ಕೊರಟಗೆರೆಯಲ್ಲಿ ವಾಲ್ಮೀಕಿ ಮೂರ್ತಿ ಇಟ್ಟುಬಿಟ್ಟರು. ಯಾಕಪ್ಪ ಹಾಗೆ ಮಾಡೋಕೆ ಹೋದ್ರಿ? ಏನೇ ಕೆಲಸ ಮಾಡ್ಬೇಕಾದ್ರೂ ವ್ಯವಸ್ಥಿತವಾಗಿ ಎಲ್ಲರೂ ಸೇರಿಕೊಂಡು ಮಾಡಬೇಕು. ಕದ್ದು ಇಡುವುದು ಯಾಕೆ? ಎಂದು ವಾಲ್ಮೀಕಿ ಮೂರ್ತಿ ತೆಗೆದ ವಿಚಾರಕ್ಕೆ ಸಚಿವ ಕೆಎನ್ ರಾಜಣ್ಣ ಗರಂ ಆದ ಘಟನೆ ನಡೆಯಿತು.
ತುಮಕೂರು (ಅ.20): ಕೊರಟಗೆರೆಯಲ್ಲಿ ವಾಲ್ಮೀಕಿ ಮೂರ್ತಿ ಇಟ್ಟುಬಿಟ್ಟರು. ಯಾಕಪ್ಪ ಹಾಗೆ ಮಾಡೋಕೆ ಹೋದ್ರಿ? ಏನೇ ಕೆಲಸ ಮಾಡ್ಬೇಕಾದ್ರೂ ವ್ಯವಸ್ಥಿತವಾಗಿ ಎಲ್ಲರೂ ಸೇರಿಕೊಂಡು ಮಾಡಬೇಕು. ಕದ್ದು ಇಡುವುದು ಯಾಕೆ? ಎಂದು ವಾಲ್ಮೀಕಿ ಮೂರ್ತಿ ತೆಗೆದ ವಿಚಾರಕ್ಕೆ ಸಚಿವ ಕೆಎನ್ ರಾಜಣ್ಣ ಗರಂ ಆದ ಘಟನೆ ನಡೆಯಿತು.
ಇಂದು ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ ಸಚಿವರು, ಅವನ್ಯಾರೋ ಮೂರ್ಖ ಅಧಿಕಾರಿ ರಾತ್ರೊರಾತ್ರಿ ವಾಲ್ಮೀಕಿ ಮೂರ್ತಿ ತೆಗೆದುಬಿಟ್ಟಿದ್ದಾನೆ. ಜನರಿಗೆ ಮನವೊಲಿಸಿ ಇನ್ನೊಂದು ಕಡೆ ಇಡಬಹುದಾಗಿತ್ತು. ನೀವು ಮಾಡೋದು ತಪ್ಪು, ಅವರು ಮಾಡೋದೂ ತಪ್ಪು. ಯಾರೂ ಕಾನೂನು ಕೈಗೆ ಎತ್ತಿಕೊಳ್ಳಬಾರದು ಎಂದರು.
ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ್ರೆ ಸಚಿವ ಸ್ಥಾನ ಬಿಡಲು ಸಿದ್ಧ: ಕೆಎನ್ ರಾಜಣ್ಣ
ಇನ್ನು ಮೂಡ ಹಗರಣ ವಿಚಾರವಾಗಿ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಏನು ಸೈಟ್ ಬೇಕು ಅಂತಾ ಅರ್ಜಿ ಹಾಕಿದ್ರ? ಯಾರಿಗಾದ್ರೂ ಫೋನ್ ಮಾಡಿದ್ರ? ಸಿಎಂ ಸಿದ್ದರಾಮಯ್ಯರಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಡವರ ಯೋಚಿಸುವವರು, ಬಡವರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದವರು, ಹಸಿವಿನಿಂದ ಯಾರೂ ಮಲಗಬಾರದು ಅಂತಾ ಯೋಜನೆ ತಂದರು. ಸಿದ್ಸರಾಮಯ್ಯ ಏನು ಕುರುಬರಿಗೆ ಮಾತ್ರ ಯೋಜನೆ ಜಾರಿ ಮಾಡಿದ್ರ? ಎಲ್ಲಾ ಜಾತಿಯ ಬಡವರು ನೆಮ್ಮದಿಯ ಜೀವನ ಮಾಡ್ಲಿ ಅಂತ ಅದನ್ನ ಮಾಡಿದ್ರು. ಅಂತಹ ಜನಪರ ನಾಯಕನಿಗೆ ವಿರೋಧಿಗಳ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.