ರಾಜ್ಯಾದ್ಯಂತ ಎಸಿಬಿ ಬೃಹತ್ ದಾಳಿ: 18 ಭ್ರಷ್ಟ ಅಧಿಕಾರಿಗಳಿಗೆ ನಡುಕ, 75 ಕಡೆ ಶೋಧ ಕಾರ್ಯ!

Published : Mar 16, 2022, 09:47 AM ISTUpdated : Mar 16, 2022, 09:55 AM IST
ರಾಜ್ಯಾದ್ಯಂತ ಎಸಿಬಿ ಬೃಹತ್ ದಾಳಿ: 18 ಭ್ರಷ್ಟ ಅಧಿಕಾರಿಗಳಿಗೆ ನಡುಕ, 75 ಕಡೆ ಶೋಧ ಕಾರ್ಯ!

ಸಾರಾಂಶ

* ರಾಜ್ಯಾದ್ಯಂತ ಎಸಿಬಿ ಬೃಹತ್ ದಾಳಿ * 18 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳ ಮೇಲೆ ದಾಳಿ  * 75 ಕಡೆಗಳಲ್ಲಿ ಶೋಧ ಕಾರ್ಯ 

ಬೆಂಗಳೂರು(ಮಾ.16): ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್‌ ನೀಡಿದ್ದಾರೆ. ಅಕ್ರಮ ಆಸ್ತಿ ಹೊಂದಿರುವ  18 ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆದಿದೆ. ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ ಒಟ್ಟು 75 ಕಡೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, 100 ಅಧಿಕಾರಿಗಳು ಹಾಗೂ 300 ಸಿಬ್ಬಂದಿಯ ತಂಡ ಇದರಲ್ಲಿ ಭಾಗಿಯಾಗಿದೆ. 

ಕೈಗಾರಿಕೆ & ವಾಣಿಜ್ಯ ಇಲಾಖೆ, ಖನಿಜ ಭವನದ ಹೆಚ್ಚುವರಿ ನಿರ್ದೇಶಕ B.K ಶಿವಕುಮಾರ್, ರಸ್ತೆ ಸುರಕ್ಷತೆ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ  ಸಿ.ಜೆ ಜ್ಞಾನೇಂದ್ರ ಕುಮಾರ್, ನಗರ ಯೋಜನೆ, ಬಿಡಿಎನ ಉಪ ನಿರ್ದೇಶಕ ವಿ ರಾಕೇಶ್ ಕುಮಾರ್ ಇವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. 

ಯಾರು ಆ 18 ಭ್ರಷ್ಟ ಅಧಿಕಾರಿಗಳು?

1.ಜ್ಞಾನೇಂದ್ರಕುಮಾರ್. ಹೆಚ್ಚುವರಿ ಆಯುಕ್ತರು ಸಾರಿಗೆ, ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ,ಬೆಂಗಳೂರು.

2.ರಾಕೇಶ್ ಕುಮಾರ್, BDA, ಪಟ್ಟಣ ಯೋಜನೆ.

3 ರಮೇಶ ಕಣಕಟ್ಟೆ, ಆರ್.ಎಫ್.ಓ,ಸಾಮಾಜಿಕ ಅರಣ್ಯ,ಯಾದಗಿರಿ.

4.ಬಸವರಾಜ ಶೇಖರ ರೆಡ್ಡಿ ಪಾಟೀಲ್, ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ.

5.ಬಸವ ಕುಮಾರ್ ಎಸ್ ಅಣ್ಣಿಗೇರಿ, ಶಿರಸ್ತೇದಾರ್, ಡಿಸಿ ಕಛೇರಿ, ಗದಗ.

6..ಗಪಿನಾಥ್ ಸಾ ಎನ್ ಮಾಳಗಿ, ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ.

7.ಬಿ ಕೆ ಶಿವಕುಮಾರ್, ಹೆಚ್ಚುವರಿ ಡಿಟೆಕ್ಟರ್,ಇಂಡಸ್ಟ್ರಿವ್ಸ್ ಮತ್ತು ಕಾಮರ್ಸ್, ಬೆಂಗಳೂರು.

8.ಶಿವಾನಂದ್ ಪಿ ಶರಣಪ್ಪ ಖೇಡಗಿ,RFO, ಬಾದಾಮಿ.

9. ಮಂಜುನಾಥ್, ಸಹಾಯಕ ಆಯುಕ್ತ, ರಾಮನಗರ.

10.ಶ್ರೀನಿವಾಸ್, ಜನರಲ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ.

11.ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ.

12.ಕೃಷ್ಣನ್, ಎಇ.ಎಪಿಎಂಸಿ, ಹಾವೇರಿ.

13.ಚಲುವರಾಜ್, ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು.

14.ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಸುವಿವಿಭಾಗ.
 
15.ಬಾಲಕೃಷ್ಣ ಹೆಚ್ ಎನ್, ಪೊಲೀಸ್ ಇನ್ಸ್ ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ. ಮೈಸೂರು.

16.ಗವಿರಂಗಪ್ಪ, ಎಇಇ, ಪಿಡಬ್ಲ್ಯೂಡಿ, ಚಿಕ್ಕಮಂಗಳೂರು.

17.ಅಶೋಕ್ ರೆಡ್ಡಿ ಪಾಟೀಲ್, ಎಇಇ, ಕೃಷ್ಣ ಭಾಗ್ಯ ಜಲ ನಿಗಮ ಲಿ, ದೇವದುರ್ಗ ರಾಯಚೂರು.

18. ದಯಾ ಸುಂದರ್ ರಾಜು, AEE.KPTCL , ದಕ್ಷಿಣ ಕನ್ನಡ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌