ಬೆಂಗಳೂರು (ನ.23): ರಾಜ್ಯದಲ್ಲಿ ನ.15ರ ವೇಳೆಗೆ ಸಂಪೂರ್ಣ ಕೊರೋನಾ (Coronavirus) ಮುಕ್ತಗೊಂಡಿದ್ದ ಬೀದರ್ (Bidar), ಗದಗ (Gadag), ಹಾವೇರಿ (Haveri) ಜಿಲ್ಲೆಗಳಲ್ಲಿ ಪುನಃ ಕೊರೋನಾ (Corona) ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ ಹಲವು ದಿನಗಳಿಂದ ಕೊರೋನಾ ಸೋಂಕು ವರದಿಯಾಗದೆ ಗದಗ, ಬೀದರ್ ಹಾಗೂ ಹಾವೇರಿ ಜಿಲ್ಲೆಗಳು ನ.15ರ ವೇಳೆಗೆ ಸಕ್ರಿಯ ಸೋಂಕಿತರೇ ಇಲ್ಲದ ಸಂಪೂರ್ಣ ಕೊರೋನಾ ಮುಕ್ತ ಜಿಲ್ಲೆಗಳಾಗಿದ್ದವು. ಆದರೆ, ಕಳೆದ ಒಂದು ವಾರದಲ್ಲಿ ಮೂರು ಜಿಲ್ಲೆಗಳಲ್ಲೂ ಮತ್ತೆ ಕೊರೋನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ರಾಜ್ಯದಲ್ಲಿ (karnataka) ಕೊರೋನಾ ಸಂಪೂರ್ಣ ಮುಕ್ತಗೊಂಡಿರುವ ಜಿಲ್ಲೆಯೇ ಇಲ್ಲದಂತಾಗಿದೆ. ಬೀದರ್‌ನಲ್ಲಿ ನ.14 ರಂದು ಕೊನೆಯ ಕೊರೋನಾ ಸೋಂಕಿತ ಗುಣಮುಖರಾಗಿದ್ದರು. ಹಾವೇರಿ ಜಿಲ್ಲೆಯಲ್ಲಿ ನ.11 ರಂದು ಅಂತಿಮ ಸೋಂಕಿತ ಗುಣಮುಖ ಹೊಂದಿದ ಮೇಲೆ ಸಕ್ರಿಯ ಸೋಂಕು ಶೂನ್ಯಕ್ಕೆ ತಲುಪಿತ್ತು. ಇನ್ನು ಗದಗ ಜಿಲ್ಲೆಯಲ್ಲಿ ಅ.16 ರಿಂದಲೇ ಒಬ್ಬರೂ ಸಕ್ರಿಯ ಸೋಂಕಿತರು ಇರಲಿಲ್ಲ. ಇದೀಗ ಕಳೆದ ಒಂದು ವಾರದಲ್ಲಿ ಗದಗ ಜಿಲ್ಲೆಯಲ್ಲಿ 1, ಹಾವೇರಿಯಲ್ಲಿ 1, ಬೀದರ್ ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ವರದಿಯಾಗಿದೆ.
2ನೇ ಅಲೆಯಲ್ಲೇ 2ನೇ ಅತಿ ಕನಿಷ್ಠ ಕೇಸು
undefined
ರಾಜ್ಯದಲ್ಲಿ (Karnataka) ಎರಡನೇ ಕೊರೋನಾ ಅಲೆ (Corona Second wave) ಆರಂಭವಾದ ನಂತರ ದ್ವಿತೀಯ ಬಾರಿ ಕನಿಷ್ಠ ಸೋಂಕಿನ ಪ್ರಕರಣ ಸೋಮವಾರ ವರದಿಯಾಗಿದೆ. ರಾಜ್ಯದಲ್ಲಿ 178 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ 17 ತಿಂಗಳ ಬಳಿಕ ಕನಿಷ್ಠ ಪ್ರಮಾಣದ ಸೋಂಕಿನ ಪ್ರಕರಣ (Case) ನ. 15 ರಂದು (171 ಜನರು) ದಾಖಲಾಗಿತ್ತು. ಇದೀಗ ನ.22 ರಂದು ಸೋಮವಾರ 178 ಮಂದಿಗೆ ಸೋಂಕು ತಗುಲಿದ್ದು, ಎರಡನೇ ಅಲೆಯಲ್ಲಿನ ಎರಡನೇ ಕನಿಷ್ಠ ಸಂಖ್ಯೆ ಎಂದು ಹೇಳಲಾಗಿದೆ. ಕೊರೋನಾ ಮೊದಲ ಅಲೆಯ 2020ರ ಜೂನ್ 10 ರಂದು ಕೇವಲ 120 ಪ್ರಕರಣ ದಾಖಲಾಗಿದ್ದೇ ಇತ್ತೀಚೆಗಿನ ಕನಿಷ್ಠ ಸೋಂಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಡಿಮೆ ಪರೀಕ್ಷೆ: ಕಳೆದ 24 ಗಂಟೆಗಳಲ್ಲಿ 55,699 ಪರೀಕ್ಷೆ ಮಾತ್ರ ನಡೆಸಿದ್ದು, 2020ರ ಜೂನ್ ಬಳಿಕ ಇದೇ ಮೊದಲನೆಯ ಬಾರಿಗೆ ಅತಿ ಕನಿಷ್ಠ ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟು ಪರೀಕ್ಷೆ ಪೈಕಿ ಶೇ.0.31 ಪಾಸಿಟಿವಿಟಿ ದರದಂತೆ (positivity Rate) 178 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 29.93 ಲಕ್ಷಕ್ಕೆ ಏರಿಕೆಯಾಗಿದೆ.
ಸೋಮವಾರ ಇಬ್ಬರು ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 38,177 ಆಗಿದೆ. ಉಳಿದಂತೆ ಸೋಮವಾರ 373 ಮಂದಿ ಗುಣಮುಖರಾಗಿದ್ದು, 29.48 ಲಕ್ಷ ಮಂದಿ ಈವರೆಗೆ ಗುಣಮುಖರಾಗಿದ್ದಾರೆ. ಉಳಿದ 6,867 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
12 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ: ಜಿಲ್ಲಾವಾರು ಸೋಂಕಿನ ಪೈಕಿ ಬೆಂಗಳೂರು ನಗರ (Bengaluru) 112, ಮೈಸೂರು (Mysuru) 14, ದಕ್ಷಿಣ ಕನ್ನಡ 16 ಪ್ರಕರಣ ವರದಿಯಾಗಿದೆ. ಉಳಿದಂತೆ ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ದಾರವಾಡ, ಹಾಸನ, ಕೊಡಗು, ಕೋಲಾರ, ಮಂಡ್ಯ, ತುಮಕೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದಂಕಿ ಪ್ರಕರಣ ದಾಖಲಾಗಿದೆ. ಉಳಿದಂತೆ ಹನ್ನೆರಡು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.
ಉಳಿದಂತೆ ಬೆಂಗಳೂರು ನಗರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ತಲಾ ಒಂದು ಸಾವು ವರದಿಯಾಗಿದ್ದು, 28 ಜಿಲ್ಲೆಗಳಲ್ಲಿ ಯಾವುದೇ ಸಾವಿನ ವರದಿಯಾಗಿಲ್ಲ