IAS vs IPS: ಡಿ. ರೂಪಾ ಮತ್ತೊಂದು ಸಂಕಷ್ಟ: ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಿದ ರೋಹಿಣಿ ಸಿಂಧೂರಿ

By Sathish Kumar KH  |  First Published Mar 1, 2023, 4:55 PM IST

ಐಪಿಎಸ್‌ ಡಿ. ರೂಪಾ ವಿರುದ್ಧ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮತ್ತೊಂದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ರೂಪಾ ವಿರುದ್ಧ ನ್ಯಾಯಾಂಗ ನಿಂದನೆ ಆರೋಪವನ್ನು ದಾಖಲಿಸಿದ್ದಾರೆ.

IAS vs IPS Rohini Sindhuri filed a contempt of court case against D Rupa sat

ಬೆಂಗಳೂರು (ಮಾ.01): ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಅಧಿಕಾರಿ ಡಿ. ರೂಪಾ ವಿರುದ್ಧ ಭಾರತೀಯ ನಾಗರಿಕ ಸೇವೆ (ಐಎಎಸ್‌) ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮತ್ತೊಂದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ರೂಪಾ ವಿರುದ್ಧ ನ್ಯಾಯಾಂಗ ನಿಂದನೆ ಆರೋಪವನ್ನು ದಾಖಲು ಮಾಡಿದ್ದಾರೆ.

ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ಅವರ ವಿರುದ್ಧ 20 ಅಂಶಗಳ ಕುರಿತ ಆರೋಪ ಮಾಡಿದ್ದ ಡಿ.ರೂಪಾ ಅವರು ದೇಶದ ವಿವಿಧ ರಾಜ್ಯಗಳ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳಿಗೆ ತಮ್ಮ ಖಾಸಗಿ ಫೋಟೋಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ. ಕುಟುಂಬಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾದರೂ, ಅಧಿಕಾರಿಗಳು ಮಣಿದಿರಲಿಲ್ಲ. 

Tap to resize

Latest Videos

ರೋಹಿಣಿ ವಿರುದ್ಧ ಮತ್ತೆ ರೂಪಾ ಫೇಸ್ಬುಕ್‌ ಪೋಸ್ಟ್‌: ಪತ್ರಿಕೆಯಲ್ಲಿ ಪ್ರಕಟವಾದ ವರದಿ ಲಗತ್ತಿಸಿ ಗರಂ

 

ನಿನ್ನೆ 1 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ: ಇನ್ನು ರೋಹಿಣಿ ಸಿಂಧೂರಿ ಅವರು ಕೋರ್ಟ್‌ ಮೆಟ್ಟಿಲೇರಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಹರಡದಂತೆ ಡಿ.ರೂಪಾ ಮತ್ತು ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದರು. ಜೊತೆಗೆ, ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಎಲ್ಲ ಪೋಸ್ಟ್‌ಗಳನ್ನು ಡಿಲಿಟ್‌ ಮಾಡಿ ಕ್ಷಮೆ ಕೇಳುವಂತೆ ನೋಟಿಸ್‌ ಜಾರಿಗೊಳಿಸಿ, ಇಲ್ಲವಾದಲ್ಲಿ 1 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ, ಇದಕ್ಕೆ ರೂಪಾ ಅವರು ಬಗ್ಗದ ಹಿನ್ನೆಲೆಯಲ್ಲಿ ನಿನ್ನೆ ರೂಪಾ ಅವರ ವಿರುದ್ಧ 1 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್‌ನಲ್ಲಿ ದಾಖಲಿಸಿದ್ದಾರೆ. 

ಕೋರ್ಟ್‌ ತಡೆಯಾಜ್ಞೆ ಇದ್ದರೂ ಫೇಸ್‌ಬುಕ್‌ ಲಿಂಕ್‌ ಶೇರ್‌: ಈಗ ನ್ಯಾಯಾಲಯದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿರುವ ರೋಹಿಣಿ ಸಿಂಧೂರಿ ಅವರು ಡಿ.ರೂಪಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಿದ್ದಾರೆ. ಈ ಕುರಿತು ಕೋರ್ಟ್ ರೋಹಿಣಿ ಸಿಂಧೂರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನ್ಯಾಯಾಲಯದ ಆದೇಶವನ್ನು ಖುದ್ದು ವಕೀಲರೇ ಡಿ.ರೂಪ ಅವರಿಗೆ ತಲುಪಿಸಿದ್ದಾರೆ. ಹ್ಯಾಂಡ್ ಸಮನ್ಸ್ ಅನ್ನು ನೀಡಿದರೂ ತಮ್ಮ ಫೇಸ್ ಬುಕ್ ಫೇಜ್ ಅಲ್ಲಿ ಲಿಂಕ್ ಶೇರ್ ಮಾಡುತ್ತಾ ಇದ್ದಾರೆ ಎಂದು ದೂರು ದಾಖಲಿಸಲಾಗಿದೆ. ರೂಪಾ ಕಾನೂನಿನ ಮೇಲೆ ಗೌರವ ಇಲ್ಲದ ಹಾಗೇ ನಡೆದುಕೊಳ್ಳುತ್ತಾ ಇದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಾ ಇದ್ದಾರೆ. ಹಾಗಾಗಿ ಕಾನೂನು ಕ್ರಮಕೈಗೊಳ್ಳುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ರೂಪಾ ವಿರುದ್ಧ ಸಿಂಧೂರಿ 1 ಕೋಟಿ ರು. ಮಾನನಷ್ಟ ಕೇಸು

ರೋಹಿಣಿ ಪರ ವಕೀಲರಿಂದ ಅರ್ಜಿ ಸಲ್ಲಿಕೆ: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಪರ ವಕೀಲರು ಮೆಯೋಹಾಲ್ ಕೋರ್ಟ್‌ಗೆ ಹಾಜರಾಗಿ ಇಂದು ರೂಪಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯು ನಾಳೆ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಸಿಸಿಹೆಚ್ 74ನೇ ಕೋರ್ಟ್ ನ ನ್ಯಾಯಮೂರ್ತಿ ಗಂಗಣ್ಣವರ್ ಮುಂದೆ ವಿಚಾರಣೆಗೆ ಬರಲಿದೆ.

vuukle one pixel image
click me!
vuukle one pixel image vuukle one pixel image