ಚಿಕ್ಕಮಗಳೂರು ಜಿಲ್ಲೆಯಲ್ಲಿ 10 ವರ್ಷ 7 ತಿಂಗಳು ಸ್ಫೋಟಕ ಪತ್ತೆಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಶ್ವಾನ ಪೃಥ್ವಿ ನಿವೃತ್ತಿ ಹೊಂದಿದೆ. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ ಅವರು ಗೌರವಯುತವಾಗಿ ಬೀಳ್ಕೊಡುಗೆ ನೀಡಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.8): ಜಿಲ್ಲೆಯಲ್ಲಿ 10 ವರ್ಷ 7 ತಿಂಗಳು ಸ್ಫೋಟಕ ಪತ್ತೆಕಾರ್ಯದಲ್ಲಿ ತೊಡಗಿಸಿಕೊಂಡು ಇದೀಗ ನಿವೃತ್ತಿಹೊಂದಿದ ಶ್ವಾನ ಪೃಥ್ವಿ ವಯೋನಿವೃತ್ತಿ ಹೊಂದಿದ್ದು,ಇಂದು ಜಿಲ್ಲಾ ಪೊಲೀಸ್ ಕಚೇರಿ ಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ ಅವರು ಗೌರವಯುತವಾಗಿ ಬೀಳ್ಕೊಡುಗೆ ನೀಡಿದರು.
undefined
ಸ್ಪೋಟಕ ಪತ್ತೆ ಶ್ವಾನವಾಗಿ ಸೇರ್ಪಡೆ:
ಲ್ಯಾಬ್ರಡಾರ್ರಿಟೀವರ್ ತಳಿಗೆ ಸೇರಿದ ಪೃಥ್ವಿ 2014ರ ಜನವರಿ 2ರಂದು ಜನಿಸಿತು.ಮಾರ್ಚ್ 8ರಂದು ಕಾಫಿನಾಡಿಗೆ ಆಗಮಿಸಿದ ಈ ಶ್ವಾನ ಸ್ಫೋಟಕ ಪತ್ತೆಕಾರ್ಯಕ್ಕೆ ನಿಯೋಜನೆಗೊಂಡಿತು. ಇದರ ಹ್ಯಾಂಡ್ಲರ್ ಗಳಾಗಿ ಸಶಾಸ್ತ್ರ ಮೀಸಪು ಪಡೆಯ ವಿ.ದಿನೇಶ ಮತ್ತು ವಿ.ಕೆ.ಲೋಕೇಶಪ್ಪ ಅವರನ್ನು ನೇಮಕಗೊಳಿಸ ಲಾಯಿತು.ಬೆಂಗಳೂರಿನಲ್ಲಿರುವ ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಪಡೆದಿರುತ್ತದೆ.ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಬಂದೋಬಸ್ತ್ಗಳಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿ ಉನ್ನತ ಬಂದೋ ಬಸ್ತ್ ಗಳಲ್ಲಿ ವಿ.ಐ.ಪಿ. ಮತ್ತು ವಿ.ವಿ.ಐ.ಪಿ. ರವರುಗಳ ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಪೊಲೀಸ್ ಇಲಾಖೆಗೆ ಸಹಕರಿಸಿರುತ್ತದೆ.
ಮೆಗಾ ಫ್ಯಾಮಿಲಿಯ ಸ್ಟಾರ್ ನಟನ ಜೊತೆ ಕ್ರೇಜಿ ನಾಯಕಿ ಡೇಟಿಂಗ್?
ಈ ಶ್ವಾನಕ್ಕೆ ಒಟ್ಟು 301 ಕರೆಗಳು ಬಂದಿವೆ. ಅದರಲ್ಲಿ ಹೊರಜಿಲ್ಲೆಯಲ್ಲಿ 115 ಮತ್ತು ಸ್ಥಳೀಯವಾಗಿ 186 ಕರೆಗಳು ಬಂದಿರುತ್ತವೆ.ಎರಡು ಬಾರಿ ರಾಷ್ಟ್ರಪತಿಗಳ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದೆ. ಪ್ರಧಾನಮಂತ್ರಿಗಳಿಗೆ 9ಬಾರಿ, ರಾಜ್ಯಪಾಲರಿಗೆ 11, ಮುಖ್ಯಮಂತ್ರಿಗಳಿಗೆ 64, ಕೇಂದ್ರಸಚಿವರಿಗೆ 22, ಬೆಂಗಳೂರಿನ ಯಲಹಂಕದಲ್ಲಿ ನಡೆದ ಏರ್ಶೋ, ಉಡುಪಿಯ ಕೃಷ್ಣಜನ್ಮಾಷ್ಠಮಿಯ ವಿಟ್ಲಪಿಂಡಿ ಉತ್ಸವ, ತಿಪಟೂರಿನಲ್ಲಿ ನಡೆದ ಕೃಷಿ ಪ್ರದರ್ಶನ,ಕೇರಳ ಮತ್ತು ಮಂಗಳೂರು ಬಂದರು ಸಾಗರಕವಚ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದೆ.ಶ್ರವಣಬೆಳಗೊಳದ ಬಾಹುಬಲಿ ಮಸ್ತಾಭಿಷೇಕ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಲ್ ಕ್ರಿಕೆಟ್ ಪಂದ್ಯಾವಳಿ, ಆರ್.ಎಸ್.ಎಸ್.ಮುಖಂಡರು, ಪೇಜಾವರ ಶ್ರೀಗಳು, ಶಿವಮೊಗ್ಗ ಕಲ್ಲುಗಣಿಗಾರಿಕೆ ಜಿಲೆಟಿನ್ ಸ್ಫೋಟ, ಉತ್ತರ ಪ್ರದೇಶದ ಮುಖ್ಯಮಂತ್ರಿ, ಖೇಲೋ ಇಂಡಿಯಾ, ಬೆಂಗಳೂರಿನಲ್ಲಿ ನಡೆದ ಜಿ-20 ಸಮಾವೇಶ, ಸರ್ವೋಚ್ಚನ್ಯಾಯಾಲಯದ ನ್ಯಾಯಾಧೀಶರ ಬಂದೋಬಸ್ತ್ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿತ್ತು.
ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಕಳ್ಳರ ಸಹವಾಸದಿಂದ ಕಳ್ಳನಾದ ಆ್ಯಕ್ಟರ್ ಕಮ್ ಡೈರೆಕ್ಟರ್!
ಇಲಾಖೆ ಅಧಿಕಾರಿಗಳ ಪ್ರಶಂಸೆ:
ಬೆಂಗಳೂರು ಮುಖ್ಯಮಂತ್ರಿ ನಿವಾಸದ ಹುಸಿಬಾಂಬ್ಕರೆ, ಬೆಳಗಾವಿ ಅಧಿವೇಶನ, ಮೈಸೂರು ದಸರಾ, ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನ ಸೇರಿದಂತೆ ಸ್ಥಳೀಯವಾಗಿ ನಡೆದ ದತ್ತಮಾಲೆ, ದತ್ತಜಯಂತಿ, ನಕ್ಸಲ್ ಪ್ರದೇಶದಲ್ಲಿ ತಪಾಸಣೆ, ರಾಷ್ಟ್ರೀಯ ಹಬ್ಬ,ಜೈಲು ತಪಾಸಣೆ, ಗ್ರಾಮಾಂತರ ಮತ್ತು ಕೊಪ್ಪ ಠಾಣೆಯಲ್ಲಿ ನಡೆದ ಗನ್ಶಾಟ್, ಅಜ್ಜಂಪುರದಲ್ಲಿ ನಡೆದ ಸ್ಯಾಟ್ಲೈಟ್ ಫೋನ್, ಬೀರೂರು ರೈಲ್ವೆಹಳಿ ಹುಸಿಬಾಂಬ್ಕರೆ, ಚುನಾವಣಾ ಬಂದೋಬಸ್ತ್ನಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಇಲಾಖೆ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯು ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಹಾಗೂ ಪ್ರವಾಸಿ ತಾಣವಾಗಿದ್ದು, ಅದರಂತೆ ನಕ್ಸಲ್ ಕರ್ತವ್ಯಗಳಲ್ಲಿ ಭಾಗವಹಿಸಿರುತ್ತದೆ. 2019 ನೇ ಸಾಲಿನಲ್ಲಿ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಕಂಚಿನ ಪದಕವನ್ನು ಪಡೆದ ಹೆಗ್ಗಳಿಕೆ ಇದರದ್ದು, 2022ರಲ್ಲಿ ನಡೆದ ಚಿಕ್ಕಮಗಳೂರು ಹಬ್ಬದಲ್ಲಿ ಡಾಗ್ ಶೋನಲ್ಲಿ ಭಾಗವಹಿಸಿರುತ್ತದೆ. ಜಿಲ್ಲೆಯ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಕ್ಯಾಂಪ್ಗಳಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಶ್ವಾನಗಳ ಕರ್ತವ್ಯದ ಬಗ್ಗೆ ವಿವರಣೆ, ಡಾಗ್ ಶೋಗಳನ್ನು ನೀಡಿದೆ. ಇಂದು ಕರ್ತವ್ಯದಿಂದ ಬಿಡುಗಡೆಗೊಳ್ಳುತ್ತಿದ್ದು, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಇಲಾಖೆಯವರು ಹಾರೈಸಿದರು.