ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಎಂಟ್ರಿ ಹಾಗೂ ಎಕ್ಸಿಟ್ ಸಮಸ್ಯೆಗೆ ಮುಕ್ತಿ: ರಸ್ತೆ ಹಿಗ್ಗಿಸಿದ ಪ್ರಾಧಿಕಾರ

Published : Feb 15, 2023, 07:47 PM IST
ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಎಂಟ್ರಿ ಹಾಗೂ ಎಕ್ಸಿಟ್ ಸಮಸ್ಯೆಗೆ ಮುಕ್ತಿ: ರಸ್ತೆ ಹಿಗ್ಗಿಸಿದ ಪ್ರಾಧಿಕಾರ

ಸಾರಾಂಶ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಿಂದ ರಾಮನಗರ, ಚನ್ನಪಟ್ಟಣ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಎಂಟ್ರಿ ಹಾಗೂ ಎಕ್ಸಿಟ್ ಸ್ಥಳಗಳನ್ನು ವಿಸ್ತರಿಸಲಾಗಿದ್ದು ಕಿರಿದಾದ ಜಾಗದಲ್ಲಿ ತಿರುವು ಪಡೆದುಕೊಳ್ಳುತ್ತಿದ್ದ ವಾಹನಗಳ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಫೆ.15): ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಿಂದ ರಾಮನಗರ ಚನ್ನಪಟ್ಟಣ ಜನರಿಗೆ ತಲೆನೋವಾಗಿ ಪರಿಗಣಿಸಿದ್ದ ಎಂಟ್ರಿ ಹಾಗೂ ಎಕ್ಸಿಟ್ ಸ್ಥಳಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವೀಕ್ಷಣೆ ಮಾಡಿದರು. ಎಕ್ಸ್‌ಪ್ರೆಸ್‌ ಹೈವೆಯಿಂದ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಎಂಟ್ರಿ ಹಾಗೂ ಎಕ್ಸಿಟ್ ಸ್ಥಳಗಳನ್ನು ವಿಸ್ತರಿಸಲಾಗಿದ್ದು ಕಿರಿದಾದ ಜಾಗದಲ್ಲಿ ತಿರುವು ಪಡೆದುಕೊಳ್ಳುತ್ತಿದ್ದ ವಾಹನಗಳ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.

ರಾಮನಗರ ಸಮೀಪದ ಸಂಗನಬಸವನದೊಡ್ಡಿ ಬಳಿ ದಶಪಥದ ಎರಡೂ ಕಡೆ ವಾಹನಗಳು ಒಳಗೆ ಮತ್ತು ಹೊರಗೆ ಹೋಗಲು ಸಂಪರ್ಕ ಕಲ್ಪಿಸಲಾಗಿದೆ.  ದಾಸಪ್ಪನದೊಡ್ಡಿ ಬಳಿ ಬಿಡದಿ ಪಟ್ಟಣಕ್ಕೆ ಸಂಪರ್ಕ ತೆಗೆದುಕೊಳ್ಳುವ ಜಾಗದಲ್ಲಿ  ಹಾಗೂ ವಾಜರಹಳ್ಳಿ ಗೇಟ್ ಸಮೀಪ ಸರ್ವಿಸ್ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ವಿಶಾಲವಾದ ಎಂಟ್ರಿ ಮತ್ತು ಎಕ್ಸಿಟ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಾಹನಗಳನ್ನು ಎಕ್ಸ್ಪ್ರೆಸ್ ವೇ ಒಳ ಪ್ರವೇಶಿಸಲು ಹಾಗೂ ಸರ್ವಿಸ್ ರಸ್ತೆಗೆ ಸರಾಗವಾಗಿ ತೆಗೆದುಕೊಳ್ಳಲು ಚಾಲಕರಿಗೆ ಅನುಕೂಲವಾಗಲಿದೆ. ಅಲ್ಲದೆ ವಾಹನಗಳು ಎಂಟ್ರಿ ಮತ್ತು ಎಕ್ಸಿಟ್ ಪಡೆಯುವುದು ದೂರದಿಂದಲೇ ಗಮನಕ್ಕೆ ಬರುವುದರಿಂದ ಅವಘಢಗಳನ್ನು ತಪ್ಪಿಸಬಹುದಾಗಿದೆ. 

ನೈಸ್‌ ರೋಡ್‌ ಮಾದರಿ ಎಂಟ್ರಿ, ಎಗ್ಸಿಟ್‌ ರಸ್ತೆ ನಿರ್ಮಾಣ: ಸಂಸದ ಪ್ರತಾಪ್‌ ಸಿಂಹ

ಸರ್ವಿಸ್ ರಸ್ತೆಗೆ ಲಿಂಗ್‌ ಮಾಡುವ ರಸ್ತೆ ಕಿರಿದು: ಬಹು ನಿರೀಕ್ಷಿತ ಬೆಂಗಳೂರು-ಮೈಸೂರು ರಾಷ್ಟಿಯ ಹೆದ್ದಾರಿಯ ಮೊದಲ ಹಂತದ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಈ ದಶಪಥ  ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗೆ ಲಿಂಕ್ ಮಾಡುವ ಜಾಗ ಕಿರಿದಾಗುವ ಜತೆಗೆ ಅವೈಜ್ಞಾನಿಕವಾಗಿತ್ತು. ಇದು ವಾಹನಗಳ ಸವಾರರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿ ಈ ಸ್ಥಳದಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದವು. ಇದೀಗ ಸುರಕ್ಷತೆಗೆ ಒತ್ತು ನೀಡಲಾಗಿದೆ. 

ಹೋಟೆಲ್‌ಗಳಿಗೆ ತೆರಳಲು ಅನುಕೂಲ: ಬಿಡದಿ ಪಟ್ಟಣದಿಂದ 2 ಕಿಮೀ ಅಂತರದ ದಾಸಪ್ಪನದೊಡ್ಡಿ ಬಳಿ ಬೆಂಗಳೂರಿನಿದ ಬರುವ ವಾಹನಗಳು ಸರ್ವಿಸ್ ರಸ್ತೆ ಮೂಲಕ ಎಕ್ಸ್ಪ್ರೆಸ್ ವೇಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಮೈಸೂರಿನಿಂದ ಬರುವ ವಾಹನಗಳು ಬಿಡದಿ ಕಡೆಗೆ ತಿರುವು ಪಡೆಯಲು ಸಹ ಇದೇ ಸ್ಥಳದಲ್ಲಿ ಅನುವುಮಾಡಿಕೊಡುತ್ತದೆ. ಬಿಡದಿಯ ಕಾಡುಮನೆ ಮೂಲಕ ಹಳೇಯ ಬಿಎಂ ಹೆದ್ದಾರಿಯಲ್ಲಿ ಚಲಿಸುವ ವಾಹನಗಳಿಗೆ ಬಿಡದಿ ಪಟ್ಟಣದಲ್ಲಿ ಊಟ ಉಪಹಾರ ಮುಗಿಸಿ ಮೈಸೂರಿಗೆ ಪ್ರಯಾಣ ಮಾಡಲು ಇದು ಅನುಕೂಲವಾಗಲಿದೆ.

ರಸ್ತೆಯ ತಿರುವ ಪಡೆಯುವ ಸ್ಥಳದ ಅಭಿವೃದ್ಧಿ: ಚನ್ನಪಟ್ಟಣ ಮತ್ತು ರಾಮನಗರದ ಕಡೆಯಿಂದ ಬರುವ ವಾಹನಗಳು ಬೆಂಗಳೂರು ಕಡೆಗೆ ತರೆಳಲು ಸಹ ಈ ಎಂಟ್ರಿ ಬಹು ಉಪಯುಕ್ತವಾಗಲಿದೆ. ದಶಪಥ ಹೆದ್ದಾರಿಯಲ್ಲಿ ವಿಸ್ತಾರವಾಗಿ ಎರಡು ಕಡೆ ಸರ್ವಿಸ್ ರಸ್ತೆಗೆ ಹಾಗೂ ಒಳಕ್ಕೆ ತಿರುವು ಪಡೆಯಲು ರಸ್ತೆಯನ್ನು ದುರಸ್ತಿ ಮಾಡಲಾಗಿದೆ. ಈ ಸುವ್ಯವಸ್ಥೆಗೆ ಪ್ರಯಾಣಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸಂಸದ ಪ್ರತಾಪ್ ಸಿಂಹ ವೀಕ್ಷಣೆ: ದಶಪಥದ ರಾಷ್ಟಿಯ ಹೆದ್ದಾರಿಯಲ್ಲಿ ರಾಮನಗರ ಹಾಗೂ ಬಿಡದಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸ್ಥಳಗಳಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳ ಜೊತೆಗೆ ವೀಕ್ಷಣೆ ಮಾಡಿದರು. ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಎಕ್ಸ್ಪ್ರೆಸ್ ಹೈವೆ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಡಿಬಿಎಲ್ ಕಂಪನಿಯ ಅಧಿಕಾರಿಗಳ ಜೊತೆಗೆ ಹೆದ್ದಾರಿಯ ಎರಡು ಕಡೆ ನೀಡಿರುವ ಎಂಟ್ರಿ ಹಾಗೂ ಎಕ್ಷಿಟ್ ಸ್ಥಳಗಳನ್ನು ಖುದ್ದು ಭೇಟಿ ನೀಡಿ ವೀಕ್ಷಣೆ ಮಾಡಿದರು.

ಎರಡೇ ತಾಸಲ್ಲಿ ಬೆಂಗಳೂರಿಂದ ಮೈಸೂರಿಗೆ ಹೋಗಿ..!

ವಾಹನ ಸವಾರರ ಆತಂಕ ದೂರ: ದಶಪಥದ ರಾಷ್ಟಿಯ ಹೆದ್ದಾರಿಯಲ್ಲಿ ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲು ಎಂಟ್ರಿ ಮತ್ತು ಎಕ್ಸಿಟ್ ವ್ಯವಸ್ಥೆಯಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಕೆಲ ಸುಧಾರಣಾ ಮತ್ತು ಸುರಕ್ಷತಾ ಕ್ರಮಗಳಿಗೆ ಒತ್ತುಕೊಟ್ಟು ಸವಾರರ ಆತಂಕವನ್ನು ದೂರ ಮಾಡಿದ್ದಾರೆ. ಇದೀಗ ವಾಹನ ಸವಾರರಲ್ಲಿದ್ದ ಆತಂಕವೂ ದೂರವಾದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್