ಪ್ರಿವೆಡ್ಡಿಂಗ್ ಶೂಟ್ ವೇಳೆ ಅಯಾತಪ್ಪಿ ಬಿದ್ದ ಮಾವುತ; ಆನೆ ಭಯಕ್ಕೆ ಮದುವೆ ಜೋಡಿ ಓಟ! ಆಗಿದ್ದೇನು?

By Ravi Janekal  |  First Published Dec 2, 2023, 10:16 AM IST

ಪ್ರಿವೆಡ್ಡಿಂಗ್ ಶೂಟಿಂಗ್ ವೇಳೆ ಮಾವುತ ಅಯಾತಪ್ಪಿ ಆನೆ ಮೇಲಿಂದ ಬಿದ್ದ ಘಟನೆ ಶಿವಮೊಗ್ಗ ತಾಲೂಕಿನ ಸಕ್ರೆಬೈಲ್ ಆನೆ ಬಿಡಾರದಲ್ಲಿ ನಡೆದಿದೆ.


ಶಿವಮೊಗ್ಗ (ಡಿ.2): ಪ್ರಿವೆಡ್ಡಿಂಗ್ ಶೂಟಿಂಗ್ ವೇಳೆ ಮಾವುತ ಅಯಾತಪ್ಪಿ ಆನೆ ಮೇಲಿಂದ ಬಿದ್ದ ಘಟನೆ ಶಿವಮೊಗ್ಗ ತಾಲೂಕಿನ ಸಕ್ರೆಬೈಲ್ ಆನೆ ಬಿಡಾರದಲ್ಲಿ ನಡೆದಿದೆ.

ಮಾವುತ ಶಂಷುದ್ದೀನ್ ಕೆಳಕ್ಕೆ ಬಿದ್ದು ಪೆಟ್ಟು. ಮದುವೆಗೆ ಮೊದಲು ಭಾವಿ ವಧು ವರರ  ಶೂಟಿಂಗ್ ಮಾಡಿಸುವುದಕ್ಕೆ ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದಿದ್ದ ಜೋಡಿ. ಕುಂತಿ ಎಂಬ ಆನೆ ಮೇಲೆ ಕುಳಿತಿದ್ದ ಮಾವುತ ಶಂಷುದ್ದೀನ್. ಕುಂತಿ ಜನ್ಮ ನೀಡಿದ್ದ ಆನೆ ಮರಿ ಹಿಂದೆ ನಿಂತಿತ್ತು. ಇದಕ್ಕಿದ್ದಂತೆ ಮರಿ ಆನೆ ತಾಯಿಯತ್ತ ಓಡಿ ಬಂದಾಗ ವಿಚಲಿತಗೊಂಡ ಕುಂತಿ ಆನೆ. ಈ ವೇಳೆ ಮೇಲೆ ಕುಳಿತಿದ್ದ ಶಂಷುದ್ದೀನ್ ಆಯಾತಪ್ಪಿ ದೊಪ್ಪೆಂದು ಕೆಳಕ್ಕೆ ಬಿದ್ದಿದ್ದಾನೆ. ಮಾವುತ ಕೆಳಕ್ಕೆ ಬಿಳುತ್ತಿದ್ದಂತೆ ಫೋಟೊ ಶೂಟಿಂಗ್‌ನಲ್ಲಿದ್ದ ಯುವಕ ಯುವತಿ ಗಾಬರಿಯಿಂದ ಓಡಿಹೋಗಿದ್ದಾರೆ.. ಈ ಘಟನೆಯಿಂದ ಆನೆ ಬಿಡಾರದಲ್ಲಿ ಕೆಲವೊತ್ತು ಗೊಂದಲ, ಭಯದ ವಾತಾವರಣ ನಿರ್ಮಾಣವಾಗಿತ್ತು.

Tap to resize

Latest Videos

ಸಕ್ರೆಬೈಲು: ಭಾನುಮತಿ ಆನೆಬಾಲಕ್ಕೆ ಮಚ್ಚಿನೇಟು; ಇಬ್ಬರು ಸಿಬ್ಬಂದಿ ಸಸ್ಪೆಂಡ್

ಸದ್ಯ ಗಾಯಾಳು ಶಂಷುದ್ದೀನ್  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು

click me!