
ಕೊಳ್ಳೇಗಾಲ (ಆ.31): ಕುರುಕಲು ತಿಂಡಿ ಪ್ರಿಯರನ್ನು ನೋಡಿರುತ್ತೀರಿ, ಹೆಚ್ಚು ತಿನ್ನುವ ತಿಂಡಿಪೋತರನ್ನು ಕಂಡಿರುತ್ತೀರಿ. ಆದರೆ, ಇಲ್ಲೋರ್ವ ಹಣ್ಣಿನ ರಸದಂತೆ ಎಂಜಿನ್ ಆಯಿಲ್ ಕುಡಿದು ಎಲ್ಲರನ್ನೂ ಅಚ್ಚರಿಗೆ ಒಳಗಾಗುವಂತೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಮೈಸೂರಿನ ಕುಮಾರ್ ಎಂಬ ಅಯ್ಯಪ್ಪಸ್ವಾಮಿ ಭಕ್ತ ಕೊಳ್ಳೇಗಾಲದ ಮೂಲಕ ಶಬರಿಮಲೆ ಯಾತ್ರೆಗೆ ತೆರಳುವಾಗ ಕೊಳ್ಳೇಗಾಲದಲ್ಲಿ ಹಣ್ಣಿನ ರಸದಂತೆ ಎಂಜಿನ್ ಆಯಿಲ್ ಅನ್ನು ಗಟಗಟನೇ ಕುಡಿದು ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: Pregnant without Intercourse: ಲೈಂಗಿಕ ಕ್ರಿಯೆ ನಡೆಸದಿದ್ರೂ ಗರ್ಭಿಣಿಯಾದ ಯುವತಿ! ವೈದ್ಯಲೋಕಕ್ಕೆ ಸವಾಲು: ಆಗಿದ್ದೇನು ನೋಡಿ
ಈ ಬಗ್ಗೆ ಕುಮಾರ್ ಮಾತನಾಡಿ, ಕಳೆದ 29 ವರ್ಷದಿಂದ ಇದನ್ನೇ ಕುಡಿದು ಜೀವಿಸುತ್ತಿದ್ದೇನೆ. ಊಟ-ತಿಂಡಿ ಯಾವುದೂ ಸೇರುವುದಿಲ್ಲ. ಕುಡಿದರೇ ಟೀ-ಕಾಫಿ ಹಾಗೂ ಎಂಜಿನ್ ಆಯಿಲ್ ಅಷ್ಟೇ. ಕಾಪಾಡಲು ದೇವರು ಇದ್ದಾಗ ಯಾಕೆ ಚಿಂತೆ. ಕಳೆದ 29 ವರ್ಷದಿಂದ ಇದೇ ನನಗೆ ಆಹಾರ ಎಂದರು. ಕುಮಾರ್ ಅವರನ್ನು ಕಂಡ ಸ್ಥಳೀಯರು ಅಚ್ಚರಿಗೆ ಒಳಗಾದರು.
ವೈದ್ಯಕೀಯ ಲೋಕಕ್ಕೆ ಅಚ್ಚರಿ ಎಂಬಂತೆ ವಿಷಕಾರಿ ವಸ್ತುವಾದ ಎಂಜಿನ್ ಆಯಿಲ್ ಅನ್ನು ಕುಡಿಯುತ್ತಿರುವ ಈ ವ್ಯಕ್ತಿ ನಿಜಕ್ಕೂ ವಿಸ್ಮಯವೇ ಸರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ