ಅಡ್ಡ ಬಂದ ಹಂದಿ ರಕ್ಷಿಸಲು ಹೋಗಿ 40 ಸಾವಿರ ಲೀ ಡೀಸೆಲ್ ತುಂಬಿದ್ದ ಟ್ಯಾಂಕರ್ ಸ್ಫೋಟ

By Ravi Janekal  |  First Published Oct 2, 2023, 2:45 PM IST

ರಸ್ತೆ ಮೇಲೆ ಅಡ್ಡ ಬಂದ ಹಂದಿ ರಕ್ಷಿಸಲು ಹೋಗಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡ ಘಟನೆ ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ.


ಕಲಬುರಗಿ (ಅ.2): ರಸ್ತೆ ಮೇಲೆ ಅಡ್ಡ ಬಂದ ಹಂದಿ ರಕ್ಷಿಸಲು ಹೋಗಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡ ಘಟನೆ ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ.

ಅದೃಷ್ಟವಶಾತ್ ದುರ್ಘಟನೆಯಲ್ಲಿ ಯಾವುದೇ ಪ್ರಾಣಾಹಾನಿಯಾಗಿಲ್ಲ. ಅಂದಾಜು ೪೦ ಸಾವಿರ ಲೀಟರ ಡಿಸೇಲ್ ಸಂಗ್ರಹವಿದ್ದ ಟ್ಯಾಂಕರ್. ಮುಂಬೈನಿಂದ ತೆಲಂಗಾಣದ ಕರ್ನೂಲ್‌ಗೆ ಹೊರಟಿದ್ದ ಟ್ಯಾಂಕರ್, ರಸ್ತೆ ಮಧ್ಯೆ ದಿಢೀರ್ ಅಡ್ಡಬಂದ ಹಂದಿ. ಟ್ಯಾಂಕರ್ ಚಕ್ರಕ್ಕೆ ಸಿಲುಕಿ ಸಾಯುವುದನ್ನು ತಪ್ಪಿಸಲು ಯತ್ನಿಸಿರುವ ಚಾಲಕ.

Tap to resize

Latest Videos

undefined

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ

ಅಪಘಾತ ತಪ್ಪಿಸಲು ಯತ್ನಿಸುವ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಪಲ್ಟಿ. ಟ್ಯಾಂಕರ್ ಪಲ್ಟಿಯಾಗ್ತಿದ್ದಂತೆ ಸಾವಿರಾರು ಲೀಟರ್ ಡೀಸೆಲ್ ಸಂಗ್ರಹವಿದ್ದುದರಿಂದ ಬೆಂಕಿಹೊತ್ತಿ ಸ್ಫೋಟಗೊಂಡಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದ ಮೂರು ಅಗ್ನಿಶಾಮಕದಳ ಸಿಬ್ಬಂದಿ, ಸ್ಫೋಟಗೊಂಡಿದ್ದ ಟ್ಯಾಂಕರ್ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

click me!