Hassan: ನಾಟಿ ಕೋಳಿ ತಿನ್ನಲು ಬಂದು ಸೆರೆ ಸಿಕ್ಕ ಚಿರತೆ!

By Govindaraj SFirst Published Oct 3, 2023, 1:46 AM IST
Highlights

ತಾಲೂಕಿನ ದಿಂಡಗೂರು ಸಾತೇನಹಳ್ಳಿ ಗ್ರಾಮದಲ್ಲಿನ ಶಂಕರೇಗೌಡ ಎಂಬುವರಿಗೆ ಸೇರಿದ ನಾಟಿ ಕೋಳಿ ಶೆಡ್‌ನಲ್ಲಿ ನಾಟಿಕೋಳಿಗಳನ್ನು ತಿನ್ನಲು ಬಂದ ಚಿರತೆಯೊಂದು ಹಿಂದುರುಗಿ ಹೋಗಲಾಗದೇ ಶೆಡ್‌ನಲ್ಲೆ ಬಂಧಿಯಾಗಿ ನಂತರ ಅರಣ್ಯ ಇಲಾಖೆ ಬೋನಿಗೆ ಬಿದ್ದ ಘಟನೆ ಸೋಮವಾರ ನಡೆದಿದೆ. 

ಚನ್ನರಾಯಪಟ್ಟಣ (ಅ.03): ತಾಲೂಕಿನ ದಿಂಡಗೂರು ಸಾತೇನಹಳ್ಳಿ ಗ್ರಾಮದಲ್ಲಿನ ಶಂಕರೇಗೌಡ ಎಂಬುವರಿಗೆ ಸೇರಿದ ನಾಟಿ ಕೋಳಿ ಶೆಡ್‌ನಲ್ಲಿ ನಾಟಿಕೋಳಿಗಳನ್ನು ತಿನ್ನಲು ಬಂದ ಚಿರತೆಯೊಂದು ಹಿಂದುರುಗಿ ಹೋಗಲಾಗದೇ ಶೆಡ್‌ನಲ್ಲೆ ಬಂಧಿಯಾಗಿ ನಂತರ ಅರಣ್ಯ ಇಲಾಖೆ ಬೋನಿಗೆ ಬಿದ್ದ ಘಟನೆ ಸೋಮವಾರ ನಡೆದಿದೆ. ಬಯಲು ಸೀಮೆಯಾದ ಚನ್ನರಾಯಪಟ್ಟಣದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದ ವಾತವಾರಣದಲ್ಲಿ ಬದುಕು ನಡೆಸುವ ಸ್ಥಿತಿ ಇದೆ. ದಿಂಡಗೂರು ಸಾತೇನಹಳ್ಳಿಯ ಶಂಕರೇಗೌಡರು ತೋಟದ ಮನೆಯಲ್ಲಿ ವಾಸವಿದ್ದು, ಸ್ಪಲ್ಪದೂರದಲ್ಲಿ ಶೆಡ್‌ ನಿರ್ಮಿಸಿ ನಾಟಿ ಕೋಳಿ ಸಾಕುತ್ತಿದ್ದರು. 

ಆಹಾರ ಹುಡುಕಿ ಬಂದ ಚಿರತೆ ಭಾನುವಾರ ರಾತ್ರಿ ಶೆಡ್‌ಗೆ ನುಗ್ಗಿದೆ. ಮರುದಿನ ಬೆಳಗ್ಗೆ ರೈತ ಶಂಕರೇಗೌಡ ಶೆಡ್‌ ಬಳಿ ಬಂದು ನೋಡಲಾಗಿ ಚಿರತೆ ಶೆಡ್‌ನಲ್ಲಿ ಹೊರಹೋಗಲಾಗದೇ ಒಂದು ಮೂಲೆಯಲ್ಲಿ ಬೀಡುಬಿಟ್ಟಿದೆ. ಶೆಡ್‌ನಲ್ಲಿದ್ದು 100ಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಿದೆ. ಶೆಡ್‌ನ ಸುತ್ತಲ್ಲೂ ಮೆಸ್‌ ಹಾಕಿದ್ದ ಹಿನ್ನೆಲೆಯಲ್ಲಿ ಹೇಗೂ ಒಳ ಬಂದ ಚಿರತೆ ಹೋರಹೋಗಲಾಗಿಲ್ಲ. ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಕಾರ್ಯಪ್ರವೃತ್ತರಾದ ಅವರು, ಬೋನಿಟ್ಟು ಚಿರತೆಯ ಸೆರೆಗೆ ಮುಂದಾಗಿದ್ದಾರೆ. ಶೆಡ್‌ನ ಬಾಗಿಲು ದೊಡ್ಡದಿರುವ ಕಾರಣ, ಇರುವ ಚಿಕ್ಕ ಬೋನ್‌ನ ಬದಲಾಗಿ ದೊಡ್ಡ ಬೋನ್‌ ಇರಿಸಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪಲ್ಲವಿ ತಿಳಿಸಿದರು.

Latest Videos

ಕೊಟ್ಟಿಗೆಗೆ ದಾಳಿ ನಡೆಸಿ ಕುರಿ ಕೊಂದ ಚಿರತೆ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಕುರಿಯ ಮೇಲೆ ಮಧರಾತ್ರಿಯ ವೇಳೆ ಚಿರತೆಯೊಂದು ದಾಳಿ ನಡೆಸಿ ಕೊಂದು ಹಾಕಿರುವ ಬಗ್ಗೆ ವರದಿಯಾಗಿದೆ. ಗರಗಂದೂರು ಮೊರಾರ್ಜಿ ದೇಸಾಯಿ ಪಿಯುಸಿ ವಸತಿ ಕಾಲೇಜಿನ ಬಳಿ ಚಿರತೆಯೊಂದು ಕಾಣಿಸಿದೆ ಎನ್ನಲಾಗಿದೆ. ಉಮ್ಮರ್ ಖಾನ್ ಎಂಬವರಿಗೆ ಸೇರಿದ ಕುರಿಯನ್ನು ಕೊಟ್ಟಿಗೆಗೆ ದಾಳಿ ನಡೆಸಿ ಕೊಂದು ಹಾಕಿದೆ. ಚಿರತೆಯ ದಾಳಿಗೆ ಬೆದರಿದ ಕೊಟ್ಟಿಗೆಯಲ್ಲಿದ್ದ ದನ ಕರುಗಳು ಚೀರಲು ಆರಂಭಿಸಿವೆ. ಕೂಡಲೆ ಚಿರತೆಯು ಅಲ್ಲಿಂದ ಕಾಲ್ಕಿತ್ತಿದೆ.

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಚಿರತೆ ಕಂಡು ಬಂದಿರುವುದರಿಂದ ಮೊರಾರ್ಜಿ ದೇಸಾಯಿ ಪಿಯು ವಸತಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಈ ಭಾಗದ ನಿವಾಸಿಗಳಲ್ಲಿ ಅತಂಕ ಸೃಷ್ಟಿಸಿದೆ. ಕೂಡಲೇ ಚಿರತೆಯನ್ನು ಕಾಡಿಗೆ ಅಟ್ಟುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಘಟನ ಸ್ಥಳಕ್ಕೆ ಅರಣ್ಯಾಧಿಕಾರಿ ಜಗದೀಶ್, ಪಶು ವೈದ್ಯಾಧಿಕಾರಿ ಬಾದಾಮಿ ಭೇಟಿ ನೀಡಿ ಪರಿಶೀಲಿಸಿದರು. ಹರದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಉಪಾಧ್ಯಕ್ಷ ಸಲೀಂ, ಸದಸ್ಯ ರಮೇಶ, ಕಾಂಗ್ರೆಸ್ ಓಬಿಸಿ ಅಧ್ಯಕ್ಷ ಸುಂದರ ಭೇಟಿ ನೀಡಿದರು.

click me!