ಮೊದಲ ಬಾರಿಗೆ ಗ್ರಾಮ ನ್ಯಾಯಾಲಯ ವ್ಯವಸ್ಥೆ ಜಾರಿಗೆ ಸಿದ್ಧತೆ: ಸಿಎಂ ಸಿದ್ದರಾಮಯ್ಯ

By Sathish Kumar KHFirst Published Oct 2, 2023, 3:38 PM IST
Highlights

ಗಾಂಧಿಜೀಯವರ ಕನಸಿನಂತೆ ಗ್ರಾಮ ನ್ಯಾಯಲಯ ವ್ಯವಸ್ಥೆ ಮಾಡಬೇಕು ಎಂಬ ಚಿಂತನೆ ಸರ್ಕಾರಕ್ಕಿದೆ. ಗ್ರಾಮದ ಮೊಕ್ಕದೊಮ್ಮೆ ಅಲ್ಲೇ ಬಗೆಹರಿಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ಅ.02): ಗಾಂಧಿಜೀಯವರ ಕನಸಿನಂತೆ ಗ್ರಾಮ ನ್ಯಾಯಲಯ ವ್ಯವಸ್ಥೆ ಮಾಡಬೇಕು ಎಂಬ ಚಿಂತನೆ ಸರ್ಕಾರಕ್ಕಿದೆ. ಗ್ರಾಮದ ಮೊಕ್ಕದೊಮ್ಮೆ ಅಲ್ಲೇ ಬಗೆಹರಿಬೇಕು. ಗ್ರಾಮ ಪಂಚಾಯತಿ ವ್ಯವಸ್ಥೆ ಬಲವಾದ್ರೆ ದೇಶದ ಬಲವಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಪ್ರತಿಪಾದಿಸಿದರು. ನಾವು ತರುತ್ತಿರೋ ಐದು ಗ್ಯಾರಂಟಿ ಯೋಜನೆ ಹಿಂದೆ ಗಾಂಧಿಜೀಯವರು ಕನಸಿದೆ. ಗ್ರಾಮ ನ್ಯಾಯಲಯ ವ್ಯವಸ್ಥೆ (Karnataka village court system) ಮಾಡಬೇಕು ಎಂಬ ಚಿಂತನೆ ಸರ್ಕಾರಕ್ಕಿದೆ. ಗ್ರಾಮದ ಮೊಕ್ಕದೊಮ್ಮೆ ಅಲ್ಲೇ ಬಗೆಹರಿಬೇಕು. ಗ್ರಾಮ ಪಂಚಾಯತಿ ವ್ಯವಸ್ಥೆ ಬಲವಾದ್ರೆ ದೇಶದ ಬಲವಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಇದೆಲ್ಲ ಏನ್ ಹೊಸದಾಗಿ ಮಾಡ್ತಾರಾ? ಗೃಹ ಸಚಿವ ಪರಮೇಶ್ವರ ಉಡಾಫೆ ಉತ್ತರ!

ನಾನು 78 ರಲ್ಲಿ ತಾಲ್ಲೂಕು ಬೋರ್ಡ್ ಗೆ ಮೆಂಬರ್ ಆಗಿ ಬಂದವನು. ಆಗ ಗ್ರಾಮ ಪಂಚಾಯತಿ ಅಂತ ಇರಲಿಲ್ಲ. ರಾಮಕೃಷ್ಣ ಹೆಗಡೆಯವ ಅವಧಿಯಲ್ಲಿ ಮಂಡಲ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ತಂದರು. ನಂತರ ರಾಜೀವ್ ಗಾಂಧಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದಾರೆ. ನಂತರ ರಾಜ್ಯದಲ್ಲಿ 3 ಹಂತದ ವ್ಯವಸ್ಥೆಯನ್ನ ಜಾರಿಗೆ ತಂದರು. ಮಹಿಳಾ ಮೀಸಲಾತಿ ಮತ್ತು ಹಿಂದುಳಿದ ವರೆಗೆ ಅಲ್ಪಸಂಖ್ಯಾತರಿಗೆ ಮೀಸಲಾತಿ ತಂದರು. ಎಲ್ಲಾರು ಭಾಗ ವಹಿಸಬೇಕು ಅಂತ ರಾಜೀವ್ ಗಾಂಧಿ ತಿದ್ದುಪಡಿ ಮಾಡಿ ಈ ವ್ಯವಸ್ಥೆಯನ್ನ ಕಲ್ಪಿಸಿದರು ಎಂದು ತಿಳಿಸಿದರು.

ರಾಜೀವ್ ಗಾಂಧಿ ತಿದ್ದುಪಡಿ ಮಾಡಿದರೆ, ಪಿ.ವಿ. ನರಸಿಂಹ ರಾವ್ ಜಾರಿಗೆ ತಂದಿದ್ದಾರೆ. ಇದನೆಲ್ಲ ಗ್ರಾಮ ಪಂಚಾಯತಿ ಸದಸ್ಯರು ಅರ್ಥಮಾಡಿಕೊಳ್ಳಬೇಕು. ಈಗ ಪಂಚಾಯತಿಯಲ್ಲಿ ಹಿಂದುಳಿದವರಿಗೆ ಮೀಸಲಾತಿ ಮತ್ತು ಮಹಿಳಾ ಮೀಸಲಾತಿ ಇದೆ ಅಂದ್ರೆ ಅದಕ್ಕೆ ಕಾರಣ ಕಾಂಗ್ರೆಸ್ ಆಗಿದೆ. ಮೊನ್ನೆ ಮಹಿಳೆಯರಿಗೆ ಶೇ. 33 ಮೀಸಲಾತಿ ಜಾರಿಗೆ ತಂದ್ರಲ್ಲ ಅದು ಸಹ ಕಾಂಗ್ರೆಸ್ ದು ಕೂಗಾಗಿತ್ತು. 2010 ರಲ್ಲಿ ಬಿಲ್ ಪಾಸ್ ಆಗಲಿಲ್ಲ. ಈಗ ಕೇಂದ್ರ ಸರ್ಕಾರ ನಾವು ಮಾಡಿದ್ವಿ ಅಂತ ಹೇಳಿಕೊಳ್ಳುತ್ತಿದೆ. ಮಹಿಳಾ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೂಸು ಎಂದು ಹೇಳಿದರು.

ಶಿವಮೊಗ್ಗ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ತಲ್ವಾರ್‌, ಚೂರಿ ಝಳಪಿಸಿದ ಜಿಹಾದಿಗಳು: ವಿಡಿಯೋ ಹರಿಬಿಟ್ಟ ಬಿಜೆಪಿ!

ಕಾನೂನು ಎಲ್ಲರಿಗೂ ಒಂದೇ.: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಶಿವಮೊಗ್ಗ ಗಲಾಟೆ ಬಗ್ಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸರ್ವೆ ಸಾಮಾನ್ಯ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ. ಆದರೆ, ಬೊಮ್ಮಾಯಿ‌ ಸೇರಿ ಯಾರು ಏನ್ ಬೇಕಾದ್ರು ಹೇಳಲಿ. ಯಾರೇ ಆಗಲಿ ಕಾನೂನನ್ನ ಕೈ ತೆಗೆದುಕೊಳ್ಳುವುದಕ್ಕೆ ಬಿಡುವುದಿಲ್ಲ. ಎಲ್ಲರೂ ಶಾಂತಿಯಿಂದ ವರ್ತನೆ ಮಾಡಬೇಕು. ಪ್ರಚೋದನೆ ಮಾಡೋದು, ಕಲ್ಲು ತೂರಾಟ ಮಾಡೋದು, ಬೇರೆಯವರಿಗೆ ಪ್ರಚೋದನೆ ಮಾಡಲು ಆ ರೀತಿ ಬ್ಯಾನರ್ ಹಾಕೋದು ಇಲ್ಲಕ್ಕೂ ಕೂಡ ನಮ್ಮ ಸರ್ಕಾರದಲ್ಲಿ ಅವಕಾಶ ಮಾಡಿಕೊಡಲ್ಲ. ಯಾರೋ ಕಿಡಿಗೇಡಿಗಳು ಮಾಡಬಹುದು ಕಾನೂನು ಎಲ್ಲಿರಿಗೂ ಒಂದೇ ಆಗಿದೆ. ಇದು ಶಾಂತಿಯ ತೋಟ ಆಗಬೇಕು ಎಂದು ತಿಳಿಸಿದರು.

click me!