20 ಲಕ್ಷ ರೂ. ಕದ್ದ ಕಾರು ಚಾಲಕಕ ಗೋವಾದ ಕ್ಯಾಸಿನೋದಲ್ಲಿ ಸೆರೆ!

By Ravi Janekal  |  First Published Aug 7, 2023, 1:43 PM IST

ಕುಡಿಯುವ ನೀರಿನ ಕಾಮಗಾರಿ ಕಾರ್ಮಿಕರಿಗೆ ವೇತನ ಕೊಡಲು ತಂದಿದ್ದ 20 ಲಕ್ಷ ರೂ. ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದ ಆರೋಪಿ ಗೋವಾದ ಕ್ಯಾಸಿನೋದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.


ಶಿವಮೊಗ್ಗ (ಆ.7) : ಕುಡಿಯುವ ನೀರಿನ ಕಾಮಗಾರಿ ಕಾರ್ಮಿಕರಿಗೆ ವೇತನ ಕೊಡಲು ತಂದಿದ್ದ 20 ಲಕ್ಷ ರೂ. ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದ ಆರೋಪಿ ಗೋವಾದ ಕ್ಯಾಸಿನೋದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

 ಶಿರಾಳಕೊಪ್ಪ ನೆಹರು ಕಾಲೋನಿಯ ಎ.ಎಸ್.ನಿತೀಶ್ ಬಂಧಿತ ಆರೋಪಿ. ಬಂಧಿತನಿಂದ 7.61 ಲಕ್ಷ ರೂ. ನಗದು ಜಪ್ತಿ. ಗೋವಾದ ಕ್ಯಾಸಿನೊದಲ್ಲಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಕ್ಯಾಸಿನೋಗೆ ತೆರಳಿ ಆರೋಪಿ ಬಂಧಿಸಿ ಕರೆತಂದ   ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು. 

Tap to resize

Latest Videos

ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ 24*7 ಕುಡಿಯುವ ನೀರು ಸರಬರಾಜಿನ ಯೋಜನಾ ವ್ಯವಸ್ಥಾಪಕ ಹೇಮಂತ್ ಕುಮಾರ್ ಕಾರಿನ ಚಾಲಕನಾಗಿದ್ದ ಆರೋಪಿ. ಕಳೆದ ಜು.29ರಂದು ಜ್ಯೋತಿನಗರದ ಬಳಿ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಶಿವಮೊಗ್ಗ: ವಿಕಲಚೇತನ ಕಲ್ಯಾಣಾಧಿಕಾರಿ ಕಚೇರಿಗೆ ನುಗ್ಗಿ ಪತ್ನಿಗೆ ಥಳಿಸಿದ ಪತಿ!

ಜೂಜಾಟದ ಗೀಳು ಬೆಳೆಸಿಕೊಂಡಿದ್ದ ನಿತೀಶ್ 20 ಲಕ್ಷ ರೂ.ನಲ್ಲಿ 12.39 ಲಕ್ಷ ರೂ. ಕ್ಯಾಸಿನೋದಲ್ಲಿ ಜೂಜಾಡಿ ಕಳೆದಿದ್ದಾನೆ ಎನ್ನಲಾಗಿದೆ. 7,61,500 ರೂ. ನಗದು ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ

 ಡಿವೈಎಸ್ಪಿ ಬಾಲರಾಜ್ , ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್‌  ಪಿಎಸ್‌ಐಗಳಾದ ಕುಮಾರ್ ಕುರಗುಂದ, ಎಂ.ರಘುವೀರ ನೇತೃತ್ವದಲ್ಲಿ ಕಾರ್ಯಾಚರಣ

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

click me!