ಐದು ರೂಪಾಯಿ ಚಿಲ್ಲರೆ ಕೊಡುವ ವಿಚಾರಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಆರೋಪದಲ್ಲಿ ಬಿಎಂಟಿಸಿ ಕಾರ್ಯನಿರ್ವಾಹಕನನ್ನು ಅಮಾನತ್ತು ಮಾಡಿರುವ ಘಟನೆ ವಿರೋಧಿಸಿ ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಅಂಡ್ ಟೀಂ ಬಿಎಂಟಿಸಿ ಕಚೇರಿಗೆ ನುಗ್ಗಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಬೆಂಗಳೂರು (ಆ.12): ಐದು ರೂಪಾಯಿ ಚಿಲ್ಲರೆ ಕೊಡುವ ವಿಚಾರಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಆರೋಪದಲ್ಲಿ ಬಿಎಂಟಿಸಿ ಕಾರ್ಯನಿರ್ವಾಹಕನನ್ನು ಅಮಾನತ್ತು ಮಾಡಿರುವ ಘಟನೆ ವಿರೋಧಿಸಿ ಕನ್ನಡ ಸಂಘಟನೆಯ ಕಾರ್ಯಕರ್ತರು ಬಿಎಂಟಿಸಿ ಕಚೇರಿಗೆ ನುಗ್ಗಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಆ.6 ರಂದು ನಡೆದಿದ್ದ ಘಟನೆ.ಕೆ.ಆರ್ ಪುರಂ ರೈಲ್ವೆ ನಿಲ್ದಾಣದಿಂದ ಮಾರತ್ತಹಳ್ಳಿ ಕಲಾಮಂದಿರಕ್ಕೆ ಟಿಕೆಟ್ ತೆಗೆದುಕೊಂಡಿದ್ದ ಪ್ರಯಾಣಿಕ ಅಭಿನವ್. ಟಿಕೆಟ್ ದರ 15 ರೂ. ಇತ್ತು. ಆತ 20 ರೂ. ಕೊಟ್ಟಿದ್ದ ಬಾಕಿ 5 ರೂ. ವಾಪಸ್ ಕೇಳಿದ್ದಕ್ಕೆ ನನ್ನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದ ಪ್ರಯಾಣಿಕ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿರುವ ಹಿನ್ನೆಲೆ ಪ್ರಯಾಣಿಕರ ಮೇಲೆ ಯಾವುದೇ ತರಹ ದೌರ್ಜನ್ಯ, ಅಸಭ್ಯವಾಗಿ ವರ್ತಿಸುವಂತಿಲ್ಲ ಹಾಗೇನಾದರೂ ವರ್ತಿಸಿದಲ್ಲಿ ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸುತ್ತಿರೋ ಬಿಎಂಟಿಸಿ. ಅದರಂತೆಯೇ ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಕಂಡಕ್ಟರ್‌ನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿತ್ತು. ಅಮಾನತ್ತು ಬಳಿಕ ಕನ್ನಡ ಸಂಘಟನೆಯ ಗಮನಕ್ಕೆ ಬಿಎಂಟಿಸಿ ಚಾಲಕ ತಂದಿದ್ದ ಎಂದು ವರದಿಯಾಗಿದೆ.
ಬೆಂಗಳೂರು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ: ದಿನಕ್ಕೆ 3 ಪಾಳಿ ಕೆಲಸ ಮಾಡಿಸುತ್ತಿದ್ದರಾ ಮೇಲಧಿಕಾರಿಗಳು?
ಶಾಂತಿನಗರದಲ್ಲಿರುವ ಮುಖ್ಯ ಸಂಚಾರ ವ್ಯವಸ್ಥಾಪಕ ಕಚೇರಿಗೆ ನುಗ್ಗಿದ ರೂಪೇಶ್ ರಾಜಣ್ಣ ತಂಡ. ಬಿಎಂಟಿಸಿ ಕಾರ್ಯನಿರ್ವಾಹಕನನ್ನು ಅಮಾನತು ಮಾಡಿರೋದನ್ನು ಖಂಡಿಸಿದ್ದಾರೆ. ಬಿಎಂಟಿಸಿ ಮುಖ್ಯಸಂಚಾರ ವ್ಯವಸ್ಥಾಪಕ(ಕಾರ್ಯಾಚರಣೆ) ಪ್ರಭಾಕರ್ ಅವರ ಕಚೇರಿಗೆ ಹೋಗಿ ಅಮಾನತು ಮಾಡದಂತೆ ಮನವಿ ಸಲ್ಲಿಸಿದ್ದರು. ಕನ್ನಡಿಗ ಬಿಎಂಟಿಸಿ ಚಾಲಕ ತಪ್ಪು ಮಾಡಿಲ್ಲ, ಮತ್ತೊಮ್ಮೆ ಘಟನೆ ಬಗ್ಗೆ ಪರಿಶೀಲಿಸಬೇಕು. ಅಮಾನತು ಮಾಡಿರೋ ಆದೇಶವನ್ನು ಹಿಂಪಡೆಯಿರಿ ಎಂದು ರೂಪೇಶ್ ರಾಜಣ್ಣ ಟೀಂ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ಬಿಎಂಟಿಸಿ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ನಡುವೆ ವಾಗ್ವಾದ ನಡೆದಿದೆ. ಪ್ರಯಾಣಿಕರಿಗೆ ಕಾರ್ಯನಿರ್ವಾಹಕರಾಗಲಿ ಸಿಬ್ಬಂದಿ ಹಲ್ಲೆ ನಡೆಸುವಂತಿಲ್ಲ. ಕಂಡಕ್ಟರ್ ಹಲ್ಲೆ ನಡೆಸಿರುವ ಬಗ್ಗೆ ಪ್ರಯಾಣಿಕ ಟ್ವೀಟರ್‌ನಲ್ಲಿ ಆರೋಪಿಸಿದ್ದಾರೆ ಎಂದ ಬಿಎಂಟಿಸಿ ಅಧಿಕಾರಿ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ರೂಪೇಶ್ ರಾಜಣ್ಣ, 'ಟ್ವೀಟ್ ಮಾಡಿರೋದನ್ನೇ ನಂಬಿಕೊಂಡು ಅಮಾನತ್ತು ಮಾಡ್ತೀರಾ? ಎಂದು ಗಲಾಟೆ ನಡೆಸಿದ್ದಾರೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಕಚೇರಿಯ ಬೇರೆ ಬೇರೆ ಕ್ಯಾಬಿನ್‌ಗಳಿಂದ, ಮುಖ್ಯಸಂಚಾರ ವ್ಯವಸ್ಥಾಪಕ ಕ್ಯಾಬಿನ್‌ಗೆ ಸಿಬ್ಬಂಧಿಗಳು ಓಡಿ ಬಂದಿದ್ದಾರೆ ಎನ್ನಲಾಗಿದೆ.