ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದತ್ತ ರಾಷ್ಟ್ರ ನಾಯಕರು ಮುಖ ಮಾಡಿದ್ದಾರೆ. ಕಾಫಿಯ ನಾಡಿನಲ್ಲಿ ಫೆಬ್ರವರಿ 20 ಮತ್ತು21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇದೇ ಮೊದಲ ಬಾರಿಗೆ ಪ್ರವಾಸ ಮಾಡಲಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.15): ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದತ್ತ ರಾಷ್ಟ್ರ ನಾಯಕರು ಮುಖ ಮಾಡಿದ್ದಾರೆ. ಕಾಫಿಯ ನಾಡಿನಲ್ಲಿ ಫೆಬ್ರವರಿ 20 ಮತ್ತು21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇದೇ ಮೊದಲ ಬಾರಿಗೆ ಪ್ರವಾಸ ಮಾಡಲಿದ್ದಾರೆ. ಇದೀಗ ನಡ್ಡಾ ಶೃಂಗೇರಿ ಮಠಕ್ಕೆ ಭೇಟಿ ನೀಡುತ್ತಿರುವುದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಮಠಕ್ಕೆ ಜೆ.ಪಿ.ನಡ್ಡಾ ಭೇಟಿ, ವಾಸ್ತವ್ಯ: ರಾಜ್ಯ ರಾಜಕೀಯದಲ್ಲಿ ಈಗಾಗಲೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಶೃಂಗೇರಿ ಮಠವನ್ನ ಹೊಡೆದ ಗುಂಪು, ಇವರಿಂದ ಎಚ್ಚರಿಕೆಯಾಗಿರಿ , ಅಲ್ಲದೆ ಬಿಜೆಪಿಯಿಂದ ಬ್ರಾಹ್ಮಣ ಸಿಎಂ ಆಗುತ್ತಾರೆ ಎನ್ನುವ ಎಚ್ಡಿಕೆ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಹೇಳಿಕೆ ಬೆನ್ನಲ್ಲೆ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶೃಂಗೇರಿ ಗೆ ಭೇಟಿ ನೀಡಿ ಉಭಯ ಗುರುಗಳ ದರ್ಶನದ ಜೊತೆಗೆ ಶೃಂಗೇರಿಯಲ್ಲೇ ವಾಸ್ತವ್ಯ ಹೊಡಲಿರುವುದು ಕುತೂಹಲ ಮೂಡಿಸಿದೆ. ಶೃಂಗೇರಿ ಮಠ ಹಾಗೂ ಜಗದ್ಗುರುಗಳ ಭೇಟಿಯ ಜತೆಗೆ ಅಡಿಕೆ ಬೆಳೆಗಾರರು, ವಿವಿಧ ಕ್ಷೇತ್ರದಲ್ಲಿರುವ ಪ್ರಬುದ್ಧರನ್ನು ಭೇಟಿ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ.
ಲವ್ ಜಿಹಾದ್ ಬಗ್ಗೆ ಮಾತ್ನಾಡೋ ನಳಿನ್‌ಗೆ ಲವ್ವಲ್ಲಿ ಹೆಚ್ಚು ಕಡಿಮೆ ಆಗಿರ್ಬೇಕು: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ
ಫೆಬ್ರವರಿ 20 ರಂದು ಉಡುಪಿ ಪ್ರವಾಸ ಮುಗಿಸಿ ಮಧ್ಯಾಹ್ನದ ವೇಳೆಗೆ ಕೊಪ್ಪಕ್ಕೆ ಹೆಲಿಕ್ಯಾಪ್ಟರ್ನಲ್ಲಿ ಆಗಮಿಸುವ ಜೆ.ಪಿ. ನಡ್ಡಾ ಅವರು ಇಲ್ಲಿನ ಅಡಿಕೆ ಬೆಳೆಗಾರರನ್ನು ಭೇಟಿ ಮಾಡಿ, ನಂತರ ಶೃಂಗೇರಿಗೆ ತೆರಳಿ ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಶ್ರೀ ಶಾರದಾಂಬೆಯ ದರ್ಶನ ಪಡೆದು, ಗುರುಗಳನ್ನು ಭೇಟಿ ಮಾಡಿ ವಾಸ್ತವ್ಯ ಮಾಡಲಿದ್ದಾರೆ.ಫೆಬ್ರವರಿ 21 ರಂದು ಬೆಳಿಗ್ಗೆ ಚಿಕ್ಕಮಗಳೂರಿಗೆ ಹೆಲಿಕ್ಯಾಪ್ಟರ್ನಲ್ಲಿ ಆಗಮಿಸುವ ಜೆ.ಪಿ. ನಡ್ಡಾ ಅವರು ಇಲ್ಲಿನ ಕುವೆಂಪು ಕಲಾಮಂದಿರದಲ್ಲಿ ನಡೆಯಲಿರುವ ವೈದ್ಯರು, ಇಂಜಿನಿಯರ್ಸ್, ವಿವಿಧ ಕ್ಷೇತ್ರಗಳಲ್ಲಿನ ಗಣ್ಯರು ಸೇರಿದಂತೆ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಂಡು ನಂತರ ಬೇಲೂರಿಗೆ ತೆರಳಲಿದ್ದಾರೆ.