ಕಾಳಗಕ್ಕೆ ಹೆಸರುವಾಸಿಯಾಗಿರುವ, ಗೆಲುವಿನ ಸರದಾರ, ಜಯಸಿಂಹ ಎಂದೇ ಖ್ಯಾತಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ ತೆಗ್ಗಿ ಗ್ರಾಮದ ಟಗರು ಬರೋಬ್ಬರಿ 5 ಲಕ್ಷ ರೂಪಾಯಿಗೆ ಮಾರಾಟವಾಗಿ ಜನರ ಹುಬ್ಬೇರಿಸುವಂತೆ ಮಾಡಿದೆ.
ಬಾಗಲಕೋಟೆ (ಅ.20): ಕಾಳಗಕ್ಕೆ ಹೆಸರುವಾಸಿಯಾಗಿರುವ, ಗೆಲುವಿನ ಸರದಾರ, ಜಯಸಿಂಹ ಎಂದೇ ಖ್ಯಾತಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ ತೆಗ್ಗಿ ಗ್ರಾಮದ ಟಗರು ಬರೋಬ್ಬರಿ 5 ಲಕ್ಷ ರೂಪಾಯಿಗೆ ಮಾರಾಟವಾಗಿ ಜನರ ಹುಬ್ಬೇರಿಸುವಂತೆ ಮಾಡಿದೆ.
ಹೌದು ತೆಗ್ಗಿ ಗ್ರಾಮದ ಬಸವರಾಜ ಎಂಬುವವರಿಗೆ ಸೇರಿದ ಜಯಸಿಂಹ ಹೆಸರಿನ ಟಗರು, ಎರಡು ವರ್ಷಗಳ ಹಿಂದೆ 90 ಸಾವಿರ ರೂಪಾಯಿಗೆ ಖರೀದಿಸಿದ್ದರು. ಬಳಿಕ ಚೆನ್ನಾಗಿ ಬೆಳೆಸಿ ಕಾಳಗಕ್ಕೆ ಹುರಿಗೊಳಿಸಿದ್ದ ರೈತ. ಅಲ್ಲಿಂದ ಕಾಳಗದಲ್ಲಿ ತೊಡಗಿಕೊಂಡ ಟಗರು ಇದುವರೆಗೆ ಕಾಳಗದಲ್ಲಿ 1 ಬೈಕ್ ಸೇರಿ 6 ಲಕ್ಷ ರೂ. ನಗದು ಗೆದ್ದಿರೋ ಸಾಧನೆ ಮಾಡಿದೆ.
ಜಯಸಿಂಹ ಟಗರಿನ ಖ್ಯಾತಿ ಕೇಳಿದ ಬಳಿಕವೇ ಧಾರವಾಡದ ಆರ್‌ಎಕ್ಸ್‌ಐ ಟಗರು ಗ್ರೂಪ್‌ನವರು ಖರೀದಿಸಲು ಮುಂದಾಗಿದ್ದರು. ಬರೊಬ್ಬರು 5 ಲಕ್ಷ ರೂಪಾಯಿಗೆ ಖರೀದಿಸಿದಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ 7ನೇ ಕ್ರಸ್ಟ್ ಗೇಟ್ ಸಮಸ್ಯೆ: ದುರಸ್ಥಿಗೆ ಮುಂದಾದ ಅಧಿಕಾರಿಗಳು
ಲವ್ಲಿ ಬಾಯ್ ಟಗರು 8 ಲಕ್ಷಕ್ಕೆ ಮಾರಾಟವಾಗಿತ್ತು:
ಈ ಹಿಂದೆ ಗೆಲುವಿನ ಸರದಾರನಾಗಿ ಲವ್ಲಿ ಬಾಯ್ ಹೆಸರಿನ ಟಗರು ಬರೋಬ್ಬರಿಗೆ 8 ಲಕ್ಷ ಕ್ಕೆ ಖರೀದಿಸಲು ಕ್ಯೂ ನಿಂತಿದ್ದರೂ ಮಾರಾಟ ಮಾಡಲು ಅದರ ಮಾಲೀಕ ಒಪ್ಪಿರಲಿಲ್ಲ. ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ಎಚ್‌ಎನ್ ಸೇಬಣ್ಣವರು ಸಾಕಿದ್ದರು. ದುರಾದೃಷ್ಟವಶಾತ್ ಹೃದಯಾಘಾತದಿಂದ ಮೃತಪಟ್ಟಿತ್ತು. ಲವ್ಲಿ ಬಾಯ್ ಟಗರು ಮೃತಪಟ್ಟ ಬಳಿಕ ಅದರ ಸ್ಥಾನವನ್ನು ತುಂಬಿದ್ದ ಜಯಸಿಂಹ. ಇದೀಗ ಧಾರವಾಡ ಟಗರು ಗ್ರೂಪ್ ಗೆ ದಾಖಲೆ ಬೆಲೆಗೆ ಮಾರಾಟವಾಗಿದೆ.