ್ತೆ
ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.8 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.62 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 16,951 ಇದೆ. ನಗರದಲ್ಲಿ ಐದಕ್ಕೂ ಹೆಚ್ಚು ಕೊರೋನಾ ಪ್ರಕರಣವಿರುವ 1 ಕ್ಲಸ್ಟರ್ ವಲಯವಿದೆ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.
ಬರೀ 2075 ಕೋವಿಡ್ ಕೇಸು: ಸಾರ್ವಕಾಲಿಕ ಕನಿಷ್ಠ
ನವದೆಹಲಿ: ಒಂದೆಡೆ ವಿದೇಶಗಳಲ್ಲಿ ಕೋವಿಡ್ ಅಬ್ಬರ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ದೇಶದಲ್ಲಿ(India) ಕೋವಿಡ್ ಪ್ರಕರಣ ಮತ್ತಷ್ಟುಇಳಿಕೆಯಾಗಿದೆ. ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 2,075 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ದೇಶದಲ್ಲಿ ಮೊದಲ ಅಲೆ ಅಬ್ಬರ ಆರಂಭವಾದ ನಂತರದ ಸಾರ್ವಕಾಲಿಕ ಕನಿಷ್ಠವಾಗಿದೆ.
ಈ ನಡುವೆ, ಇದೇ ಅವಧಿಯಲ್ಲಿ 71 ಸೋಂಕಿತರು ಸಾವಿಗೀಡಾಗಿದ್ದಾರೆ. ದೇಶದಲ್ಲಿ ಸಕ್ರಿಯ ಸೋಂಕುಗಳ ಸಂಖ್ಯೆ 27,802ಕ್ಕೆ ಇಳಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.56ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.41ರಷ್ಟಿದೆ. ದೇಶದಲ್ಲಿ ಕೋವಿಡ್ ಚೇತರಿಕೆ ದರವು ಶೇ. 98.73 ಕ್ಕೆ ಏರಿಕೆಯಾಗಿದೆ. ಈವರೆಗೆ ದೇಶದಲ್ಲಿ 181.04 ಕೋಟಿ ಕೋವಿಡ್ ಲಸಿಕೆಯ ಡೋಸುಗಳನ್ನು ವಿತರಿಸಲಾಗಿದೆ.