ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್‌ಗೆ ನಿರಾಸೆ, 57ನೇ ಸಿಸಿಹೆಚ್ ಕೋರ್ಟ್ ಹೇಳಿದ್ದೇನು?

By Chethan KumarFirst Published Oct 5, 2024, 5:37 PM IST
Highlights

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೆ ನಿರಾಸೆಯಾಗಿದೆ. ಇದೀಗ ಜೈಲೇ ಗತಿಯಾಗಿದೆ. ಇಂದು ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಹೇಳಿದ್ದೇನು?
 

ಬೆಂಗಳೂರು(ಅ.05) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಇಂದು ಜಾಮೀನು ನಿರೀಕ್ಷೆಯಲ್ಲಿದ್ದರು. ಆದರೆ ದರ್ಶನ್‌ಗೆ ನಿರಾಸೆಯಾಗಿದೆ. ದರ್ಶನ್ ಜಾಮೀನು ಅರ್ಜಿಯನ್ನು ಮಂಗಳವಾರ(ಅ.8) ಮಧ್ಯಾಹ್ನ 12.30ಕ್ಕೆ ಮುಂದೂಡಲಾಗಿದೆ. ಹೀಗಾಗಿ ಕನಿಷ್ಠ ಮಂಗವಾರದ ವರೆಗೆ ನಟ ದರ್ಶನ್‌ಗೆ ಜೈಲೇ ಗತಿಯಾಗಿದೆ. ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಇಂದು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿವಾದ ಮಂಡಿಸಲು ಎಸ್‌ಪಿಪಿ ಪ್ರಸನ್ನ ಕುಮಾರ್ ಸಮಯ ಕೇಳಿದ್ದಾರೆ. ಹೀಗಾಗಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ವಕೀಲರಾದ ಸಿವಿ ನಾಗೇಶ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಕೆ ಮಾಡಿರುವ ಚಾರ್ಜ್‌ಶೀಟ್‌ನ ಕೆಲ ತಪ್ಪುಗಳು, ಕಾನೂನು ತೊಡಕುಗಳನ್ನು ಎತ್ತಿತೋರಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ದರ್ಶನ್ ಅಭಿಮಮಾನಿಗಳಿಂದ ಆಗಿದೆ. ಇದರಲ್ಲಿ ದರ್ಶನ್ ನೇರ ಪಾತ್ರವಿಲ್ಲ ಎಂದು ವಾದಿಸಿದ್ದಾರೆ. ಇನ್ನು ಕೊಲೆ ನಡೆದ ದಿನ ಹಾಗೂ ಮರಣೋತ್ತರ ಪರೀಕ್ಷೆ ನಡೆದ ದಿನಕ್ಕೆ ಅಂತರವಿದೆ. ಈ ವಿಳಂಬಕ್ಕೆ ಕಾರಣ ನೀಡಿಲ್ಲ ಎಂದು ಸಿವಿ ನಾಗೇಶ್ ಹೇಳಿದ್ದಾರೆ. 

Latest Videos

ಸರ್ಫಲ್ಲಿ ಒಗೆದ ಬಟ್ಟೆಯಲ್ಲಿ ಸಾಕ್ಷ್ಯ ಸಿಕ್ಕಿದ್ದು ಹೇಗೆ: ದರ್ಶನ್ ಸಿಕ್ಕಿಸಲು ಕಲ್ಪಿತ ಕತೆ ಕಟ್ಟಲಾಗಿದೆ ಎಂದ ವಕೀಲ

57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಸಿವಿ ನಾಗೇಶ್ ಪೊಲೀಸರು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಿವಿ ನಾಗೇಶ್ ವಾದ ಮುಕ್ತಾಯಗೊಂಡ ಬೆನ್ನಲ್ಲೇ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್, ಪ್ರತಿವಾದಕ್ಕೆ ಕಾಲವಕಾಶ ಕೋರಿದ್ದಾರೆ. ಬೇರೆ ಪ್ರಕರಣಗಳು ಇರುವ ಕಾರಣ ಪ್ರತಿವಾದ ಮಂಡಿಸಲು ಕಾಲವಕಾಶ ಬೇಕು ಎಂದು 57ನೇ ಸಿಸಿಹೆಚ್ ಕೋರ್ಟ್‌‌ಗೆ ಮನವಿ ಮಾಡಿದ್ದಾರೆ. ಹೀಗಾಗಿ ಪ್ರಕರಣವನ್ನು ಅಕ್ಟೋಬರ್ 8ಕ್ಕೆ ಮುಂದೂಡಲಾಗಿದೆ.

ಇತ್ತ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಈ ಕುರಿತು ವೈದ್ಯರ ಬಳಿ ದರ್ಶನ್ ಸಮಸ್ಯೆ ಹೇಳಿಕೊಂಡಿದ್ದಾರೆ. ಬೆನ್ನಿನಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ಸ್ಕ್ಯಾನಿಂಗ್ ಅವಶ್ಯಕತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ಆದರೆ ಸದ್ಯಕ್ಕೆ ಸ್ಕ್ಯಾನಿಂಗ್ ಬೇಡ, ಔಷಧಿ ನೀಡಲು ಸೂಚಿಸಿರುವ ದರ್ಶನ್, ಬೆಂಗಳೂರಿನಲ್ಲಿ ಸ್ಕ್ಯಾನಿಂಗ್ ಮಾಡಿಸುವುದಾಗಿ ಹೇಳಿದ್ದಾರೆ. 

ಇದರ ನಡುವೆ ಬಳ್ಳಾರಿಗೆ ಜೈಲಿಗೆ ದರ್ಶನ್ ಪುತ್ರ ವಿನೇಶ್ ಹಾಗೂ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿ ದರ್ಶನ್ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಪುತ್ರನಿಗೆ ಧೈರ್ಯ ಹೇಳಿರುವ ದರ್ಶನ್ ಆದಷ್ಟು ಬೇಗ ಹೊರಬರುವುದಾಗಿ ಹೇಳಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್: ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದ ವೈದ್ಯರು
 

click me!