ರಾಜ್ಯ ಸರ್ಕಾರ ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡಿದವರ ಮೇಲೆ ಹಾಗೂ ಕಾಂಗ್ರೆಸ್‌ನೊಂದಿಗೆ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳದವರ ಮೇಲೆ ಕೇಸು ಹಾಕಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಹಾವೇರಿ (ನ.08): ರಾಜ್ಯ ಸರ್ಕಾರ ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡಿದ ನನ್ನ ಮೇಲೂ ಕೇಸು ಹಾಕಿದೆ. ಕಾಂಗ್ರೆಸ್ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದ ಬಿಜೆಪಿಯ ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ, ಸಿ.ಟಿ ರವಿ ಹಾಗೂ ಬಸವರಾಜ ಬೊಮ್ಮಾಯಿ ಮೇಲೂ ಕೇಸ್ ಹಾಕಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಹಿರೇಬೆಂಡಿಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಪ್ರಚಾರಕ್ಕೆ ಬಂದ ವೇಳೆ ಮಾತನಾಡಿದ ಅವರು, ವಕ್ಪ್ ವಿಚಾರದಲ್ಲಿ ನನ್ನ ಮೇಲೂ ಕೇಸ್ ಹಾಕಿದ್ದಾರೆ. ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ,ಸಿ.ಟಿ ರವಿ ಬೊಮ್ಮಾಯಿ ಮೇಲೂ ಕೇಸ್ ಹಾಕಿದ್ದಾರೆ. ಇಲ್ಲಿ ಅಡ್ಜಸ್ಟಮೆಂಟ್ ಇರಲಾರದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಲಾಗಿದೆ. ಡಿ.ಕೆ.ಶಿವಕುಮಾರ್ ಭಿಕ್ಷೆಯಿಂದ ಶಾಸಕ ಆದವರ ಮೇಲೆ ಒಂದು ಕೇಸ್ ಕೂಡ ಮಾಡಿಲ್ಲ. ಪೊಲೀಸರು ಅದನ್ನೇ ಮಾಡ್ತಿದಾರೆ. ಹೋಮ್ ಮಿನಿಸ್ಟರ್ ಡೈರೆಕ್ಷನ್ ಇದೆ. ನಾವು 5-6 ಮಂದಿ ಮೇಲೆ ಮಾತ್ರ ಕೇಸ್ ಹಾಕಿದಾರೆ. ಉಳಿದವರ ಮೇಲೆ ಆಗಿಲ್ಲ ಎಂದು ಕಿಡಿಕಾರಿದರು.
undefined
ಹಾವೇರಿ ರೈತನ ಆತ್ಮಹತ್ಯೆ ವಿಚಾರದಲ್ಲಿ ಸಾಲ ಹೆಚ್ಚಾಗಿತ್ತು ಅಂತ ಪೊಲೀಸರು ಸ್ಟೇಟಮೆಂಟ್ ಮಾಡಿದ್ದಾರೆ. 5 ಲಕ್ಷರೂ. ಪರಿಹಾರದ ಸಂಬಂಧ ರೈತರು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಇದೇ ಶಿವಾಮನಂದ ಪಾಟೀಲ ರೈತರು 2 ವರ್ಷ ಬರಗಾಲ ಬರಲಿ ಅಂತ ಬೇಡ್ಕೊತಾರೆ ಅಂತ ಹೇಳಿದ್ದರು. ಅದಕ್ಕೆ 5 ಕೋಟಿ ಕೊಡ್ತೀನಿ ಆತ್ಮಹತ್ಯೆ ಮಾಡಿಕೊ ಅಂದಿದ್ದೆ. ಹಣಕ್ಕಾಗಿ ರೈತರು ಏನು ಬೇಕಾದರೂ ಮಾಡ್ತಾರೆ ಅನ್ನೋ ಭಾವನೆ ಈ ಸರ್ಕಾರಕ್ಕೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಸಿವಿನಿಂದ ಅಳುತ್ತಿದ್ದ 5 ವರ್ಷದ ಮಗುವಿಗೆ ಊಟ ಕೊಡದೇ ಹೊಡೆದು ಕೊಂದ ಅಪ ...
ಇದು ಸಾಬರ ಸರ್ಕಾರ, ಹಿಂದೂಗಳದ್ದಲ್ಲ. ಆದಿಲ್ ಶಾಹಿ, ನವಾಬರು ಇದ್ದ ಕಡೆ ಬಹುತೇಕ ಇದೇ ಆಗಿದೆ. ಬೀದರ್ ನಲ್ಲಿ ನಿಜಾಮ್ ಇದ್ದಾಗ ಏ ಸಬ್ ತುಮಾರಾ ಅಂತ ಹೇಳಿದ್ದನಂತೆ. ಅದಕ್ಕೆ ಬೀದರ್‌ನಲ್ಲಿ ಹಿಂದೂಗಳ ಜಾಗ ಕೇಳುತ್ತಿದ್ದಾರೆ. ಅವರಿಗೆ ಕೋರ್ಟ್ ಇಲ್ಲ. ಡಿಸಿ, ಎಸಿ ಸಿವಿಲ್ ಯಾವ ಕೋರ್ಟ್ ಇಲ್ಲ. ಅವರದೇ ಟ್ರಿಬ್ಯುನಲ್ ಇದೆ, ಅಲ್ಲಿ ಜಡ್ಜ್ ಕೂಡಾ ಸಾಬನೇ. ಅವರೇ ನಿರ್ಣಯ ಮಾಡೋರು ಇದು ರೈತನದ್ದು ಹೌದು ಅಲ್ಲವೋ ಅಂತಾ.. ಇದು ಅಲ್ಲಾನ ಜಾಗ ಅಂತ ಜಮೀರ್ ಹೇಳ್ತಾನೆ. ಅಲ್ಲಾ ಯಾವಾಗ ಭಾರತಕ್ಕೆ ಬಂದ. ಚೆನ್ನಕೇಶವ, ಸೋಮೇಶ್ವರ ದೇವಾಲಯ ಅವರದಾ? ಕಾಗಿನೆಲೆ ಊರೇ ವಕ್ಪ್ ಮಾಡಿದಾರೆ. ಕಡಕೋಳ 3 ದೇವಸ್ಥಾನ ವಕ್ಪ್ ಅಂತಿದಾರೆ. ಇವರಿಗೆ ಅಲ್ಲಾ ಯಾವಾಗ ಕೊಟ್ಟ? ಎಂದು ಚಾಟಿ ಬೀಸಿದರು.
ನಮ್ಮ ನಾಡಿಗೆ ಬಂದರಿಗೆ ಸತ್ತವರ ಮಣ್ಣು ಮಾಡಲು, ನಮಾಜ ಮಾಡಲು ಜಾಗ ಕೊಟ್ಟರೆ ಇಡೀ ಸರ್ವೆ ನಂಬರ್ ನಮ್ಮದು ಅಂತಾರೆ. ಸಣ್ಣ ಕಲ್ಲು ಇದ್ದರೂ ಸುಣ್ಣ ಹೊಡೆದು ಆ ಜಾಗಕ್ಕೆ ಚಾದರ ಹಾಕಿ ನಮ್ಮದು ಅಂತಾರೆ. ಬೊಮ್ಮಾಯಿ ಕಾಲದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಸಿದ್ದರಾಮಯ್ಯ ಅರೆಹುಚ್ಚ, ಜಮೀರ್‌ಗೆ ಹೇಳಿದರು. ಅದಕ್ಕೆ ಜಿಲ್ಲೆಗಳಿಗೆ ಹೋಗಿ ಅಧಿಕಾರಿಗಳಿಗೆ ಜಮೀರ್ ಏಕ ವಚನದಲ್ಲಿ ಆರ್ಡರ್ ಮಾಡಿದ್ದಾನೆ. ಕಾಂಗ್ರೆಸ್ ಸಂಸದರ ಮನೆ ಮುಂದೆ ಧರಣಿ ಮಾಡಿ. ಕೇಂದ್ರದ ಅಧಿವೇಶನದಲ್ಲಿ ವಕ್ಪ್ ತಿದ್ದುಪಡಿ ಕಾನೂನಿಗೆ ವಿರೋದ ಮಾಡಿದರೆ ಓಡಾಡೋಕೆ ಬಿಡಲ್ಲ ಅಂತ ಕಾಂಗ್ರೆಸ್ ಎಂಪಿಗಳಿಗೆ ಹೇಳಿ ಎಂದು ಕರೆಕೊಟ್ಟರು.
ಇದನ್ನೂ ಓದಿ: ಗ್ಯಾರಂಟಿ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಸುಳ್ಳು ಜಾಹೀರಾತು: ಸಿದ್ದರಾಮಯ್ಯ ಗರಂ
ಯತ್ನಾಳ್ ಕ್ಷಮೆ ಕೇಳಲಿ ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಪುಗಸೆಟ್ಟೆ ಕ್ಷಮೆ ಕೇಳೋಕೆ ನನಗೇನು? ಬೇಕಾದರೆ ಕೇಸ್ ಹಾಕಲಿ 38 ಕೇಸ್ ಆಗುತ್ತವೆ. ಕೇಸ್ ಹಾಕು ಅಂತ ಹೇಳಿ ಅವರಿಗೆ. ಇಂಡಿ ತಾಲೂಕಿನಲ್ಲಿ ಒಂದು ಊರನ್ನೇ ವಕ್ಪ್ ಮಾಡಿದಾರೆ. ಈ ಬಗ್ಗೆ ಒಬ್ರು ಶಾಸಕನೂ ಮಾತಾಡಿಲ್ಲ. ಇವರು ಮುಸ್ಲೀಂ ಓಟ್ ನಿಂದ ಮಾತ್ರ ಶಾಸಕ ಆಗಿದಾರಾ? ಹಿಂದೂಗಳು ಓಟ್ ಹಾಕಿಲ್ಲವಾ? 9.5 ಲಕ್ಷ ಎಕರೆ ಅಂತ ಕ್ಲೇಮ್ ಮಾಡಿಕೊಳ್ತಿದ್ದಾರೆ. 2019 ರಲ್ಲಿ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದಾಗ 5 ಲಕ್ಷ 81 ಸಾವಿರ ಎಕರೆ ವಕ್ಫ್ ಭೂಮಿ ಎಂದಿದ್ದರು. ಈಗ ಮಠಗಳನ್ನು ಕೂಡಾ ವಕ್ಪ್ ಅಂತ ಮಾಡಿದಾರೆ. ನಾವು ವಕ್ಪ್ ಕಾಯಿದೆ ತಿದ್ದುಪಡಿ ಮಾಡೋದು ಗ್ಯಾರಂಟಿ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಲಾಗುತ್ತದೆ. ವಕ್ಪ್ ಅಂತ ಎಂದೂ ಹಾಕೋಕೆ ಬರದಂಗೆ ತಿದ್ದುಪಡಿ ಮಾಡ್ತೀವಿ. ವಕ್ಪ್ ರದ್ದು ಮಾಡಿ ಅಂತ ಕೇಂದ್ರಕ್ಕೆ ಮನವಿ ಮಾಡುವುದಾಗಿ ಮನವಿ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.