Dalit CM: ಅಂಬೇಡ್ಕರ್‌ ಚಿಂತನೆ ಕೊಲ್ಲೋದು ಬಿಜೆಪಿ ಗುರಿ, ಬೇಕಾದಂತೆ ಬಳಸಿಕೊಳ್ಳೋದು ಕಾಂಗ್ರೆಸ್ ‌ಗುರಿ: ನಟ ಪ್ರಕಾಶ್ ರಾಜ್

Published : Feb 15, 2025, 01:31 PM ISTUpdated : Feb 15, 2025, 01:41 PM IST
Dalit CM: ಅಂಬೇಡ್ಕರ್‌ ಚಿಂತನೆ ಕೊಲ್ಲೋದು ಬಿಜೆಪಿ ಗುರಿ,  ಬೇಕಾದಂತೆ ಬಳಸಿಕೊಳ್ಳೋದು ಕಾಂಗ್ರೆಸ್ ‌ಗುರಿ: ನಟ ಪ್ರಕಾಶ್ ರಾಜ್

ಸಾರಾಂಶ

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ದಲಿತ ಸಿಎಂ ವಿಚಾರವಾಗಿ ಆಡುತ್ತಿರುವ ಮಾತಿನ ಹಿಂದಿನ ಮೌನವನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ದಲಿತರು, ರೈತರು, ಬಡವರು ವೋಟ್ ಬ್ಯಾಂಕ್ ಆಗಿ ಮಾತ್ರ ಉಳಿದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಚುನಾವಣೆಗಳಲ್ಲಿ ಜಾತಿ, ಧರ್ಮ, ಹಣಬಲದಿಂದ ಗೆದ್ದು ಅಧಿಕಾರಕ್ಕೆ ಬಂದರೂ, ಜನರ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಪ್ರಶ್ನಿಸಿದರು.

ಮಂಗಳೂರು (ಫೆ.15): ಅಂಬೇಡ್ಕರ್ ಅವರ ಚಿಂತನೆಗಳನ್ನ ಸಾಯಿಸಬೇಕು ಅಂತಾ ಬಿಜೆಪಿ ಯೋಚನೆ ಮಾಡ್ತಿದೆ. ಇತ್ತ ಅಂಬೇಡ್ಕರ್, ಅವರ ಹೆಸರು, ಜಾತಿ ಉಪಯೋಗಿಸಿಕೊಳ್ಳಬೇಕು ಅಂತಾ ಕಾಂಗ್ರೆಸ್ ಯೋಚನೆ ಮಾಡುತ್ತೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ನಟ ಪ್ರಕಾಶ್ ರಾಜ್ ಮಾರ್ಮಿಕವಾಗಿ ನುಡಿದರು.

ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಚರ್ಚೆ ಮುನ್ನಲೆಗೆ ಬಂದಿರುವ ವಿಚಾರ ಸಂಬಂಧ ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ಬಿಜೆಪಿ, ಕಾಂಗ್ರೆಸ್ ದಲಿತ ಸಿಎಂ ವಿಚಾರವಾಗಿ ಆಡುತ್ತಿರುವ ಮಾತಿನ ಹಿಂದಿನ ಮೌನವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಬಿಜೆಪಿ ಕಾಂಗ್ರೆಸ್ ಎಲ್ಲರೂ ದಲಿತ ಸಿಎಂ ಆಗಬೇಕೆಂದಷ್ಟೇ ಹೇಳ್ತಿದ್ದಾರೆ. ಯಾಕೆ ಆಗಬೇಕು? ಅದರ ಹಿಂದಿನ ಹುನ್ನಾರ ಏನೆಂದು ಹೇಳ್ತಿಲ್ಲ ಅವರು. ರೈತರು, ದಲಿತರು, ಬಡವರು ಇವರುಗಳಿಗೆ ವೋಟ್ ಹಾಕುವ ಮಷಿನ್‌ ಅಲ್ಲದೇ ಬೇರೇನೂ ಅಗಿಲ್ಲ ಅಲ್ವ? ದಲಿತರು, ರೈತರ ಬಗ್ಗೆ ಇವರೆಲ್ಲರೂ ಮಾತಾಡ್ತಿರೋದು ನೈಜ ಕಾಳಜಿಯಿಂದಲ್ಲ ವೋಟ್ ಬ್ಯಾಂಕ್ ದೃಷ್ಟಿಯಿಂದ. ಇದನ್ನ ನಾವುಗಳು ಅರ್ಥ ಮಾಡಿಕೊಳ್ಳಬೇಕು, ಪ್ರಶ್ನೆ ಮಾಡಬೇಕು, ಯೋಚಿಸಬೇಕಿದೆ ಎಂದರು.

ಇದನ್ನೂ ಓದಿ: ಕುಂಭಮೇಳಕ್ಕೆ ಹೋದ್ರೆ ತಪ್ಪೇನಿದೆ? ನಾನು ದೇವರಿಲ್ದೇ ಬದುಕಬಲ್ಲೆ, ಆದ್ರೆ ನನ್ನ ಹೆಂಡ್ತಿ... ಪ್ರಕಾಶ್‌ ರಾಜ್‌ ಮಾತು ಕೇಳಿ...

ಅವರು ಬರ್ತಾರೆ ಹೋಗ್ತಾರೆ, ಪರ್ಮನೆಂಟ್ ಕಷ್ಟ ಅನುಭವಿಸೋದು ನಾವು!

ನಿಮ್ಮ ನಿಮ್ಮ‌ ಪ್ರತಿನಿದಿಗಳು ನಿಮ್ಮನ್ನು ಸರಿಯಾಗಿ ಪ್ರತಿನಿಧಿಸಬೇಕು. ಹೀಗಾಗಿ ನೀವು ಪಕ್ಷ ನೋಡಬಾರದು, ಪ್ರತಿನಿಧಿಗಳನ್ನ ನೋಡಬೇಕು. ನಾವು ಮತ ಹಾಕುವುದರಿಂದ ಚುನಾಯಿತರಾಗಿ ಇವರು ನಮ್ಮನ್ನು ನಿಜವಾಗಿಯೂ ಪ್ರತಿನಿಧಿಸುತ್ತಾರೆಯೇ ಎಂಬುದನ್ನ ಯೋಚಿಸಬೇಕು, ನಿಮ್ಮ ಸಮಸ್ಯೆ, ಕಷ್ಟವನ್ನು ಅರ್ಥ ಮಾಡಿಕೊಳ್ಳುವವರನ್ನ ಆರಿಸಬೇಕು. ಹಾಗಾದಾಗ ಈ ಪ್ರಶ್ನೆಗಳು ಬರೋದಿಲ್ಲ ಎಂದರು.

ಇದನ್ನೂ ಓದಿ: ಹೆಂಡ್ತಿ ನಂಬಿಕೆ ಓಕೆ ನಿಮ್ಗೆ, ಪ್ರಧಾನಿ ನಂಬಿಕೆ ಯಾಕೆ ನಾಟ್ ಓಕೆ? ಪ್ರಕಾಶ್‌ ರಾಜ್‌ಗೆ 'ಹೈ' ಕ್ಲಾಸ್!

ಭ್ರಷ್ಟಾಚಾರ ಅಂದ್ರೇನೆ ಚುನಾವಣೆ:

ಭಾರತದಲ್ಲಿ ಒಂದು ದೊಡ್ಡ ಭ್ರಷ್ಟಾಚಾರ ಅಂದ್ರೆ ಅದು ಚುನಾವಣೆ. ಯಾವುದೇ ಚುನಾವಣೆ ಬರಲಿ. ಅಲ್ಲಿ ಜಾತಿ, ಹಣ, ಆಮಿಷೆ, ಕುತಂತ್ರ ಎಲ್ಲ ಗೊತ್ತು ಅನ್ನುವ ಆಧಾರದಲ್ಲೇ ಚುನಾಯಿತರಾಗುತ್ತಾರೆ. ಸಮನ್ವಯ, ಸೌಹಾರ್ದತೆ, ದೇಶವನ್ನು ನಡೆಸುವ ಕಡೆ ಆಗುತ್ತಿಲ್ಲ. ಚುನಾವಣೆಗಳಲ್ಲಿ ಜಾತಿ, ಧರ್ಮ, ಹಣಬಲದಿಂದ ಗೆದ್ದು ಅಧಿಕಾರಕ್ಕೆ ಬರ್ತಾರೆ ಹೋಗ್ತಾರೆ. ಆದರೆ ನಮ್ಮ ಸಮಸ್ಯೆಗಳು ಬಗೆಹರಿಯುತ್ತವಾ? ಪರ್ಮನೆಂಟಾಗಿ ಕಷ್ಟ ಅನುಭವಿಸೋದು ನಾವು ಮಾತ್ರ ಅಲ್ವಾ? ಹೀಗಾಗಿ ಎಲ್ಲ ನಿಟ್ಟಿನಿಂದಲೂ ಯೋಚನೆ ಮಾಡಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು