ಭಕ್ತರ ಪಾಲಿನ ಕಲ್ಪವೃಕ್ಷ, ಬೇಡಿದ್ದು ಕೊಡುವ ಕಾಮದೇನು ತುಂಗಾ ತೀರದಲ್ಲಿ ನಲೆಸಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ನಿನ್ನೆ ನಡೆದ ಎಣಿಕೆ ಕಾರ್ಯದಲ್ಲಿ 31 ದಿನಗಳಲ್ಲಿ 2 ಕೋಟಿ 56ಲಕ್ಷ 40 ಸಾವಿರ ರೂ. ಬಂದಿದೆ. ಕಳೆದ 8 ತಿಂಗಳಲ್ಲಿಯೇ ಇದು ಅತೀ ಕಡಿಮೆ ಹುಂಡಿ ಕಾಣಿಕೆ ಸಂಗ್ರಹವಾಗಿದೆ.
ರಾಯಚೂರು (ಡಿ.2): ಭಕ್ತರ ಪಾಲಿನ ಕಲ್ಪವೃಕ್ಷ, ಬೇಡಿದ್ದು ಕೊಡುವ ಕಾಮದೇನು ತುಂಗಾ ತೀರದಲ್ಲಿ ನಲೆಸಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ನಿನ್ನೆ ನಡೆದ ಎಣಿಕೆ ಕಾರ್ಯದಲ್ಲಿ 31 ದಿನಗಳಲ್ಲಿ 2 ಕೋಟಿ 56ಲಕ್ಷ 40 ಸಾವಿರ ರೂ. ಬಂದಿದೆ. ಕಳೆದ 8 ತಿಂಗಳಲ್ಲಿಯೇ ಇದು ಅತೀ ಕಡಿಮೆ ಹುಂಡಿ ಕಾಣಿಕೆ ಸಂಗ್ರಹವಾಗಿದೆ.
ಏಪ್ರಿಲ್ ತಿಂಗಳಲ್ಲಿ 29 ದಿನಗಳಲ್ಲಿಯೇ 2 ಕೋಟಿ 67ಲಕ್ಷ 76 ಸಾವಿರದ 840 ರೂ. ಜಮಾವಾಗಿತ್ತು. ಮೇ ತಿಂಗಳಲ್ಲಿ 34 ದಿನಗಳಲ್ಲಿ 3ಕೋಟಿ 46 ಲಕ್ಷ 20 ಸಾವಿರದ 423ರೂ. ಸಂಗ್ರಹವಾಗಿತ್ತು. ಜೂನ್ ತಿಂಗಳಲ್ಲಿ 27 ದಿನಗಳಲ್ಲಿ 2 ಕೋಟಿ 84 ಲಕ್ಷ 12 ಸಾವಿರದ 635 ರೂ. ಬಂದಿದ್ದ ಕಾಣಿಕೆ. ಜುಲೈನಲ್ಲಿ 34 ದಿನಗಳಲ್ಲಿ 3ಕೋಟಿ 69 ಲಕ್ಷ 62 ಸಾವಿರ 469 ರೂ. ಸಂಗ್ರಹ, ಆಗಷ್ಟ ತಿಂಗಳಲ್ಲಿ 22 ದಿನಗಳಲ್ಲಿಯೇ 2ಕೋಟಿ 35 ಲಕ್ಷ 62 ಸಾವಿರ 719 ರೂ. ಜಮಾ ಆಗಿದ್ದರೆ, ಸೆಪ್ಟೆಂಬರ್ ತಿಂಗಳಲ್ಲಿ 34 ದಿನಗಳಲ್ಲಿ 3 ಕೋಟಿ 74 ಲಕ್ಷ 85 ಸಾವಿರದ 859 ರೂ. ಕಾಣಿಕೆ ಸಂಗ್ರಹವಾಗಿದೆ. ಅಕ್ಟೋಬರ್ ನಲ್ಲಿ ಎಣಿಕೆ ಸಂಗ್ರಹದಲ್ಲಿ 35 ದಿನಗಳಲ್ಲಿ 3 ಕೋಟಿ 62ಲಕ್ಷ 27 ಸಾವಿರದ 720 ರೂ. ಕಾಣಿಕೆ ಹರಿದು ಬಂದಿದೆ. ಆದರೆ ಈ ಬಾರಿ ನವೆಂಬರ್ ತಿಂಗಳಲ್ಲಿ 31ದಿನಗಳಲ್ಲಿ 2 ಕೋಟಿ 56 ಲಕ್ಷ 40 ಸಾವಿರ ರೂ. ಸಂಗ್ರಹವಾಗಿದೆ. ಇದು ಎಂಟು ತಿಂಗಳ ಅವಧಿಯಲ್ಲಿ ಅತಿ ಕಡಿಮೆಯಾಗಿದೆ.(
ಮಂತ್ರಾಲಯ ಮಠದಿಂದ ಮಾಹಿತಿ)
ಮಂತ್ರಾಲಯದಲ್ಲಿ ಕಳೆಗಟ್ಟಿದ ಮಧ್ಯಾರಾಧನೆ ಸಂಭ್ರಮ: ಆರಾಧನಾ ಮಹೋತ್ಸವಕ್ಕೆ ಹರಿದು ಬರ್ತಿದೆ ಭಕ್ತಸಾಗರ
ರಾಜ್ಯಾದ್ಯಂತ ಬರಗಾಲದಿಂದ ಭಕ್ತರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ತೀವ್ರ ಬರ ಆವರಿಸಿದೆ. ರೈತರು ಬೆಳೆ ನಷ್ಟವಾಗಿ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಈ ಬಾರಿ ಮಂತ್ರಾಲಯಕ್ಕೆ ಬರುವ ಭಕ್ತರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿರುವ ಹಿನ್ನೆಲೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಹುಂಡಿ ಕಾಣಿಕೆ ಮೇಲೂ ಬರದ ಬಿಸಿ ತಟ್ಟಿದೆ.