ದರ್ಶನ್‌ಗೆ ವಿಪರೀತ ಬೆನ್ನುನೋವು: ಬಳ್ಳಾರಿಯಲ್ಲಿಯೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಒಪ್ಪಿಗೆ!

By Sathish Kumar KHFirst Published Oct 21, 2024, 11:20 AM IST
Highlights

ಚಿತ್ರದುರ್ಗದ ರೇಣುಕಾಸವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್‌ಗೆ ತೀವ್ರ ಬೆನ್ನುನೋವು ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವ ಆಸೆ ಈಡೇರದ ಕಾರಣ, ಬಳ್ಳಾರಿಯಲ್ಲಿಯೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.

ಬಳ್ಳಾರಿ (ಅ.21): ಚಿತ್ರದುರ್ಗದ ರೇಣುಕಾಸವಾಮಿ ಕೊಲೆನ ಕೇಸಿನಲ್ಲಿ ಕಳೆದ 3 ತಿಂಗಳಿಂದ ಜೈಲು ಹಕ್ಕಿಯಾಗಿರುವ ನಟ ದರ್ಶನ್ ತೂಗುದೀಪಗೆ ವಿಪರೀತವಾಗಿ ಬೆನ್ನುನೋವು ಕಾಣಿಸಿಕೊಂಡಿದೆ. ಎಷ್ಟೇ ಬೆನ್ನುನೋವು ಕಾಣಿಸಿಕೊಂಡರೂ ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಯಿಂದ ಚಿಕಿತ್ಸೆ ಪಡೆದುಕೊಳ್ಳದೇ ತಾನು ಬೆಂಗಳೂರಿಗೆ ಹೋಗಬೇಕು ಎಂದು ಯೋಜನೆ ರೂಪಿಸಿದ್ದರು. ಆದರೆ, ತನ್ನ ಯೋಜನೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇದೀಗ ಬಳ್ಳಾರಿಯಲ್ಲಿಯೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ದರ್ಶನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ದರ್ಶನ್ ತೂಗುದೀಪ ಜೈಲಿನಲ್ಲಿಯೇ ಸುಮಾರು 120 ದಿನಗಳನ್ನು ಕಳೆದಿದ್ದಾರೆ. ಆದರೆ, ಜೈಲಿನಲ್ಲಿ ಕುಳಿತುಕೊಳ್ಳಲು ಚೇರು, ಮಲಗಲು ಮತ್ತನೆಯ ಹಾಸಿಗೆ ವ್ಯವಸ್ಥೆ ಇಲ್ಲದೇ ಅಜಾನುಬಾಹು ದೇಹದ ದರ್ಶನ್‌ ಕೆಳಗೆ ಕುಳಿತು ತೀವ್ರ ಬೆನ್ನು ನೋವಿಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲಿಯೇ ನಟ ದರ್ಶನ್‌ ತನಗೆ ಜಾಮೀನು ಲಭ್ಯವಾಗುತ್ತದೆ ಎಂಬ ನಿರೀಕ್ಷಿಸಿ ಯಾವುದಾದರೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕಳ್ಳಲು ಬಯಸಿದ್ದರು. ಆದರೆ, ಇದೊಂದು ಗಂಭೀರ ಪ್ರಕರಣವಾಗಿದ್ದರಿಂದ ಜಾಮೀನು ಲಭ್ಯವಾಗಲಿಲ್ಲ. ಹೀಗಾಗಿ, ಬಳ್ಳಾರಿ ಜೈಲಿನಲ್ಲಿಯೇ ಸೆರೆವಾಸ ಅನುಭವಿಸುತ್ತಿರುವ ದಾಸನಿಗೆ ಕಳೆದೊಂದು ವಾರದ ಹಿಂದೆ ಸರ್ಜಿಕಲ್ ಮಂಚ, ಹಾಸಿಗೆ, ದಿಂಬು ಹಾಗೂ ಚೇರನ್ನು ತಂದುಕೊಡಲಾಗಿತ್ತು. ಆದರೆ, ಅವರಿಗೆ ಕೊಟ್ಟ ಹಾಸಿಗೆ ದಿಂಬು ಎಲ್ಲವೂ ಆಸ್ಪತ್ರೆಯದ್ದಾಗಿದ್ದರಿಂದ ಬೆನ್ನು ನೋವಿಗೆ ಮುಕ್ತಿ ಸಿಕ್ಕಿಲ್ಲ.

Latest Videos

ಇದನ್ನೂ ಓದಿ: ಅಧಿಕಾರ ಉಳಿಸಿಕೊಳ್ಳಲು ಜಾತಿಗಣತಿ ವರದಿ ಪ್ರಸ್ತಾಪಿಸುತ್ತಿರುವ ಸಿಎಂ: ಸಂಸದ ಬೊಮ್ಮಾಯಿ

ಇದೀಗ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ ತನಗೆ ಹೇಗಾದರೂ ಮಾಡಿ ಚಿಕಿತ್ಸೆ ಕೊಡಿಸಿ ಎಂದು ಕೇಳಿದಾಗ ಅದಕ್ಕೆ ಸ್ಕ್ಯಾನಿಂಗ್ ಮಾಡಿಸಬೇಕು ಎಂದು ಹೇಳಿದ್ದಾರೆ. ಹೀಗಾಗಿ, ನಟ ದರ್ಶನ್‌ಗೆ L1 ಹಾಗೂ L5 ನೋವಿನ ಭಾಗದಲ್ಲಿ ಸಮಸ್ಯೆ ತಿಳಿಯಲು ಸ್ಕ್ಯಾನಿಂಗ್ ಮೊರೆ ಹೋಗಿದ್ದಾರೆ. ಇಷ್ಟು ದಿನ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಮಾಡುವುದು ಬೇಡ ನನ್ನನ್ನು ಬೆಂಗಳೂರಿಗೆ ವರ್ಗಾಯಿಸಿ, ಅಲ್ಲಿಯೇ ಚಿಕಿತ್ಸೆಡ ಪಡೆಯುತ್ತೇನೆ ಎಂದು ಪಟ್ಟು ಹಿಡಿದ ದರ್ಶನ್‌ಗೆ ಯಾವುದೇ ಧನಾತ್ಮಕ ಪ್ರತಿಕ್ರಿಯೆಯೂ ಸಿಕ್ಕಿಲ್ಲ. ಆದ್ದರಿಂದ ಇದೀಗ ಬಳ್ಳಾರಿಯಲ್ಲಿಯೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಸಮ್ಮತಿ ಸೂಚಿಸಿದ್ದಾರೆ.

ಬೆನ್ನು ನೋವಿನ ಚಿಕಿತ್ಸೆಗೆ ವೈದ್ಯರು ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಬಗ್ಗೆ ಕೇಳಿದಾಗ ನಟ ದರ್ಶನ್ ಯಾವುದನ್ನೂ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎಂದರಿತ ಜೈಲು ಸಿಬ್ಬಂದಿ ದರ್ಶನ್‌ಗೆ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಗೆ ಎಂದು ತಿಳಿದುಕೊಂಡಿದ್ದಾರೆ. ಬೆನ್ನುನೋವು ತೀವ್ರತರವಾದ ಹಿನ್ನಲೆಯಲ್ಲಿ ದರ್ಶನ್ ಪರೋಕ್ಷವಾಗಿ CT ಸ್ಕ್ಯಾನ್ ಮತ್ತು MRI ಸ್ಕ್ಯಾನಿಂಗ್  ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಇನ್ನು ನಾಳೆ ದರ್ಶನ್  ಪತ್ನಿ ವಿಜಯಲಕ್ಷ್ಮಿ ಬಂದ ಬಳಿಕ ಚರ್ಚೆ ಮಾಡಿ ಸ್ಕ್ಯಾನಿಂಗ್ ಕರೆದುಕೊಂಡು ಹೋಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಬಿಗ್ ಬಾಸ್ 11 ಮನರಂಜನೆ ಕಡಿಮೆ, ವಿವಾದ ಜಾಸ್ತಿ: ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಗಾಯಕ ಹನುಮಂತು ಎಂಟ್ರಿ!

ದರ್ಶನ್ ಸ್ಕ್ಯಾನಿಂಗ್ ಮಾಡಿಸಲು ವಿಮ್ಸ್ ಹಾಗೂ ಜಿಲ್ಲಾಸ್ಪತ್ರೆ ಸಿಬ್ಬಂದಿಗೆ ಜೈಲಾಧಿಕಾರಿಗಳಿಂದ ಮಾಹಿತಿ ರವಾನಿಸಲಾಗಿದೆ. ವೈದ್ಯರ ಜೊತೆಗೆ ಚರ್ಚೆ ಬಳಿಕ‌ ಜೈಲಿನ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ. ಮೇಲಾಧಿಕಾರಿಗಳ ಅನುಮತಿ ಬಳಿಕ‌ ಸ್ಕ್ಯಾನಿಂಗ್ ಡೇಟ್ ಫಿಕ್ಸ್ ಮಾಡಿ, ನಂತರ ಅವರನ್ನು ಬಳ್ಳಾರಿಯಲ್ಲಿಯೇ ಸ್ಕ್ಯಾನಿಂಗ್ ಮತ್ತು ಇತರೆ ಚಿಕಿತ್ಸೆಗಳನ್ನು ನೀಡಲಾಗುತ್ತದೆ.

click me!