Ramanagara: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ಚಿರತೆ ದಾಳಿ: ಆಸ್ಪತ್ರೆಗೆ ದಾಖಲು

By Kannadaprabha News  |  First Published Mar 2, 2023, 12:30 AM IST

ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿರುವ ಚಿರತೆ, ಆತನನ್ನು ಗಾಯಗೊಳಿಸಿರುವ ಘಟನೆ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದ ಸಮೀಪದ ಚಿಕ್ಕಬೋರೆಗೌಡನದೊಡ್ಡಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. 


ರಾಮನಗರ (ಮಾ.02): ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿರುವ ಚಿರತೆ, ಆತನನ್ನು ಗಾಯಗೊಳಿಸಿರುವ ಘಟನೆ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದ ಸಮೀಪದ ಚಿಕ್ಕಬೋರೆಗೌಡನದೊಡ್ಡಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗೌತಮ್ ಚಿರತೆ ದಾಳಿಯಿಂದ ಗಾಯಗೊಂಡಿರುವ ಬಾಲಕ. ಈತ 8ನೇ ತರಗತಿ ವಿದ್ಯಾರ್ಥಿಯಾಗಿದ್ದು,  ಮುಷ್ಕರದ ಹಿನ್ನೆಲೆಯಲ್ಲಿ ಶಾಲೆಗೆ ರಜೆಯಿದ್ದ ಕಾರಣ ಮನೆಯ ಮುಂಭಾಗ ಆಟವಾಡುತ್ತಿದ್ದ ಈತನ ಮೇಲೆ ವೇಳೆ ಹಠಾತ್ ದಾಳಿ ನಡೆಸಿ ಚಿರತೆ ಬಾಲಕನನ್ನು ಗಾಯಗೊಳಿಸಿದೆ. 

ಚಿರತೆ ದಾಳಿಯಿಂದ ಯುವಕನ ಕತ್ತು, ಬೆನ್ನಿನ‌ ಮೇಲೆ ಗಾಯಗಳಾಗಿವೆ. ಈತನ ಕಿರುಚಾಟ ಕೇಳಿದ ಅಕ್ಕಪಕ್ಕದ ಮನೆಯವರು ಹೊರಗೆ ಓಡಿಬಂದ ಕಾರಣ, ಚಿರತೆ ಸ್ಥಳದಿಂದ ಪರಾರಿಯಾಗಿದೆ. ಮದ್ದೂರು ತಾಲೂಕಿನ ಚುಂಚಗನಹಳ್ಳಿ ಗ್ರಾಮದ ಬಾಲಕ , ತನ್ನ ದೊಡ್ಡಮ್ಮನ ಮನೆಯಾದ ಚಿಕ್ಕಬೋರೆಗೌಡನದೊಡ್ಡಿ ಗ್ರಾಮದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ. ಸದ್ಯ ಯುವಕನನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Tap to resize

Latest Videos

ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕಿಮ್ಮತ್ತಿಲ್ಲ: ಸಚಿವ ಅಶ್ವತ್ಥ ನಾರಾಯಣ

ಚಿರತೆಯ ಉಪಟಳ: ಹಲವಾರು ದಿನಗಳಿಂದ ಇಗ್ಗಲೂರು ಸಮೀಪದ ಗ್ರಾಮಗಳಲ್ಲಿ ಈ ಚಿರತೆ ಪ್ರತ್ಯಕ್ಷವಾಗುತ್ತಿದೆ. ಮಂಗಳವಾರ ಇಗ್ಗಲೂರು ಗ್ರಾಮದ ಮಹಡಿ ಮನೆಯೊಂದರ ಮೇಲೆ ಈ ಚಿರತೆ ಪ್ರತ್ಯಕ್ಷಗೊಂಡಿತ್ತು. ಅದಕ್ಕೂ‌ ಮೊದಲು ಸೋಗಾಲ, ನೇರಳೂರು ಗ್ರಾಮದಲ್ಲೂ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಡಿಸಿತ್ತು.  ಇದೀಗ, ಹಾಡಹಗಲೇ ಬಾಲಕನ ಮೇಲೆ ದಾಳಿ ಮಾಡಿರುವುದು ಜನತೆಯಲ್ಲಿ ಆತಂಕ‌ ಹುಟ್ಟಿಸಿದ್ದು, ಚಿರತೆಯಿಂದ ಜೀವಹಾನಿಯಾಗುವ ಮೊದಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಜನತೆ ಆಗ್ರಹಿಸಿದ್ದಾರೆ.

ನದಿ ತೀರದ ಜನರಿಗೆ ನಡುಕ ಹುಟ್ಟಿಸಿದ ಚಿರತೆ: ನದಿ ತೀರದ ಬತ್ತದ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು,ಓಡಾಡುವುದನ್ನು ನೋಡಿದ ಜನ ಮೋಬೈಲ್‌ನಲ್ಲಿ ಚಿರತೆಯ ಚಲನವಲನ ಸೆರೆ ಹಿಡಿದ್ದಾರೆ. ತಾಲೂಕಿನ ಮಕರಬ್ಬಿ-ಕೋಟಿಹಾಳು ಗ್ರಾಮದ ಮಧ್ಯೆ ಇರುವ ಮಕರಬ್ಬಿಯ ಹೊಸ ಒಕ್ಕಲ ಶಂಕ್ರಪ್ಪ ಇವರಿಗೆ ಸೇರಿದ ಬತ್ತದ ಗದ್ದೆಯಲ್ಲಿ ಶನಿವಾರ ಸಂಜೆ ಚಿರತೆ ಪ್ರತ್ಯಕ್ಷವಾಗಿದೆ.ಇದರಿಂದ ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರು ಹಾಗೂ ರೈತರು ಈ ಭಾಗದ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಮಕರಬ್ಬಿ-ಕೋಟಿಹಾಳು ಅನತಿ ದೂರದಲ್ಲಿ ತುಂಬಿನಕೆರೆ ಕಾಯ್ದಿಟ್ಟಅರಣ್ಯ ಪ್ರದೇಶವಿದೆ.ಕಾಡು ವಿಸ್ತಾರವಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟುಚಿರತೆಗಳು ವಾಸವಾಗಿವೆ.ಈ ಭಾರಿ ಸಾಕಷ್ಟುಮಳೆಯಾಗಿದ್ದರೂ, ನೀರು ಸಂಗ್ರಹಿಸುವಂತಹ ದೊಡ್ಡ ಪ್ರಮಾಣದ ಕೆರೆ ಕಟ್ಟೆಗಳಿಲ್ಲ, ಜತೆಗೆ ಬೇಸಿಗೆ ಇರುವ ಕಾರಣ ಇದಷ್ಟುನೀರು ಆವಿಯಾಗಿ ಹೋಗಿದೆ.ಇದರಿಂದ ಕಾಡಿನ ವನ್ಯ ಜೀವಿಗಳಿಗೆ ಕುಡಿವ ನೀರಿನ ಸಮಸ್ಯೆ ಎದುರಾಗಿದೆ.ಇದರಿಂದ ಕಾಡು ಬಿಟ್ಟು ವನ್ಯ ಜೀವಿಗಳು ನೀರನ್ನು ಅರಿಸಿ ನಾಡಿನ ಕಡೆಗೆ ಬರುತ್ತಿವೆ ಎನ್ನುತ್ತಾರೆ ರೈತರು.

ಮಾ.3ಕ್ಕೆ ದೇವನಹಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ: ಸಚಿವ ಸುಧಾಕರ್‌

ಕಾಡಿನಂಚಿನ ಜಮೀನುಗಳಲ್ಲಿ ರೈತರು ತಮ್ಮ ಬೆಳೆಗಳಿಗೆ ಹಗಲು ಹೊತ್ತಿನಲ್ಲಿ ಮೋಟಾರ್‌ ಮೂಲಕ ನೀರು ಹಾಯಿಸುವಾಗ ಚಿರತೆ ನೀರು ಕುಡಿಯಲು ಬರುತ್ತಿವೆ. ಗ್ರಾಮದ ಹೊರ ವಲಯದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಕಾರಣ ನಮಗೆ ಭಯ ಕಾಡುತ್ತಿದೆ. ಜತೆಗೆ ಜಾನುವಾರುಗಳು ಮತ್ತು ಕುರಿ ಆಡುಗಳನ್ನು ಹೊರಗಡೆ ಕಟ್ಟಲಾಗುತ್ತಿದೆ.ಆಹಾರ ಅರಿಸಿ ಬಂದು ಜನ ಜಾನುವಾರುಗಳ ಮೇಲೆ ದಾಳಿ ಮಾಡುವ ಭಯ ಎದುರಾಗಿದೆ. ಮಾಗಳ-ಹೊಳಲು ರಸ್ತೆಯಲ್ಲಿ ಸಾಕಷ್ಟುದ್ವಿಚಕ್ರ ವಾಹನ ಸವಾರರು ಭಯದಲ್ಲೇ ಸಂಚರಿಸುವಂತಾಗಿದೆ. ಈ ಹಿಂದೆ ಪಕ್ಕದ ಬನ್ನಿಮಟ್ಟಿಗ್ರಾಮದಲ್ಲಿ ಇಡೀ ದಿನ ಚಿರತೆಯೊಂದು ಮರವೇರಿ ಕುಳಿತ್ತಿತ್ತು.ದಾಳಿ ಮಾಡುವ ಮುನ್ನವೇ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡಿಗೆ ಚಿರತೆಯನ್ನು ಅಟ್ಟುವ ಕೆಲಸ ಮಾಡಿದ್ದರು.ಅದೇ ರೀತಿ ಇಲ್ಲಿಯೂ ಚಿರತೆ ಸೆರೆ ಹಿಡಿಯಲು ಬೋನು ಇಟ್ಟು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

click me!