ಗಲಭೆ ಕೇಸ್ ಮುಚ್ಚಿ ಹಾಕಲು ಗೃಹ ಇಲಾಖೆಗೆ ಪ್ರಭಾವಿ ಸಚಿವರೊಬ್ಬರು ಪತ್ರ ಬರೆದ ಸ್ಫೋಟಕ ಸುದ್ದಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬಯಲು ಮಾಡುತ್ತಿದೆ. ಇದು ಡಿಜೆ ಹಳ್ಳಿ, ಕೆಜಿ ಹಳ್ಳಿಗೆ ಬೆಂಕಿ ಇಟ್ಟವರ ಪುಂಡಾಟದ ಸುದ್ದಿಯಲ್ಲ. ಶಿವಮೊಗ್ಗ ಗಲಭೆ ಕೇಸ್ ಕೂಡ ಅಲ್ಲ.
ಬೆಂಗಳೂರು (ಅ.3): ಗಲಭೆ ಕೇಸ್ ಮುಚ್ಚಿ ಹಾಕಲು ಗೃಹ ಇಲಾಖೆಗೆ ಪ್ರಭಾವಿ ಸಚಿವರೊಬ್ಬರು ಪತ್ರ ಬರೆದ ಸ್ಫೋಟಕ ಸುದ್ದಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬಯಲು ಮಾಡುತ್ತಿದೆ. ಇದು ಡಿಜೆ ಹಳ್ಳಿ, ಕೆಜಿ ಹಳ್ಳಿಗೆ ಬೆಂಕಿ ಇಟ್ಟವರ ಪುಂಡಾಟದ ಸುದ್ದಿಯಲ್ಲ. ಮೊನ್ನೆ ನಡೆದ ಶಿವಮೊಗ್ಗ ಗಲಭೆ ಕೇಸ್ ಕೂಡ ಅಲ್ಲ. ಇದು ಹುಬ್ಬಳ್ಳಿ ಗಲಭೆ ಪ್ರಕರಣದ ಸ್ಟೋಟಕ ಸುದ್ದಿ. 2022ರ ಏಪ್ರಿಲ್ 16ರಂದು ಹಳೇ ಹುಬ್ಬಳ್ಳಿ ಠಾಣೆ ಎದುರು ನಡೆದಿದ್ದ ಗಲಭೆಗೆ ಸಂಬಂಧಿಸಿ ಸ್ಟೋಟಕ ಸುದ್ದಿಯಾಗಿದೆ. ಈ ಮುಸ್ಲಿಂ ಗಲಭೆ ಪ್ರಕರಣ ಕೈಬಿಡುವಂತೆ ಕರ್ನಾಟಕ ರಾಜ್ಯದ ಪ್ರಭಾವಿ ಸಚಿವರೊಬ್ಬರು ಪತ್ರ ಬರೆದಿರುವ ಸುದ್ದಿಯಾಗಿದೆ.
ಈ ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಮುಚ್ಚಿಹಾಕಲು ತನ್ವೀರ್ ಸೇಠ್ ಪತ್ರ ಬರೆದಿದ್ದರು. ಇದೀಗ ಹುಬ್ಬಳ್ಳಿ ಗಲಭೆಯನ್ನು ಕೈಬಿಡಲು ಡಿಕೆ ಶಿವಕುಮಾರ್ ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡುವಂತೆ ಗೃಹ ಇಲಾಖೆಗೆ ಪತ್ರ ಬರೆದ ಮಿನಿಸ್ಟರ್ ಡಿಕೆ ಶಿವಕುಮಾರ್ ಅವರ ಶಿಫಾರಸು ಆಧರಿಸಿ ಪ್ರಕರಣದ ಮಾಹಿತಿಯನ್ನು ಎಡಿಜಿ ಕೇಳಿದ್ದಾರೆ. ಪ್ರಕರಣ ಹಿಂಪಡೆಯುವ ಬಗ್ಗೆ ದಾಖಲೆ ಸಹಿತ ಅಭಿಪ್ರಾಯ ಕೇಳಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರರಿಂದ ಹು-ಧಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
undefined
ಬೆಂಗಳೂರು: ಕೆ.ಜಿ. ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣ, ಪೊಲೀಸರಿಗೆ ಕ್ಲೀನ್‌ಚಿಟ್
ಮಸೀದಿ ಮೇಲೆ ಭಾಗವಾ ಧ್ವಜದ ಫೋಟೋ ಸ್ಟೇಟಸ್ ಹಾಕಿದ್ದಕ್ಕೆ 2022ರ ಏಪ್ರಿಲ್ 16ರಂದು ಹಳೇ ಹುಬ್ಬಳ್ಳಿ ಠಾಣೆ ಎದುರು ಗಲಭೆ ನಡೆದಿತ್ತು. ಸಾವಿರಾರು ಮುಸ್ಲಿಂರು ಠಾಣೆ ಮುಂದೆ ಜಮಾಯಿಸಿ ಗಲಾಟೆ ನಡೆಸಿದ್ರು. ಪೊಲೀಸ್ ಠಾಣೆ, ಆಸ್ಪತ್ರೆ, ದೇವಸ್ಥಾನ, ಮನೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ಗಲಭೆಯಲ್ಲಿ ಭಾಗಿಯಾಗಿದ್ದ 158 ಆರೋಪಿಗಳನ್ನು ಬಂಧಿಸಲಾಗಿತ್ತು. ಗಲಭೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ 12 FIR ದಾಖಲಾಗಿತ್ತು. 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
AIMIM ಕಾರ್ಪೋರೆಟರ್ ನಜೀರ್ ಹೊನ್ಯಾಳ ಸೇರಿ 7 ಬಾಲಾಪರಾಧಿಗಳಿಗೆ ಜಾಮೀನು ಸಿಕ್ಕಿದ್ದು, ಈಗ ಹೊರಗಿದ್ದಾರೆ. 151 ಮುಸ್ಲಿಂ ಆರೋಪಿಗಳು ಬಳ್ಳಾರಿ ಹಾಗೂ ಕಲಬುರಗಿ ಜೈಲಿನಲ್ಲಿದ್ದಾರೆ. ಈ ಗಲಭೆಕೋರರನ್ನು ಪ್ರಕರಣದಿಂದ ಕೈಬಿಡುವಂತೆ ಸಚಿವ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ.
ಅಂದು ಡಿಜೆ ಹಳ್ಳಿ ಕೇಸ್ನಲ್ಲಿ ಅಮಾಯಕರ ಕೈಬಿಡುವಂತೆ ಜುಲೈ 23ರಂದು ಶಾಸಕ ತನ್ವೀರ್ ಸೇಠ್ ಪತ್ರ ಬರೆದಿದ್ದರು. ಈ ಸ್ಫೋಟಕ ಸುದ್ದಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬ್ರೇಕ್ ಮಾಡಿತ್ತು. ಶಾಸಕರು ಪತ್ರ ಬರೆದಿದ್ದೂ ನಿಜ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದರು.
ಮನವಿ ಪರಿಶೀಲಿಸಲು ಕ್ಯಾಬಿನೆಟ್ ಉಪ ಸಮಿತಿಗೆ ಸೂಚಿಸಿದ್ದೇನೆ ಎಂದಿದ್ದರು.
ಡಿಜೆ ಹಳ್ಳಿ ಗಲಭೆಯಲ್ಲಿ ಅಮಾಯಕರಿದ್ದಾರೆ, ಸರ್ಕಾರದ ವಿರುದ್ಧವೇ ಗುಡುಗಿದ ತನ್ವೀರ್ ಸೇಠ್!
ಈಗ ಹಳೇ ಹುಬ್ಬಳ್ಳಿ ಕೇಸ್‌ನಲ್ಲಿ ಹುಬ್ಬಳ್ಳಿ ಗಲಭೆಕೋರರ ಖುಲಾಸೆಗೆ, ಕೋಮುಗಲಭೆ ಪ್ರಕರಣ ಕೈಬಿಡುವಂತೆ ಡಿಸಿಎಂ ಡಿಕೆಶಿ ಶಿಫಾರಸು ಪತ್ರ ಬರೆದಿರುವುದು ಸುವರ್ಣನ್ಯೂಸ್ ಗೆ ಲಭ್ಯವಾಗಿದೆ. ಡಿಸಿಎಂ, ಶಾಸಕರ ಪತ್ರಕ್ಕೆ ಸ್ಪಂದಿಸುವ ನೆಪದಲ್ಲಿ ಕೇಸ್ ಕ್ಲೋಸ್ ಯತ್ನ ನಡೆಸುತ್ತಿದ್ದು, ಆಯುಕ್ತರು, ಎಸ್ಪಿಗಳಿಗೆ ಪತ್ರ ಬರೆದು ಎಡಿಜಿಪಿ ಮಾಹಿತಿ ಕೇಳಿದ್ದಾರೆ. ಸೆ.30ರೊಳಗೆ ಪ್ರಕರಣದ ಪೂರ್ಣ ವಿವರ ನೀಡುವಂತೆ ಡಿಜಿ-ಐಜಿ ಸೂಚನೆ ನೀಡಲಾಗಿದೆ. ಪ್ರಕರಣದ ಎಫ್ಐಆರ್, ಚಾರ್ಜ್‌ಶೀಟ್, ಸಾಕ್ಷಿಗಳ ಹೇಳಿಕೆ ಸಲ್ಲಿಸಲು ಸೂಚಿಸಲಾಗಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸರ್ಕಾರದಿಂದ ಅಲ್ಪಸಂಖ್ಯಾತ ಕಾರ್ಡ್ ಬಳಕೆ ಮಾಡುತ್ತಿದ್ದೆಯಾ ಎಂಬ ಪ್ರಶ್ನೆ ಎದ್ದಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಹಳೇ ಹುಬ್ಬಳ್ಳಿ ಕೇಸ್ ಮಾತ್ರವಲ್ಲದೆ ಶಿವಮೊಗ್ಗ, ಹಾವೇರಿ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲೂ ಇರುವ ಕೇಸ್‌ಗಳನ್ನು ಕೈಬಿಡಲು ಸಿದ್ಧತೆ ಮಾಡುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.