ಅಮ್ಮನ ಸ್ಮಾರ್ಟ್‌ಫೋನ್‌ನಲ್ಲಿ ಲೋಕೆಷನ್ ಚೆಕ್ ಮಾಡಿ ಮನೆ ಬಿಟ್ಟು ಹೋದ ಅಪ್ರಾಪ್ತ ಬಾಲಕ!

By Ravi Janekal  |  First Published Jun 6, 2023, 7:47 AM IST

ಅಮ್ಮನ ಸ್ಮಾರ್ಟ್‌ಫೋನ್‌ನಲ್ಲಿ  ಲೋಕೆಷನ್ ಚೆಕ್ ಮಾಡಿ ಅಪ್ರಾಪ್ತ ಬಾಲಕನೋರ್ವ ಮನೆಬಿಟ್ಟು ಹೋಗಿರುವ ಘಟನೆ ಬೆಂಗಳೂರಿನ ಆರ್‌ಟಿ ನಗರದಲ್ಲಿ ನಡೆದಿದೆ.


ಬೆಂಗಳೂರು (ಜೂ.6) : ಅಮ್ಮನ ಸ್ಮಾರ್ಟ್‌ಫೋನ್‌ನಲ್ಲಿ  ಲೋಕೆಷನ್ ಚೆಕ್ ಮಾಡಿ ಅಪ್ರಾಪ್ತ ಬಾಲಕನೋರ್ವ ಮನೆಬಿಟ್ಟು ಹೋಗಿರುವ ಘಟನೆ ಬೆಂಗಳೂರಿನ ಆರ್‌ಟಿ ನಗರದಲ್ಲಿ ನಡೆದಿದೆ.

9ನೇ ತರಗತಿ ಓದುತ್ತಿರುವ ಬಾಲಕ ಆದಿತ್ಯಾ. ಮನೆಯಿಂದ ಹೊರಡುವ ಮುನ್ನ ಬಾಲಕ ಮೈಸೂರು, ಮಲ್ಪೆ ಸ್ಥಳಗಳ ಲೋಕೆಷನ್ ಚೆಕ್ ಮಾಡಿರುವ ಬಾಲಕ. ಬಳಿಕ ಮನೆಯಲ್ಲಿದ್ದ ಬಟ್ಟೆಗಳನ್ನ ತೆಗೆದುಕೊಂಡು ಹೋಗಿರುವ ಬಾಲಕ. ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ತಿಂಗಳು 26 ರಂದು ಕಟ್ಟಿಂಗ್ ಶಾಪ್ ಗೆ ಹೇರ್ ಕಟ್ ಮಾಡಿಸಲು ಹೋಗುತ್ತೇನೆಂದು ಮನೆ ಬಿಟ್ಟಿರುವ ಆದಿತ್ಯಾ. ಇತ್ತ ಮಗ ಮಿಸ್ಸಿಂಗ್ ಆಗಿದ್ದಕ್ಕೆ ಆತಂಕಗೊಂಡ ಪೋಷಕರು ಎಲ್ಲ ಕಡೆ ಹುಡುಕಾಡಿದ್ದಾರೆ. ಎಲ್ಲೂ ಸಿಗದಿದ್ದಾಗ ಜ್ಯೋತಿಷ್ಯದ ಮೊರೆ  ಹೋಗಿರುವ ಪೋಷಕರು.

Tap to resize

Latest Videos

 

ಮದ್ವೆ ದಿನ ಓಡಿಹೋದ ವಧು, ಆಕೆಗಾಗಿ ಮಂಟಪದಲ್ಲೇ 13 ದಿನ ಕಾದು ಕುಳಿತ ವರ!

ಜ್ಯೋತಿಷ್ಯದವರು ಹೇಳುವ ಪ್ರಕಾರ ಬಾಲಕ ಈಗ ದಕ್ಷಿಣ ಕನ್ನಡ ಭಾಗದಲ್ಲಿದ್ದಾನೆ. ಜೋತಿಷ್ಯದವರ ಮಾತು ಕೇಳಿ ಕರಾವಳಿ ಭಾಗಕ್ಕೆ ಮಗನನ್ನ ಹುಡಕಲು ಹೊರಟ ಪೋಷಕರು. ದಕ್ಷಿಣ ಕನ್ನಡ ಉಡುಪಿ ಭಾಗದಲ್ಲಿ ಹುಡುಕಾಟ ನಡೆಸುತ್ತಿರುವ ಪೋಷಕರು. ಆರ್ ಟಿ ನಗರ ಸೇರಿದಂತೆ ಮಲ್ಪೆ ಭಾಗದ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವ ಪೋಷಕರು. 

ದಕ್ಷಿಣಕನ್ನಡ ಭಾಗದಲ್ಲಿ ಇಲ್ಲ, ಸದ್ಯ ಬಾಲಕ ಮೈಸೂರು ಭಾಗದಲ್ಲಿ ಇದ್ದಾನೆಂದು  ಪೊಲೀಸರಿಗೆ ಮಾಹಿತಿ. ಮೈಸೂರು ಭಾಗದಲ್ಲಿ ಬಾಲಕನಿಗಾಗಿ ಹುಡುಕುತ್ತಿದ್ದಾರೆ ಪೊಲೀಸರು.  ಪೊಲೀಸರ ಜೊತೆಗೆ ಪೋಷಕರು ಹಗಲು ರಾತ್ರಿ ಹುಡುಕಾಟ ನಡೆಸುತ್ತಿರುವ ಪೋಷಕರು. ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ.

click me!