ತೀರ್ಥಹಳ್ಳಿ ಭೀಮಸೇತು ಮಠದಲ್ಲಿ ತಿಗಳಾರಿ ಲಿಪಿಯ ಶಿಲಾ ಶಾಸನ ಪತ್ತೆ

Kannadaprabha News   | Kannada Prabha
Published : Jun 08, 2025, 11:55 PM IST
Inscription

ಸಾರಾಂಶ

ತಾಲೂಕಿನ ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠದಲ್ಲಿ ಅತ್ಯಂತ ಅಪರೂಪವಾದ ಶಿಲಾ ಶಾಸನವನ್ನು ಇತಿಹಾಸ ಸಂಶೋಧಕರ ಎಲ್‌.ಎಸ್‌. ರಾಘವೇಂದ್ರ ಅವರು ಪತ್ತೆ ಮಾಡಿದ್ದಾರೆ.

ತೀರ್ಥಹಳ್ಳಿ (ಜೂ.08): ತಾಲೂಕಿನ ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠದಲ್ಲಿ ಅತ್ಯಂತ ಅಪರೂಪವಾದ ಶಿಲಾ ಶಾಸನವನ್ನು ಇತಿಹಾಸ ಸಂಶೋಧಕರ ಎಲ್‌.ಎಸ್‌. ರಾಘವೇಂದ್ರ ಅವರು ಪತ್ತೆ ಮಾಡಿದ್ದಾರೆ. ಭೀಮಸೇತು ಮುನಿವೃಂದ ಮಠದಲ್ಲಿರುವ ತುಳಸಿಕಟ್ಟೆಯಲ್ಲಿ ಏಳು ಸಾಲಿನ ಒಂದು ಶಾಸನವಿದ್ದು, ಇದು ಅಪರೂಪದ ತಿಗಳಾರಿ ಲಿಪಿಯಲ್ಲಿದೆ .ಇದುವರೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಪತ್ತೆಯಾಗಿರುವ ಶಾಸನಗಳಲ್ಲಿ ಇದು ಮೊಟ್ಟಮೊದಲ ತಿಗಳಾರಿ ಲಿಪಿಯ ಶಾಸನವಾಗಿದೆ.

ಇದರಲ್ಲಿ ವಸುದೇವ ತೀರ್ಥರಿಂದಲೂ ವೃಂದಾವನ ಸೇವೆ ಅರ್ಪಿತ ಎಂದಿದೆ. ಅಂದರೆ ಈ ಮಠದ ಯತಿಗಳಾಗಿದ್ದ ಶ್ರೀ ವಸುದೇವ ತೀರ್ಥರು ಹಿಂದಿನ ಯತಿಗಳ ವೃಂದಾವನಗಳನ್ನು ನಿರ್ಮಿಸಿದ್ದಾರೆ. ಈಗಲೂ ಶ್ರೀ ಮಠದಲ್ಲಿ ಹಲವಾರು ಯತಿಗಳ ವೃಂದಾವನವನ್ನು ಕಾಣಬಹುದಾಗಿದೆ. ಲಿಪಿಯಾದಾರಿತವಾಗಿ ಇದು ಸುಮಾರು ಹದಿನಾರನೇ ಶತಮಾನದೆಂದು ಅಂದಾಜಿಸಬಹುದಾಗಿದೆ. ಇದೇ ತುಳಸಿ ವೃಂದಾವನದ ಇನ್ನೊಂದು ಭಾಗದಲ್ಲಿ ಕೆಳದಿ ಲಿಪಿಯ ಒಂದು ಶಾಸನವಿದೆ. ಇದು ಹತ್ತು ಸಾಲುಗಳನ್ನು ಒಳಗೊಂಡಿದೆ. ನಳ ಸಂವತ್ಸರದಲ್ಲಿ ರಾಮಚಂದ್ರನು ದೇವರ ಚರಣಗಳಿಗೆ ತೋಟ, ಕೆರೆ ಕಟ್ಟೆಗಳನ್ನು ದಾನವಾಗಿ ನೀಡಿದನೆಂದು ಬರೆಯಲಾಗಿದೆ. ಹೆಚ್ಚಿನ ವಿವರಗಳೇನು ಇದರಲ್ಲಿ ದಾಖಲಾಗಿಲ್ಲ.

ಈ ತುಳಸೀ ವೃಂದಾವನಕ್ಕೆ ನಿತ್ಯ ಪೂಜೆ ಸಮರ್ಪಿಸಿದರೆ ಅದು ಇಲ್ಲಿನ ಪೂರ್ವ ಯತಿವರೇಣ್ಯರಿಗೆ ಸಲ್ಲುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಈ ಶಾಸನಗಳ ಪತ್ತೆಮಾಡಿದ ಇತಿಹಾಸ ಸಂಶೋದಕ ಎಲ್.ಎಸ್.ರಾಘವೇಂದ್ರ ತೀರ್ಥಹಳ್ಳಿ ಇವರಿಗೆ ಶ್ರೀ ಮಠದ ಧನಂಜಯ ಶಿಕ್ಷಕರಾದ ಶ್ರೀನಿವಾಸ .ಬಿ ಇವರು ಮಾಹಿತಿ ನೀಡಿರುತ್ತಾರೆ. ಶಾಸನ ತಜ್ಞರಾದ ಪ್ರೊ.ಜಿ.ಕೆ.ದೇವರಾಜ ಸ್ವಾಮಿ ಹಾಗೂ ಅರ್ಪಿತಾ ಅವರು ಈ ಲಿಪಿಗಳ ಅಧ್ಯಯನದಲ್ಲಿ ಸಹಕಾರ ನೀಡಿರುತ್ತಾರೆ. ಒಟ್ಟಿನಲ್ಲಿ ಅಪರೂಪದ ಶಾಸನವೊಂದು ಬೆಳಕಿಗೆ ಬಂದಿರುವುದು ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯ್ಯಯ್ಯೋ.. ದೆವ್ವ ಹಿಡಿದಿದೆಯೆಂದು ಗೃಹಿಣಿಯನ್ನು ಬೇವಿನ ಕಟ್ಟಿಗೆಯಿಂದ ಥಳಿಸಿ ಕೊಲೆ!
ಹಳ್ಳಿ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗೆ ‘ಮಕ್ಕಳ ಮನೆ’: ಕಲ್ಯಾಣ ಕರ್ನಾಟಕದಲ್ಲಿ ಹೊಸ ಪ್ರಯೋಗ