ಭೀಮಾತೀರದ ವೈಷಮ್ಯಕ್ಕೆ ತೆರೆ ಎಳೆದ ಅಲೋಕ್‌ ಕುಮಾರ್‌: ಚಡಚಣ-ಬೈರಗೊಂಡ ಗ್ಯಾಂಗ್‌ಗಳ ನಡುವೆ ಸಂಧಾನ ಯಶಸ್ವಿ

By Govindaraj S  |  First Published Feb 16, 2023, 12:20 AM IST

ಭೀಮಾತೀರದಲ್ಲಿ ಅಲೋಕ್‌ ಕುಮಾರ್‌ ಮಿಂಚಿನ ಸಂಚಾರ ನಡೆಸಿದ್ದು ಎರಡೂ ಕುಟುಂಬಗಳು ಸಾರ್ವಜನಿಕರ ಸಾಕ್ಷಿಯಾಗಿ ಪ್ರಮಾಣ ಮಾಡುವ ಮೂಲಕ ಐದು ದಶಕಗಳ ರಕ್ತಸಿಕ್ತ ಅಧ್ಯಾಯಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ.


ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಫೆ.16): ಖಡಕ್‌ ಪೊಲೀಸ್‌ ಅಧಿಕಾರಿ ADGP ಅಲೋಕ್‌ ಕುಮಾರ್‌ ಇಂದು ಭೀಮಾತೀರಕ್ಕೆ ಭೇಟಿ ಕೊಡ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೆ ಭೀಮಾತೀರಕ್ಕೆ ಭೇಟಿ ನೀಡಿ ಭೀಮಾತೀರದ ಗ್ಯಾಂಗ್‌ ಗಳಿಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದರು. ಚಡಚಣದಲ್ಲಿ ಸಭೆ ನಡೆಸಿ ಭ್ರಷ್ಟಾಚಾರ ಕೈ ಜೋಡಿಸಿದ್ರೆ ಹುಷಾರ್‌ ಅಂತಾ ತಮ್ಮ ಅಧಿಕಾರಿ-ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದರು. ಅದ್ರಲ್ಲು ಭೀಮಾತೀರದ ರಕ್ತಸಿಕ್ತ ಅಧ್ಯಾಯಕ್ಕೆ ಕಾರಣವಾದ ಭೀಮಾತೀರದ ಎರಡು ಕುಟುಂಬಗಳ ನಡುವೆ ರಾಜಿ ಸಂಧಾನಕ್ಕೆ ಯತ್ನಿಸಿದ್ದರು. ಎರಡು ಕಡೆಯವರಿಗೆ ಕೊನೆಯ ವಾರ್ನಿಂಗ್ ಕೊಟ್ಟು ಹೋಗಿದ್ರು.

Tap to resize

Latest Videos

ಭೀಮಾತೀರದಲ್ಲಿ ಅಲೋಕ್‌ಕುಮಾರ್ ಮಿಂಚಿನ ಸಂಚಾರ: ಈಗ ಮತ್ತೆ ಭೀಮಾತೀರದಲ್ಲಿ ಅಲೋಕ್‌ ಕುಮಾರ್‌ ಮಿಂಚಿನ ಸಂಚಾರ ನಡೆಸಿದ್ದು ಎರಡೂ ಕುಟುಂಬಗಳು ಸಾರ್ವಜನಿಕರ ಸಾಕ್ಷಿಯಾಗಿ ಪ್ರಮಾಣ ಮಾಡುವ ಮೂಲಕ ಐದು ದಶಕಗಳ ರಕ್ತಸಿಕ್ತ ಅಧ್ಯಾಯಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ.

ಬೈರಗೊಂಡ ಹಾಗೂ ಚಡಚಣ ಕುಟುಂಬಗಳ ನಡುವೆ ರಾಜಿ-ಸಂಧಾನ: ಕಳೆದ ಅರ್ಧ ಶತಕದಿಂದ ಭೀಮಾತೀರದ ಚಡಚಣ ಭಾಗದ ಬೈರಗೊಂಡ ಹಾಗೂ ಚಡಚಣ ಕುಟುಂಬಗಳ ನಡುವೆ ದ್ವೇಷವಿದೆ. ಇದೆ ದ್ವೇಷದಿಂದ ಎರಡು ಕುಟುಂಬಗಳು ಹತ್ತಾರು ಹೆಣಗಳು ಬಿದ್ದಿವೆ. ಎರಡು ಕುಟುಂಬಗಳು ಗ್ಯಾಂಗ್‌ ಕಟ್ಟಿಕೊಂಡು ಹೊಡೆದಾಡಿ ಇಡೀ ಭೀಮಾತೀರವನ್ನೆ ರಕ್ತಸಿಕ್ತ ಮಾಡಿದ ಅಪಖ್ಯಾತಿ ಪಡೆದಿದ್ದರು. ಇದನ್ನ ಹೋಗಲಾಡಿಸಬೇಕು, ಭೀಮಾತೀರದಲ್ಲಿ ಮತ್ತೆ ಶಾಂತಿ ಮರುಸ್ಥಾಪನೆಗಾಗಿ ಖಡಕ್‌ ಪೊಲೀಸ್‌ ಅಧಿಕಾರಿ ADGP ಅಲೋಕ್‌ ಕುಮಾರ್‌ ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದರು.

ಲವ್ ಜಿಹಾದ್ ಬಗ್ಗೆ ಮಾತ್ನಾಡೋ ನಳಿನ್‌ಗೆ ಲವ್ವಲ್ಲಿ ಹೆಚ್ಚು ಕಡಿಮೆ ಆಗಿರ್ಬೇಕು: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

ಝಳಕಿ ಠಾಣೆಗೆ ಕರೆಯಿಸಿ ವಾರ್ನ್ ಮಾಡಿದ್ದರು: ಕಳೆದ ಕೆಲ ತಿಂಗಳ ಹಿಂದಷ್ಟೆ ಬೈರಗೊಂಡ ಕುಟುಂಬದ ಮಹಾದೇವ ಬೈರಗೊಂಡ ಆಂಡ್‌ ಗ್ಯಾಂಗ್‌ ಮತ್ತು ಚಡಚಣ ಕುಟುಂಬಸ್ಥರು ಸಂಬಂಧಿಕರನ್ನ ಜಳಕಿ ಠಾಣೆಗೆ ಕರೆಸಿ ದ್ವೇಷ ಬಿಡುವಂತೆ ಖಡಕ್ ವಾರ್ನ್‌ ಮಾಡಿದ್ದರು. ಆಗ ವಿಮಲಾಬಾಯಿ ನಾಪತ್ತೆಯಾಗಿದ್ದರಿಂದ  ರಾಜಿ ಸಂಧಾನ ಯಶಸ್ವಿಯಾಗಿರಲಿಲ್ಲ. ಇಂದು ಸ್ವತಃ ವಿಮಲಾಬಾಯಿ ಹಾಗೂ ಮಹಾದೇವ ಬೈರಗೊಂಡನನ್ನ ಎದುರು ಬದುರು ಕೂರಿಸಿಕೊಂಡು ರಾಜಿ ಮಾಡಿದ್ದಾರೆ.

ವಾರ್ನಿಂಗ್‌ ಬಳಿಕ ಕೋರ್ಟಗೆ ಶರಣಾಗಿದ್ದ ವಿಮಲಾಬಾಯಿ: ವಿಮಲಾಬಾಯಿ ಚಡಚಣ ಭೀಮಾತೀರದ ಮೋಸ್ಟ್‌ ನಟೋರಿಯಸ್‌ ಹಂತಕ ಮಲ್ಲಿಕಾಜೀ ಚಡಚಣ ಪತ್ನಿ, ನಕಲಿ ಎನ್ಕೌಂಟರನಲ್ಲಿ ಸತ್ತ ಶಾರ್ಫ್‌ ಶೂಟರ್‌ ಆಗಿದ್ದ ಧರ್ಮರಾಜ್‌ ಚಡಚಣ ಹಾಗೂ ಗಂಗಾಧರ ಸಹೋದರರ ತಾಯಿ ಕೂಡ. ಕಳೆದ ಎರಡು ವರ್ಷಗಳ ಹಿಂದೆ ಮಹಾದೇವ ಬೈರಗೊಂಡನ ಮೇಲೆ ಮಾರಾಮೋಸದ ದಾಳಿ ಬಳಿಕ ವಿಮಲಾಬಾಯಿ ಈ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದಳು. ಪೊಲೀಸರ ಕೈಗೆ ಸಿಗದೆ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿದ್ದಳು. ಕಳೆದ ಬಾರಿ ಎಡಿಜಿಪಿ ಅಲೋಕ್‌ ಕುಮಾರ್‌ ಭೀಮಾತೀರಕ್ಕೆ ಭೇಟಿ ಕೊಟ್ಟಾಗ ವಿಮಲಾಬಾಯಿ ಹಾಗೂ 18 ವರ್ಷಗಳಿಂದ ಭೂಗತನಾಗಿರುವ ಆಕೆ ಗಂಡ ಮಲ್ಲಿಕಾಜೀ ಪೊಲೀಸರಿಗೆ ಶರಣಾಗಬೇಕು ಅಂತಾ ವಾರ್ನಿಂಗ್‌ ಕೊಟ್ಟಿದ್ದರು. 

ಬಳಿಕ ವಿಮಲಾಬಾಯಿ ವಿಜಯಪುರ ನ್ಯಾಯಾಲಯಕ್ಕೆ ಹಾಜರಾಗಿ ಜೈಲು ಸೇರಿ ಈಗ ಬೇಲ್‌ ಮೇಲೆ ವಾಪಾಸ್ಸಾಗಿದ್ದಾಳೆ. ಹೀಗಾಗಿ ಎಡಿಜಿಪಿ ಎರಡು ಕುಟುಂಬಗಳ ನಡೆಸುವ ಸಂಧಾನ ಮಹತ್ವ ಪಡೆದುಕೊಂಡಿತ್ತು, ಇದೀಗ ಅದು ಯಶಸ್ವಿಯಾಗಿದ್ದು, ಸಾರ್ವಜನಿಕರ ಎದುರಿನಲ್ಲಿ ಎರಡೂ ಕುಟುಂಬಗಳು ಒಂದಾಗಿದ್ದು, ಈ ಭಾಗದ ಜನರಲ್ಲಿಯೂ ಸಂತಸ ಉಂಟುಮಾಡಿದೆ

ರಾಜಿ ಸಂಧಾನದಲ್ಲಿ ನಟೋರಿಯಸ್ ಮಲ್ಲಿಕಾಜೀ ಪತ್ನಿ ಭಾಗಿ: ಕಳೆದ ವರ್ಷ ನಡೆದ ರಾಜೀ ಸಂಧಾನದಲ್ಲಿ ಚಡಚಣ ಕುಟುಂಬದ ಕೆಲ ದೂರದ ಸಂಬಂಧಿಕಗಳು ಬಿಟ್ಟರೆ ಬೇರ್ಯಾರು ಇರಲಿಲ್ಲ. ಇತ್ತ ಬೈರಗೊಂಡ ಹಾಗೂ ಆತನ ಗ್ಯಾಂಗ್‌ ಸಂಧಾನದಲ್ಲಿ ಪಾಲ್ಗೊಂಡಿತ್ತಾದ್ರು ಸಂಧಾನ ಯಶಸ್ವಿಯಾಗಿರಲಿಲ್ಲ. ಆದ್ರೆ ಬುದುವಾರ ನಡೆದ ರಾಜೀ ಸಂಧಾನದಲ್ಲಿ ಚಡಚಣ ಕುಟುಂಬದ ವಿಮಲಾಬಾಯಿ ಪಾಲ್ಗೊಂಡಿದ್ದಳು. ಈ ಸಂದರ್ಭದಲ್ಲಿ ಮಾತನಾಡಿದ ವಿಮಲಾಬಾಯಿ, ಮೂರು ಮಕ್ಕಳನ್ನು ಮಹದೇವ ಸಾಹುಕಾರ ಭೈರಗೊಂಡ ಕುತಂತ್ರದಿಂದ ಕಳೆದುಕೊಂಡಿದ್ದೇನೆ. ಅವನ ಮುಖ ನೋಡುವುದಕ್ಕೂ ಇಷ್ಟವಿರಲಿಲ್ಲ. ಆದರೆ ಎಡಿಜಿಪಿ ಅಲೋಕ್ ಕುಮಾರ್ ಸರ್ ಹೇಗೆ ಹೇಳ್ತಾರೆ ಹಾಗೆ ಕೇಳ್ತೀನಿ ಎನ್ನುವ ಮೂಲಕ  ರಾಜಿಗೆ ಒಪ್ಪಿಕೊಂಡಿದ್ದಾಳೆ.

ಇನ್ನು ಮುಂದೆ ದ್ವೇಷ ಮರೆಯುತ್ತೇನೆ ; ಮಹಾದೇವ ಬೈರಗೊಂಡ: ಇನ್ನು ಮಹದೇವ ಸಾಹುಕಾರ ಭೈರಗೊಂಡ ಮಾತನಾಡಿ, ದೇವರ ಹಾಗೂ ಅಧಿಕಾರಿಗಳು, ಸಾರ್ವಜನಿಕರ ಸಾಕ್ಷಿಯಾಗಿ ಇನ್ನು ಮುಂದೆ ಕಾನೂನುಬಾಹಿರ ಚಟುವಟಿಕೆ ನಿಲ್ಲಿಸುತ್ತೇನೆ. ಅವರಿಗೆ ನನ್ನಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಮಾತುಕೊಟ್ಟಿದ್ದಾರೆ.

ಹಂತಕರಿಗೆ ಏನ್‌ಕೌಂಟರ್ ವಾರ್ನಿಂಗ್ ನೀಡಿದ ಅಲೋಕ್‌ಕುಮಾರ್: ರಾಜಿ ಸಂಧಾನದ ಬಳಿಕ ಮಾತನಾಡಿದ ಎಡಿಜಿಪಿ ಅಲೋಕ ಕುಮಾರ, ಎರಡೂ ಕುಟುಂಬಗಳು ಈಗ ರಾಜಿ ಸಂಧಾನಕ್ಕೆ ಒಪ್ಪಿಕೊಂಡಿದ್ದಾರೆ. ಅದರಂತೆ ನಡೆಯಬೇಕು. ಇಲ್ಲದಿದ್ರೆ ನಮ್ಮ ಆಯುಧಗಳಿರುವುದು ಕೇವಲ ಆಯುಧ ಪೂಜೆಗಲ್ಲ ಎನ್ನುವುದನ್ನು ನೆನಪಿಡಬೇಕು ಎಂದು ವಾರ್ನ್ ಮಾಡಿದರು.
 
ರಾಜೀ-ಸಂಧಾನದ ಬಳಿಕ ಶಾಂತವಾಗುತ್ತಾ ಭೀಮಾತೀರ?: ಭೀಮಾತೀರದ ರಕ್ತಸಿಕ್ತ ಇತಿಹಾಸ ಇಂದು ನಿನ್ನೆಯದಲ್ಲ, ಇಲ್ಲಿ ನಡೆದ ರಕ್ತಪಾತಗಳಿಗೆ ಅರ್ಧ ಶತಮಾನದ ಚರಿತ್ರೆ ಇದೆ. ಹಿಂದೆ ಕ್ಷುಲ್ಲಕ ಕಾರಣಕ್ಕೆ ಭೀಮಾತೀರದ ಅಂಚಿಗಿರುವ ಉಮರಾಣಿ ಗ್ರಾಮದಲ್ಲಿ ಚಡಚಣ ಹಾಗೂ ಬೈರಗೊಂಡ ಕುಟುಂಬದ ನಡುವೆ ತಕರಾರು ಶುರುವಾಗಿ, ಅದು ಆ ಜನ್ಮದ್ವೇಷಕ್ಕೆ ತಿರುಗಿತ್ತು. ಬಳಿಕ ಭೀಮಾತೀರದಲ್ಲಿ ಬಿದ್ದ ಹೆಣಗಳಿಗೆ ಲೆಕ್ಕವಿಲ್ಲ. ಚಡಚಣ ಹಾಗೂ ಬೈರಗೊಂಡ ಎರಡು ಕುಟುಂಬಗಳು ತಮ್ಮ ಉಳಿವಿಗಾಗಿ ಗ್ಯಾಂಗ್‌ ಕಟ್ಟಿಕೊಂಡವು. 

Chitradurga: ಕೋಟೆನಾಡಿನಲ್ಲಿ ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡ ದಾಯಾದಿಗಳು

ಭೀಮಾತೀರದಲ್ಲಿ ಹೇಗಿತ್ತು ದ್ವೇಷ?: ಬೈರಗೊಂಡ ಕುಟುಂಬದ ಪುತ್ರಪ್ಪ ಸಾಹುಕಾರ್‌, ಮಹಾದೇವ ಸಾಹುಕಾರ್‌ , ಮಲ್ಲಿಕಾಜೀಯಿಂದ ಜೀವ ಉಳಿಸಿಕೊಳ್ಳೊದಕ್ಕೆ ಬಂದೂಕುಗಳನ್ನ ಬೆನ್ನಿಗೆ ಕಟ್ಟಿಕೊಂಡು ಓಡಾಡೋಕೆ ಶುರು ಮಾಡಿದ್ರು. ಹೀಗೆ ಎರಡು ಕುಟುಂಬಗಳ ನಡುವೆ ನಡೆದ ಗ್ಯಾಂಗ್‌ ವಾರ್‌ ಗಳಲ್ಲಿ ಹತ್ತಾರು ಹೆಣಗಳು ಬಿದ್ದಿವೆ. ಹಂತಕ ಧರ್ಮರಾಜ್‌ ಹಾಗೂ ಗಂಗಾಧರ ಡಬಲ್‌ ಮರ್ಡರ್‌ ಬಳಿಕ ಸೇಡು ತೀರಿಸಿಕೊಳ್ಳಲು ಚಡಚಣ ಗ್ಯಾಂಗ್‌ ಕಳೆದ ಮೂರು ವರ್ಷಗಳ ಹಿಂದಷ್ಟೆ ಮಹಾದೇವ ಬೈರಗೊಂಡನ ಮೇಲೆ ಹಾಡುಹಗಲೆ ಫೈರಿಂಗ್‌ ನಡೆಸಿದ್ದರು. ಇದಾದ ಬಳಿಕ ಎಡಿಜಿಪಿಯಾಗಿ ಅಧಿಕಾರವಹಿಸಿಕೊಂಡ ಅಲೋಕ್‌ ಕುಮಾರ್‌ ಭೀಮಾತೀರದ ಈ ಎರೆಡು ಮನೆತನಗಳ ನಡುವಿನ ದ್ವೇಷಕ್ಕೆ ಬ್ರೇಕ್ ಹಾಕಿ ರಕ್ತಪಾತಕ್ಕೆ ಕೊನೆಹಾಡಲು ನಿರ್ಧರಿಸಿದ್ದರು. ಸಂಧಾನ-ರಾಜಿ ಬಳಿಕ ಭೀಮಾತೀರದಲ್ಲಿ ಶಾಂತಿ ನೆಲೆಸುತ್ತೆ ಎನ್ನುವ ಅಭಿಪ್ರಾಯಗಳಿವೆ.

ರಾಜೀ-ಸಂಧಾನಕ್ಕೆ ಬರದ ಮಲ್ಲಿಕಾರ್ಜುನ ಚಡಚಣ: ಮಲ್ಲಿಕಾಜೀ ಚಡಚಣ ಭೂಗತನಾಗಿ 18 ವರ್ಷಗಳು ಕಳೆದಿವೆ. ಇಲ್ಲಿಯವರೆಗೆ ಅವನ ಒಂದು ಸಿಂಗಲ್‌ ಪೋಟೊ ಸಹಿತ ಪೊಲೀಸ್‌ ಇಲಾಖೆ ಬಳಿ ಇಲ್ಲ. 18 ವರ್ಷಗಳಿಂದ ಭೂಗತ ಜೀವನ ನಡೆಸುತ್ತಿರುವ ಮಲ್ಲಿಕಾಜೀ ಚಡಚಣ ADGP ನಡೆಸುವ ಸಂಧಾನಕ್ಕೆ ಬರ್ತಾನಾ ಅನ್ನೋ ಕುತೂಹಲಗಳಿದ್ದವು. ಆದ್ರೆ ಆತನ ಆರೋಗ್ಯಸ್ಥಿತಿ ಅಷ್ಟೋಂದು ಸರಿಯಾಗಿಲ್ಲ ಎನ್ನುವ ಮಾಹಿತಿಗಳಿದ್ದು, ರಾಜೀ-ಸಂಧಾನದಲ್ಲಿ ಮಲ್ಲಿಕಾಜೀ ಭಾಗವಹಿಸಿಲ್ಲ.

click me!