
ಬೆಂಗಳೂರು (ಮೇ.16): ಭಾರತ-ಪಾಕಿಸ್ತಾನದ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿಯುತ್ತಿರುವ ಬೆನ್ನಲ್ಲೇ, ದೇಶದಾದ್ಯಂತ ‘ಕರಾಚಿ ಬೇಕರಿ’ ಹೆಸರಿನ ವಿರುದ್ಧ ಆಕ್ಷೇಪಗಳು ಕೇಳಿಬಂದಿವೆ. ಹೈದರಾಬಾದ್‌ನಲ್ಲಿ ಈಗಾಗಲೇ ಕರಾಚಿ ಬೇಕರಿ ಹೆಸರು ಬದಲಾವಣೆಗೆ ಆಗ್ರಹಿಸಿ ದಾಂಧಲೆ ನಡೆದಿದ್ದು, ಇದೀಗ ಬೆಂಗಳೂರಿನ ಇಂದಿರಾನಗರದ ಕರಾಚಿ ಬೇಕರಿಯ ಮೇಲೂ ಒತ್ತಡ ಹೆಚ್ಚಾಗಿದೆ.
ದೇಶದಲ್ಲಿ ಹೆಸರುವಾಸಿಯಾಗಿರುವ ಕರಾಚಿ ಬೇಕರಿಯನ್ನು 1953ರಲ್ಲಿ ಸ್ಥಾಪಿಸಿದ ಖಾನ್‌ಚಂದ್ ರಾಮ್ನಾನಿ ಕುಟುಂಬ, ತಾವು ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದ ಕರಾಚಿಯಿಂದ ಭಾರತಕ್ಕೆ ವಲಸೆ ಬಂದ ಹಿಂದೂ ಕುಟುಂಬ ಎಂದು ಸ್ಪಷ್ಟಪಡಿಸಿದೆ. 'ನಾವು ಹಿಂದುಗಳು, ನಮ್ಮ ದೇಶದ ಮೇಲೆ ಎಂದಿಗೂ ಅಪಾರ ಗೌರವ, ಭಕ್ತಿ ಮತ್ತು ಪ್ರೀತಿ ಇದೆ' ಎಂದು ಬೇಕರಿ ಮಾಲೀಕರು ಘೋಷಣೆ ಪತ್ರದಲ್ಲಿ ತಿಳಿಸಿದ್ದಾರೆ. ತಮ್ಮ ಭಾರತೀಯ ಗುರುತನ್ನು ತಿಳಿಸಲು ಬೇಕರಿಯ ಮೇಲೆ ರಾಷ್ಟ್ರಧ್ವಜ ಮತ್ತು ನಾಡಧ್ವಜವನ್ನು ಕಟ್ಟಿರುವುದಾಗಿಯೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್; ಕಾರ್ಗಲ್ ನಿವಾಸಿ ಶಕೀರ್ ಹುಸೇನ್ ಬಂಧನ
ಆದರೆ, ಸ್ಥಳೀಯ ಜನ ಜಾಗೃತಿ ಸಮಿತಿ ಸೇರಿದಂತೆ ಕೆಲವು ಸಂಘಟನೆಗಳು, 'ಪಾಕಿಸ್ತಾನದ ಕರಾಚಿ ನಗರದ ಹೆಸರನ್ನು ಬೇಕರಿಯಿಂದ ತೆಗೆದುಹಾಕಬೇಕು, ಇಲ್ಲವಾದರೆ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು' ಎಂದು ಆಗ್ರಹಿಸಿವೆ. ಹೈದರಾಬಾದ್‌ನಲ್ಲಿ ಈ ಪ್ರತಿಭಟನೆಯಿಂದ ಉಂಟಾದ ಗಲಭೆಯ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಪಾಕ್ ನಗರದ ಹೆಸರಿಟ್ಟಿದ್ದಕ್ಕೆ ಕರಾಚಿ ಬೇಕರಿಗೆ ದಾಳಿ: ಹೈದರಾಬಾದ್‌ನಲ್ಲಿ ಉದ್ವಿಗ್ನತೆ
ಕರಾಚಿ ಬೇಕರಿಯ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು 'ದೇಶಪ್ರೇಮದ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ' ಎಂದು ಟೀಕಿಸಿದರೆ, ಇನ್ನೂ ಕೆಲವರು 'ಪಾಕಿಸ್ತಾನದ ಹೆಸರನ್ನು ಭಾರತದಲ್ಲಿ ಬಳಸುವುದು ಸರಿಯಲ್ಲ ಎಂದು ವಾದಿಸಿದ್ದಾರೆ. ಈ ಬಗ್ಗೆ ಮುಂದಿನ ಕ್ರಮಗಳೇನು ಎಂಬುದು ಸ್ಥಳೀಯ ಆಡಳಿತ ಅಥವಾ ಸರ್ಕಾರದ ತೀರ್ಮಾನವನ್ನು ಅವಲಂಬಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ